ನಾಯಿ ಬೊಗಳಿದ್ದಕ್ಕೆ ಖ್ಯಾತ ನಟಿ ಜೊತೆ ಕೆಲವರಿಂದ ಕಿರಿಕ್ ಆರೋಪ
ಸ್ನೇಹಿತೆ ಜೊತೆ ಇದ್ದಾಗ ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಕ್ಷಮೆ ಕೇಳಿ ಕಾರಿನಲ್ಲಿ ಕುಳಿತರೂ ಕಲ್ಲು ಎತ್ತಿಕೊಂಡು ಬಂದ್ರಾ ಎಂದ ಅನಿತಾ
ಬೆಂಗಳೂರು: ಸ್ನೇಹಿತೆ ಜೊತೆ ನಟಿ ಅನಿತಾ ಭಟ್ ಅವರು ನಾಯಿಯನ್ನು ಹಿಡಿದುಕೊಂಡು ಹೋಗುವಾಗ ಅದು ಬೊಗಳಿದೆ ಎಂದು ಕೆಲವರು ಜಗಳ ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸಂಪಿಗೆಹಳ್ಳಿ ಠಾಣೆಗೆ ಹೋಗಿ ದೂರು ದಾಖಲು ಮಾಡಲು ಮುಂದಾಗಿದ್ದಾರೆ.
ನಗರದ ಜಕ್ಕೂರು ಬಳಿ ತನ್ನ ಸ್ನೇಹಿತೆ ಜೊತೆ ನಾಯಿ ಹಿಡಿದುಕೊಂಡು ಅನಿತಾ ಭಟ್ ಅವರು ಹೋಗುತ್ತಿದ್ದರು. ಈ ವೇಳೆ ನಟಿಯವರ ನಾಯಿ ಬೊಗಳಿದೆ ಎಂದು ಕೆಲವರು ಜಗಳ ತೆಗೆದಿದ್ದಾರೆ. ಹೀಗಾಗಿ ನಟಿ ಮತ್ತು ಸ್ನೇಹಿತೆ ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಆದ್ರೆ ಕ್ಷಮೆ ಕೇಳಿದರು ಜಗಳ ತೆಗೆದ ಕೆಲವರು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ಇಬ್ಬರು ಕಾರಿನಲ್ಲಿ ಕುಳಿತುಕೊಂಡರೂ ಕಲ್ಲು ಎತ್ತಿಕೊಂಡು ಕಾರ್ ಗ್ಲಾಸ್ ಒಡೆಯಲು ಬಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಅನಿತಾ ಭಟ್ ಅವರು ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಲು ಸಂಪಿಗೆಹಳ್ಳಿಯ ಠಾಣೆಗೆ ತೆರಳಿದ್ದಾರೆ. ಅನಿತಾ ಭಟ್ ಅವರು ಕನ್ನಡದ ಡೇಸ್ ಆಫ್ ಬೋರಾಪುರ, ಟಗರು, ಹೊಸ ಕ್ಲೈಮ್ಯಾಕ್ಸ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ