/newsfirstlive-kannada/media/post_attachments/wp-content/uploads/2024/09/SUDEEP_BIGG_BOSS.jpg)
ಕನ್ನಡದ ಬಿಗ್​ಬಾಸ್ ಸೀಸನ್​ 11ರ ಕುರಿತು ಹೊಸ ಹೊಸ ಅಪ್​ಡೇಟ್​ಗಳು ಹೊರಬೀಳುತ್ತಿವೆ. ಬಿಗ್​​ಬಾಸ್​ ಸುಗ್ಗಿ ಕಾಲ ಆರಂಭವಾದಂತೆ ಆಗಿದೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿದ್ದು ಅಭಿಮಾನಿಗಳು ಕೆಲವೇ ಕೆಲವು ದಿನಗಳು ಕಾಯಬೇಕಾಗಿದೆ ಅಷ್ಟೇ. ಮತ್ತೊಂದು ವಿಡಿಯೋವೊಂದು ವಾಹಿನಿ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್ ಖಡಕ್ ಡೈಲಾಗ್​ಗಳನ್ನು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/09/SUDEEP_BIGG_BOSS_2.jpg)
ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ 11 ಸೀಸನ್​ರಲ್ಲಿ ಮತ್ತೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದು ಶೋ ಅದ್ಭುತವಾಗಿ ಮೂಡಿಬರುವುದರಲ್ಲಿ ಎರಡು ಮಾತಿಲ್ಲ. ಸದ್ಯ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ರಗಡ್ ಸೆಟ್​​ನಲ್ಲಿ ಸ್ಮಾರ್ಟ್​ ಆಗಿ ಕಾಣಿಸಿಕೊಂಡಿದ್ದು ಅಷ್ಟೇ ಗತ್ತಲ್ಲಿ ಕಿಚ್ಚ ಡೈಲಾಗ್​ಗಳನ್ನು ಹೇಳಿದ್ದಾರೆ. ಈ ಸಲದ ಬಿಗ್​ಬಾಸ್​ನ ಹೊಸ ಅಧ್ಯಾಯ ಆರಂಭದ ಸನಿಹ ಕಾಲ. ಅಭಿಮಾನಿಗಳಿಗಾಗಿ ಕಿಚ್ಚ ಹೇಳಿರುವ ಡೈಲಾಗ್ ಹೇಗಿದೆ?.
ಇದನ್ನೂ ಓದಿ:ಬಿಗ್‌ಬಾಸ್ ಫ್ಯಾನ್ಸ್ ಗುಡ್‌ನ್ಯೂಸ್.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್‌ಗೆ ಮುಹೂರ್ತ ಫಿಕ್ಸ್; ಯಾವಾಗ?
/newsfirstlive-kannada/media/post_attachments/wp-content/uploads/2024/09/SUDEEP_BIGG_BOSS_1.jpg)
ಕಿಚ್ಚ ಸುದೀಪ್ ಡೈಲಾಗ್ ಇಲ್ಲಿದೆ!
ಕತ್ತಲು, ನೋವು, ಹಿಂಸೆ, ನರಕ ಸ್ವರ್ಗದಲ್ಲಿ ಇರಬೇಕದವರು ನರಕದಲ್ಲಿ ಇರಬಹುದು. ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು. ಬೆನ್ನಿಗೆ ಚೂರಿ ಹಾಕ್ತಾರೆ ಅಂತ ಅನ್ಕೊಂಡವರು ಮುಂದೆ ಹೋಗಿ ನಿಮ್ಮ ಸ್ನೇಹಿತರು ಆಗಬಹುದು. ಸ್ನೇಹಿತರಾಗಿರುತ್ತಾರೆ ಅನ್ಕೊಂಡವರು ಮುಂದೆ ಹೋಗಿ..? ಇದು ಬಿಗ್​ ಬಾಸ್​ನ ಹೊಸ ಅಧ್ಯಾಯ. ಸ್ವರ್ಗ, ನರಕ ಎರಡು ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ ಎಂದು ಸುದೀಪ್ ಹೇಳಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us