newsfirstkannada.com

ಧಮ್ ಹೊಡೆಯೋದ್ರಲ್ಲೂ ರಾಜ್ಯದ ಹೆಣ್ಮಕ್ಕಳೇ ಮೇಲುಗೈ; ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

Share :

Published June 6, 2024 at 2:14pm

Update June 6, 2024 at 2:40pm

  2019ರ ವರೆಗೆ ಯುವತಿಯರಲ್ಲಿ ಧೂಮಪಾನ ಪ್ರಮಾಣ ಶೇ.3

  ಧಮ್ ಎಳೆಯುವಲ್ಲಿ ಹದಿಹರೆಯದ ಹುಡುಗಿಯರೇ ದುಪ್ಪಟ್ಟು

  ಹೆಣ್ಣು ಮಕ್ಕಳಲ್ಲಿ ಧೂಮಪಾನ ಪ್ರಮಾಣ ಏರಿಕೆಗೆ ಕಾರಣಗಳು?

ಬೆಂಗಳೂರು: ಎಲ್ಲದರಲ್ಲೂ ಮಹಿಳೆಯರೇ ಸ್ಟ್ರಾಂಗ್.. ಮಹಿಳೆಯರೇ ಸ್ಟ್ರಾಂಗ್ ಎನ್ನುತ್ತಿರುವ ರಾಜ್ಯದಲ್ಲಿ ಇದೀಗ ಧೂಮಪಾನ ಮಾಡುವುದರಲ್ಲೂ ಮಹಿಳೆಯರ ಸಂಖ್ಯೆ ದುಪ್ಪಟ್ಟು ಆಗಿರುವುದು ಆತಂಕ ಮೂಡಿಸಿದೆ. ವರ್ಷದಿಂದ ವರ್ಷಕ್ಕೆ ಧೂಮಪಾನ ಮಾಡುವಲ್ಲಿ ಯುವತಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಉಲ್ಲೇಖ ಮಾಡಿದೆ.

ಇದನ್ನೂ ಓದಿ: ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ

ರಾಜ್ಯದಲ್ಲಿ ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇಕಡಾ 8 ರಷ್ಟು ಹೆಚ್ಚಳವಾಗಿದೆ. ಮಹಿಳೆಯರಲ್ಲಿ ಧೂಮಪಾನ ಮಡುವುದು ದುಪ್ಪಟ್ಟು ಆಗುತ್ತಿರುವ ಬೆನ್ನಲ್ಲೇ ಕ್ಯಾನ್ಸರ್​ ಸಮಸ್ಯೆ ಕೂಡ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆಯಂತಹ ಮಹಾನಗರಗಳಲ್ಲಿ 13 ರಿಂದ 18 ವರ್ಷದೊಳಗಿನ ಯುವತಿಯರು ಧೂಮಪಾನಿಗಳು ಆಗುತ್ತಿದ್ದಾರೆ. ಹದಿಹರೆಯದ ಹುಡುಗಿಯರು ಧೂಮಪಾನಕ್ಕೆ ಒಳಗಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಮೊದಲು ಅಂದರೆ 2019ರಲ್ಲಿ ಯುವತಿಯರಲ್ಲಿ ಧೂಮಪಾನ ಪ್ರಮಾಣ ಶೇಕಡಾ 3 ರಷ್ಟು ಇತ್ತು. ಆದರೆ 2024ರಲ್ಲಿ ಇದು ಶೇಕಡಾ 8ಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿ: ಇನ್ಮುಂದೆ ಹೆಜ್ಜೆ ಹೆಜ್ಜೆಗೂ ಮೋದಿನಾ ಕಾಡುತ್ತಾ INDIA.. ಮಲ್ಲಿಕಾರ್ಜುನ ಖರ್ಗೆ ಹೇಳಿದರ ಹಿಂದಿನ ಗುಟ್ಟೇನು?

ಮಹಿಳೆಯರಲ್ಲಿ ಧೂಮಪಾನ ಪ್ರಮಾಣ ಏರಿಕೆ ಆಗಲು ಹಲವು ಕಾರಣಗಳಿವೆ. ಇದರಲ್ಲಿ ತಮ್ಮ ಉದ್ವೇಗ ತಡೆಯಲು ಹಾಗೂ ಸಮಾಧಾನ ಹೊಂದುವುದಕ್ಕೆ, ಕೆಲಸದ ಒತ್ತಡದ ಜೊತೆಗೆ ಇನ್ನಿತರ ಒತ್ತಡಕ್ಕೆ ಮಣಿದು ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೇ ಫ್ಯಾಶನ್​ಗಾಗಿ ಧಮ್ ಹೊಡೆಯುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಹೇಳುತ್ತಿದೆ ಸರ್ವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಮ್ ಹೊಡೆಯೋದ್ರಲ್ಲೂ ರಾಜ್ಯದ ಹೆಣ್ಮಕ್ಕಳೇ ಮೇಲುಗೈ; ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/06/SMOKING_GIRL.jpg

Load More