newsfirstkannada.com

ಈ ವರ್ಷದ 11ನೇ ದುರಂತ: ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವೇನು?

Share :

Published June 6, 2024 at 6:04pm

  ನೋಡ ನೋಡುತ್ತಿದ್ದಂತೆ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು

  2024ರ ವರ್ಷದಲ್ಲಿ ಇದುವರೆಗೆ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು

  ವಿದ್ಯಾರ್ಥಿನಿ ಆತ್ಮಹತ್ಯೆಯ ಬಗ್ಗೆ ಪೊಲೀಸ್​ ಅಧಿಕಾರಿಗಳಿಂದ ತನಿಖೆ ಶುರು

ಭೋಪಾಲ್: NEET-UG ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್‌ ಬಂದಿದ್ದಕ್ಕೆ ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ರಾಜಸ್ಥಾನದ ಕೋಟಾದ ಜವಾಹರ್ ನಗರದಲ್ಲಿ ನಡೆದಿದೆ. ಬಾಗೀಶಾ ತಿವಾರಿ (18) ಮೃತ ವಿದ್ಯಾರ್ಥಿನಿ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​​; ಸ್ಟಾರ್​ ನಟನ ಜತೆ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ಮೇಘಾ ಶೆಟ್ಟಿ

ಬಾಗೀಶಾ ತಿವಾರಿ ಎಂಬ ವಿದ್ಯಾರ್ಥಿನಿ ತಾಯಿ ಮತ್ತು ಸಹೋದರನೊಂದಿಗೆ ರಾಜಸ್ಥಾನದ ಕೋಟಾದ ಜವಾಹರ್ ನಗರದಲ್ಲಿ ವಾಸವಾಗಿದ್ದಳು. ಜೊತೆಗೆ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಂತೆ. ಹೀಗೆ ಜೂನ್ 4ರಂದು NEET-UG ಫಲಿತಾಂಶ ಪ್ರಕಟಗೊಂಡಿತ್ತು. ಇನ್ನು ಮೂಲಗಳ ಪ್ರಕಾರ NEET-UG ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು 5 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಕಟ್ಟಡದಿಂದ ಜಿಗಿಯುತ್ತಿರೋ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಧಮ್ ಹೊಡೆಯೋದ್ರಲ್ಲೂ ರಾಜ್ಯದ ಹೆಣ್ಮಕ್ಕಳೇ ಮೇಲುಗೈ; ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

ಇನ್ನು, ವಿದ್ಯಾರ್ಥಿನಿ ಕಟ್ಟಡದಿಂದ ಜಿಗಿದ ಕೂಡಲೇ ಮತ್ತೊಬ್ಬ ಯುವತಿ ಕೆಳಗಡೆ ಓಡಿ ಹೋಗಿದ್ದಾಳೆ. ಆ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಫಲಿಸದೇ ಒಂದು ಗಂಟೆಯ ಬಳಿಕ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೇಸ್​ ಸಂಬಂಧ ಜವಾಹರ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕೋಟಾದಲ್ಲಿ ಈ ವರ್ಷ ಇದುವರೆಗೆ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ನಗರದಲ್ಲಿ 26 ವಿದ್ಯಾರ್ಥಿಗಳು ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವರ್ಷದ 11ನೇ ದುರಂತ: ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವೇನು?

https://newsfirstlive.com/wp-content/uploads/2024/06/death-1-2.jpg

Load More