ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.. ಏನು ಹೇಳಿದರು?

author-image
Bheemappa
Updated On
ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.. ಏನು ಹೇಳಿದರು?
Advertisment
  • ಅನಾರೋಗ್ಯದಿಂದ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ನಟ
  • ಸ್ಯಾಂಡಲ್​ವುಡ್​ನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್
  • ​ಎಕ್ಸ್​ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಪ್ರಧಾನಿ ಸಂತಾಪ

ಬೆಂಗಳೂರು: ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕ, ನಿರ್ದೇಶಕ ಹಾಗೂ ಜನಮೆಚ್ಚಿದ ಹಾಸ್ಯನಟ ಪ್ರಚಂಡ ಕುಳ್ಳ ದ್ವಾರಕೀಶ್ ನಿನ್ನೆ ಅವರ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ನಿನ್ನೆಯಿಂದಲೇ ಚಿತ್ರರಂಗದ ನಟ, ನಟಿಯರು, ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಸಿನಿಮಾ ಕ್ಷೇತ್ರಕ್ಕೆ ಹಿರಿಯ ನಟ ದ್ವಾರಕೀಶ್ ಅವರ ಕೊಡುಗೆ ಅಪಾರ. ಅವರ ಅದ್ಭುತ ಅಭಿನಯವು ದಶಕಗಳ ಕಾಲ ಜನರನ್ನ ರಂಜಿಸಿ ಮನದಲ್ಲಿ ಇನ್ನು ಹಾಗೇ ಉಳಿದಿದೆ. ಸಿನಿಮಾ ಕಡೆಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಯುವ ನಟರಿಗೆ ಬೆಂಬಲ ಕೊಡುವಲ್ಲಿ ದ್ವಾರಕೀಶ್​ ಮೊದಲಿಗರಾಗಿದ್ದರು. ಹೀಗಾಗಿಯೇ ಕನ್ನಡ ಚಿತ್ರರಂಗ ರೂಪಿಸುವಲ್ಲಿ ಅವರ ಬಹುಮುಖಿ ಪಾತ್ರವೂ ಒಂದು. ಸದ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ಸಿನಿಮಾ ರಂಗದಲ್ಲಿ ಅವರ ಅಪೂರ್ವ ಪ್ರಯಾಣವನ್ನು ನಾವು ಸದಾ ಸ್ಮರಿಸುತ್ತೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವಿಟರ್​ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ಸಿಲಿಕಾನ್​ ಸಿಟಿಯ ಈ ಬ್ರಿಡ್ಜ್​ ಮೇಲೆ ಇಂದಿನಿಂದ ಬೈಕ್​ಗಳಿಗೆ ಮಾತ್ರ ಅವಕಾಶ.. ಉಳಿದೆಲ್ಲವೂ ಬ್ಯಾನ್​, ಕಾರಣ?

publive-image

ಇದನ್ನೂ ಓದಿ: ಅಕ್ರಮ ಸಂಬಂಧ.. ಕಾರಿನಲ್ಲಿ ಸಿಕ್ಕಿಬಿದ್ದ ಹೆಂಡತಿ, ಬೇಸ್​ ಬಾಲ್​ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಬಾರಿಸಿದ ಗಂಡ 

ಸ್ಯಾಂಡಲ್​ವುಡ್​ನ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್​ ಅನಾರೋಗ್ಯದಿಂದ ನಿನ್ನೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕಾಗಿ ಅವರ ಮೃತದೇಹವನ್ನು ಇಡಲಾಗಿದ್ದು ಕನ್ನಡ ಸಿನಿಮಾದ ನಟ, ನಟಿಯರು ಹಾಗೂ ಪೋಷಕ ನಟರು ಬಂದು ಅಂತಿಮ ದರ್ಶನ ಮಾಡಿ ತೆರಳುತ್ತಿದ್ದಾರೆ. ಚಾಮರಾಜಪೇಟೆಯ ಟಿಆರ್ ಮಿಲ್​​ನಲ್ಲಿ ಬ್ರಾಹ್ಮಣ ಸಮುದಾಯದ ಸಂಪ್ರದಾಯದಂತೆ ಅಂತಿಮ ಕಾರ್ಯಗಳು ನಡೆಯಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment