Advertisment

ಕನ್ನಡ್​​ ಅಲ್ಲ ಕನ್ನಡ.. ವೇಗವಾಗಿ ಕನ್ನಡ ಕಲಿಬೇಕಾ? ಬೆಸ್ಟ್​ ಆ್ಯಪ್​ಗಳು ಇಲ್ಲಿವೆ

author-image
AS Harshith
Updated On
ಕನ್ನಡ್​​ ಅಲ್ಲ ಕನ್ನಡ.. ವೇಗವಾಗಿ ಕನ್ನಡ ಕಲಿಬೇಕಾ? ಬೆಸ್ಟ್​ ಆ್ಯಪ್​ಗಳು ಇಲ್ಲಿವೆ
Advertisment
  • ಕನ್ನಡ ಲಿಪಿಯು ಬ್ರಾಹ್ಮಿಲಿಪಿಯಿಂದ ರೂಪುಗೊಂಡಿದೆ
  • ಕನ್ನಡದ ಬರಹದ ಮಾದರಿಗೆ 1500 ವರ್ಷಗಳ ಚರಿತ್ರೆಯಿದೆ
  • ಸುಲಭವಾಗಿ ಕನ್ನಡ ಕಲಿಸಿ ಕೊಡುತ್ತವೆ ಈ ಆ್ಯಪ್​ಗಳು

ಕನ್ನಡ ಭಾರತದ ಪುರಾತನ ಭಾಷೆಗಳಲ್ಲಿ ಒಂದು. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿದೆ. ಕರ್ನಾಟಕದಲ್ಲಿ 7 ಕೋಟಿಗೂ ಅಧಿಕ ಜನರಿದ್ದರೂ ಸಹ 4.5 ಕೋಟಿಯಷ್ಟು ಜನರು ಆಡು ನುಡಿಯಾಗಿ ಕನ್ನಡವನ್ನು ಬಳಸುತ್ತಿದ್ದಾರೆ. ಮತ್ತೊಂದು ಸಂಗತಿ ಎಂದರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಗಳಲ್ಲಿ ಕನ್ನಡ 29ನೇ ಸ್ಥಾನದಲ್ಲಿದೆ.

Advertisment

ಕನ್ನಡ ಲಿಪಿಯು ಬ್ರಾಹ್ಮಿಲಿಪಿಯಿಂದ ರೂಪುಗೊಂಡಿದ್ದು, ಅದರ ಮೂಲಕ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡದ ಬರಹದ ಮಾದರಿಗೆ 1500 ವರ್ಷಗಳ ಚರಿತ್ರೆಯಿದೆ. ಆದರೆ ವಿಪರ್ಯಾಸವೆಂದರೆ ಕನ್ನಡ ಮಾತನಾಡುವವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಬೇರೆ ಭಾಷೆಗಳ ಬಳಕೆ ಹೆಚ್ಚಾಗುತ್ತಿದೆ.

ಅನ್ಯ ರಾಜ್ಯದ ಜನರು ಕೂಡ ಕರ್ನಾಟಕದಲ್ಲಿದ್ದಾರೆ. ಇಲ್ಲೇ ಉದ್ಯೋಗ, ಜೀವನ ನಡೆಸುತ್ತಿದ್ದಾರೆ. ಆದರೆ ಇವರಲ್ಲಿ ಹಲವರು ಕನ್ನಡ ಕಲಿತು ಮಾತನಾಡಿದರೆ, ಇನ್ನುಳಿದವರು ಮಾತನಾಡಲು ಹಿಂಜರಿಯುತ್ತಾರೆ. ಆದರೆ ಅಂತವರಿಗಾಗಿ ಕನ್ನಡವನ್ನು ಸುಲಭವಾಗಿ ಹೇಳಿ ಕೋಡುವ ಆ್ಯಪ್​ಗಳ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ. ಅದರಲ್ಲೂ ವೇಗವಾಗಿ ಕನ್ನಡ ಕಲಿಸುವ ಆ್ಯಪ್​ಗಳು ಇದಾಗಿವೆ. ಈ ಕುರಿತು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Amazon Great Indian Festival Sale​​: ಬರೀ ₹70000ಕ್ಕೆ ಖರೀದಿಸಿ SAMSUNG S23 ಅಲ್ಟ್ರಾ ಸ್ಮಾರ್ಟ್​​ಫೋನ್​

Advertisment

ಕನ್ನಡ ಕಲಿಯಲು ಬೆಸ್ಟ್​ ಎಂಬ ಆ್ಯಪ್​ಗಳ ಪೈಕಿ ಲಿಂಗ್​, ಐಟಾಲ್ಕಿ, 50 ಭಾಷೆ ಎಂಬ ಆ್ಯಪ್ ಕಾಣಿಸಿಕೊಂಡಿದೆ. ಇವು ಶಬ್ಧಕೋಶ, ಉಚ್ಚರಣೆ, ಚಾಟ್​ಬಾಟ್​ ಸಂಭಾಷಣೆ, ಆಡಿಯೋದ ಮೂಲಕ ಅನುಭವವನ್ನು ನೀ​ಡುತ್ತದೆ. ಇದರ ಮೂಲಕ ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ.

ಕನ್ನಡ ಕಲಿಯಲು ಬೆಸ್ಟ್​ ಆ್ಯಪ್​​ಗಳು:

  1. ಲಿಂಗ್​ (Ling)
  2. ಐಟಾಲ್ಕಿ (iTalki)
  3. 50 ಭಾಷೆಗಳು (50 Languages)
  4. ಟಂಡೆಮ್​​ (Tandem)
  5. ಹಿಂದೂಸ್ತಾನಿ ಭಾಷೆ (Hindustani Tongue)
  6. ಕನ್ನಡ ಬರುತ್ತೆ (Kannada Baruthe)
  7. ಸಿಮ್ಲಿ ಲರ್ನ್​ ಕನ್ನಡ (Simply Learn Kannada)
  8. ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment