ಬಿಗ್ಬಾಸ್ನಲ್ಲಿ ವಿನಯ್ ಗೌಡ ಭಾರೀ ಪೈಪೋಟಿ ನೀಡಿದ್ದರು
ಅಪ್ಪ ಇಲ್ಲಿವರೆಗೆ ಬರಲು ಬಿಗ್ಬಾಸ್ ಮನೆಯಲ್ಲಿ ಕಷ್ಟ ಪಟ್ಟರು
ಅಪ್ಪ ಟ್ರೋಫಿ ಗೆದ್ದಿಲ್ಲ ಎಂದರೂ ಜನರ ಮನಸ್ಸು ಗೆದ್ದಿದ್ದಾರೆ- ರಿಷಿ
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್- 10ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿನ್ ಆದ್ರೆ, ಡ್ರೋನ್ ಪ್ರತಾಪ್ 2ನೇ ಸ್ಥಾನ ಪಡೆದುಕೊಂಡರು. ಬಿಗ್ಬಾಸ್ನಲ್ಲಿ ಭಾರೀ ಪೈಪೋಟಿ ನೀಡಿದ್ದ ವಿನಯ್ ಗೌಡ ಟ್ರೋಫಿ ಗೆಲ್ಲುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬಿಗ್ಬಾಸ್ ಮನೆಯಲ್ಲಿ ಅಪ್ಪ ಆಡಿರುವ ಬಗ್ಗೆ ರಿಷಿ ವಿನಯ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ವಿನಯ್ ಗೌಡ ಅವರ ಪುತ್ರ ರಿಷಿ ಅವರು, ಅಪ್ಪ ಆಡಿರುವ ಬಗ್ಗೆ ಚೆನ್ನಾಗಿ ಅನಿಸುತ್ತಿದೆ. ನ್ಯೂ ಫೀಲಿಂಗ್ಸ್, ನ್ಯೂ ಲೈಫ್ ರೀತಿ ಇದೆ. ಅವರು ಇಲ್ಲಿವರೆಗೆ ಬರಲು ಕಷ್ಟ ಪಟ್ಟಿದ್ದಾರೆ. ಅವರು ಗೆದ್ದಿಲ್ಲ ಎಂದರೂ ಜನರ ಮನಸು ಗೆದ್ದಿದ್ದಾರೆ. ಅದೇ ನನಗೆ ತುಂಬಾ ಖುಷಿ ಆಗಿರುವುದು ಎಂದು ಹೇಳಿದರು.
ಬಿಗ್ಬಾಸ್ ಫಿನಾಲೆಯ ದೊಡ್ಡ ಸ್ಟೇಜ್ ಮೇಲೆ ಸುದೀಪ್ ಜೊತೆ ಕಾಣಿಸಿಕೊಂಡಿರುವುದು ಹೇಗೆ ಅನಿಸಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಿ, ಅದಕ್ಕಾಗಿ 3 ದಿನ ಪ್ರಾಕ್ಟೀಸ್ ಮಾಡಿದೆ. ಸ್ಟೇಜ್ ಮೇಲೆ ಮಾಡಿರುವುದು ಅಷ್ಟೇನೂ ತೃಪ್ತಿ ಕೊಟ್ಟಿಲ್ಲ. ಇನ್ನು ಚೆನ್ನಾಗಿ ಮಾಡಬೇಕಿತ್ತು. ಆದರೂ ಮಾಡಿದೆ. ಏನೋ ಚೆನ್ನಾಗಿ ಅನಿಸಿದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ