newsfirstkannada.com

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡಗೆ ಬಿಗ್ ಶಾಕ್ ಕೊಟ್ಟ ಪೊಲೀಸರು.. ಆಗಿದ್ದೇನು?

Share :

Published May 12, 2024 at 9:23pm

  ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ವೈಷ್ಣವಿ ಗೌಡ

  ಜಯಪ್ರಕಾಶ್ ಎಕ್ಕೂರು ಎಂಬ ಸಾಮಾಜಿಕ ಹೋರಾಟಗಾರರಿಂದ ದೂರು ದಾಖಲು

  ಧಾರಾವಾಹಿಯ ಶೂಟಿಂಗ್​ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ನಟಿ

ಕಿರುರೆತೆ ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದುಕೊಂಡವರು. ಹೊಸ ಹೊಸ ಫೋಟೋ ಶೂಟ್​ ಮಾಡಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರುತ್ತಾರೆ. ಇದೀಗ ತಮ್ಮ‌ ತಪ್ಪಿಲ್ಲದಿದ್ರೂ ಪೊಲೀಸರಿಗೆ ದಂಡ ಕಟ್ಟಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ.

ನಟಿ ವೈಷ್ಣವಿ ಗೌಡ ಅವರು ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಧಾರಾವಾಹಿಯ ಶೂಟಿಂಗ್​ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ನಟಿ ವೈಷ್ಣವಿ ಗೌಡ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ಅಸಲಿಗೆ ಆಗಿದ್ದೇನು..?

ಬೆಂಗಳೂರಿನ ನಂದಿನಿ ಲೇಔಟ್‌ ವ್ಯಾಪ್ತಿಯಲ್ಲಿ ಸೀತಾರಾಮ ಧಾರಾವಾಹಿ ಶೂಟಿಂಗ್​ ನಡೆದಿತ್ತು. ಈ ಶೂಟಿಂಗ್​ನಲ್ಲಿ ನಟಿ ವೈಷ್ಣವಿ ಗೌಡ ಅವರು ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್​ನಲ್ಲಿ ಸಂಚಾರ ಮಾಡಿದ್ದಾರೆ. ಬಳಿಕ ಸೀತಾರಾಮ ಧಾರಾವಾಹಿಯ 14ನೇ ಸಂಚಿಕೆಯಲ್ಲಿ ಈ ಕ್ಲಿಪ್​ ಹಾಕಿದ್ದಾರೆ. ಹೀಗಾಗಿ ಧಾರಾವಾಹಿಯಲ್ಲಿ ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ್ದಾರೆ. ಅಂತ ಜಯಪ್ರಕಾಶ್ ಎಕ್ಕೂರು ಎಂಬುವವರು ಸೆಲೆಬ್ರಿಟಿಯೊಬ್ಬರು ಹೀಗೆ ಮಾಡುವುದರಿಂದ ತಪ್ಪು ಸಂದೇಶ ರವಾನೆ‌ ಮಾಡಿದಂತಾಗುತ್ತೆ ಎಂದು ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ನೀಡಿದ ಜಯಪ್ರಕಾಶ್ ಎಕ್ಕೂರು ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಹೀಗೆ ಸಾಕಷ್ಟು ಜನರು ನೋಡುವ ಈ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ನಟಿ, ಅದಕ್ಕೆ ಕಾರಣರಾದ ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೀಗಾಗಿ ಮುಂದಿನ ವಿಚಾರಣೆಗೆ ಬಮಂಗಳೂರು ಪೊಲೀಸ್​​ ಅಧಿಕಾರಿಗಳು ಈ ಕೇಸ್​ ಅನ್ನು ರಾಜಾಜಿನಗರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು. ಇದರ ಅನ್ವಯ ನಟಿ ಹೆಲ್ಮೆಟ್ ಇಲ್ಲದೇ ಸಂಚಾರ ಮಾಡಿದ ನಟಿ ವೈಷ್ಣವಿ ಗೌಡ ಅವರಿಗೆ ಪೊಲೀಸ್​ ಅಧಿಕಾರಿಗಳು ₹500 ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ ಬೈಕ್​​ ಓನರ್​ ಸವಿತಾ ಎಂಬುವವರಿಗೂ 500 ರೂಪಾತಿ ದಂಡ ವಿಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡಗೆ ಬಿಗ್ ಶಾಕ್ ಕೊಟ್ಟ ಪೊಲೀಸರು.. ಆಗಿದ್ದೇನು?

https://newsfirstlive.com/wp-content/uploads/2024/05/Vaisshnavi-gowda.jpg

Load More