newsfirstkannada.com

ದಿಢೀರ್​ ಆಸ್ಪತ್ರೆಗೆ ದಾಖಲಾದ ಬಿಗ್​ಬಾಸ್​ ಬೆಡಗಿ.. ನಮ್ರತಾ ಗೌಡ ಆರೋಗ್ಯಕ್ಕೆ ಏನಾಯ್ತು?

Share :

Published June 6, 2024 at 8:19pm

Update June 6, 2024 at 8:20pm

  ಬಿಗ್​ಬಾಸ್ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟಿದ್ದರು ನಾಗಿಣಿ ಖ್ಯಾತಿಯ ನಟಿ

  ಶೀಘ್ರದಲ್ಲಿ ಗುಣಮುಖರಾಗಿ ಬನ್ನಿ ನಮ್ರತಾ ಗೌಡ ಎಂದ ಅಭಿಮಾನಿಗಳು

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ನಮ್ರತಾ ಗೌಡ ಫೋಟೋ

ಕಿರುತೆರೆ ನಟಿ, ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್ ಸ್ಪರ್ಧಿಯಾಗಿರೋ​ ಬೆಡಗಿ ನಮ್ರತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಫ್ಯಾನ್ಸ್​ಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಸ್ನೇಹಿತರ ಜೊತೆ ಗೋವಾಗೆ ಹಾರಿದ ನಟಿ ನಮ್ರತಾ ಗೌಡ ಇದೀಗ ಮತ್ತೆ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಈ ವರ್ಷದ 11ನೇ ದುರಂತ: ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವೇನು?

ಹೌದು, ಕಿರುತೆರೆ ನಟಿ ನಮ್ರತಾ ಗೌಡ ಶೇರ್ ಮಾಡಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸದಾ ಒಂದಲ್ಲಾ ಒಂದು ವಿಚಾರಕ್ಕೆ ನಟಿ ನಮ್ರತಾ ಗೌಡ ಸುದ್ದಿಯಲ್ಲಿದ್ದರು. ಆದರೆ ಇದೀಗ ದಿಢೀರ್​ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

ಇನ್ನು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನಮ್ರತಾ ಗೌಡ ಬೆಡ್​​ ಮೇಲೆ ಮಲಗಿಕೊಂಡಿದ್ದಾರೆ. ಅವರ ಪಕ್ಕದಲ್ಲಿ ನಮ್ರತಾ ಗೌಡ ಅವರ ತಾಯಿ ಇದ್ದಾರೆ. ಇದೇ ಫೋಟೋವನ್ನು ಶೇರ್ ಮಾಡಿಕೊಂಡ ನಮ್ರತಾ ಗೌಡ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಈಗ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಇದೇ ಫೋಟೋ ನೋಡಿದ ನೆಟ್ಟಿಗರು ಶೀಘ್ರದಲ್ಲಿ ಗುಣಮುಖರಾಗಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್​ ಆಸ್ಪತ್ರೆಗೆ ದಾಖಲಾದ ಬಿಗ್​ಬಾಸ್​ ಬೆಡಗಿ.. ನಮ್ರತಾ ಗೌಡ ಆರೋಗ್ಯಕ್ಕೆ ಏನಾಯ್ತು?

https://newsfirstlive.com/wp-content/uploads/2024/06/namrutha-gowda2.jpg

Load More