ಕೊನೆಗೂ ಸಿರಿಜಾಗೆ ಕೂಡಿ ಬಂತು ಕಂಕಣ ಭಾಗ್ಯ
ಆಗೋಯ್ತು ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯ ಮದುವೆ
ಹುಡುಗ ಯಾರು ಗೊತ್ತಾ? ಕೆಲಸ ಏನು ಗೊತ್ತಾ? ಇಲ್ಲಿದೆ ಮಾಹಿತಿ
ಒಂದೆಡೆ ದರ್ಶನ್ ಮತ್ತು ಟೀಂ ಮಾಡಿರೋ ಮರ್ಡರ್ ಕೇಸ್, ಮತ್ತೊಂದೆಡೆ ಸ್ಟಾರ್ ನಟರ ಡಿವೋರ್ಸ್ ಪ್ರಕರಣ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನ ಜೊತೆ ಜೊತೆಗೆ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ಸಿರಿ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ.
ಹೌದು. ಹಲವು ಸಿನಿಮಾ, ಸೀರಿಯಲ್ನಲ್ಲಿ ನಟಿಸಿ ಗುರುತಿಸಿಕೊಂಡಿರುವ ಸಿರಿಜಾ ಈ ಬಾರಿ ಬಿಗ್ ಸೀಸನ್ನ ಸ್ಪರ್ಧಿಯಾಗಿಯೂ ಗುರುತಿಸಿಕೊಂಡಿದ್ದರು. ದೊಡ್ಮನೆಯಲ್ಲಿ ತಾನು ಮದುವೆಯಾಗುವ ಬಗ್ಗೆಯೂ ಮಾತನಾಡಿಕೊಂಡಿದ್ದರು. ಆದರಂತೆಯೇ ಇದೀಗ ನಟಿ ಸಿಂಪಲ್ಲಾಗಿ ವಿವಾಹವಾಗಿದ್ದಾರೆ.
ಸಿರಿ ಕೈ ಹಿಡಿ ಹುಡುಗ ಯಾರು?
ನಟಿ ಸಿರಿಯವರು ಪ್ರಭಾಕರ್ ಬೋರೇಗೌಡ ಎಂಬುವರನ್ನು ವಿವಾಹವಾಗಿದ್ದಾರೆ. ಕುಟುಂಬ ಸಮ್ಮುಖದೊಂದಿಗೆ ಹಸೆಮಣೆ ಏರಿದ್ದಾರೆ. ಅಂದಹಾಗೆಯೇ ವರ ಮಂಡ್ಯ ಮೂಲದವರಾಗಿದ್ದು, ಎಂಜಿನಿಯರ್ ಕಮ್ ಬ್ಯುಸಿನೆಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ.
ಪ್ರಭಾಕರ್ ಫ್ಯಾಮಿಲಿ ಜೊತೆಗೆ ಬೆಂಗಳೂರಿನಲ್ಲಿಯೇ ವಾಸವಿದ್ದಾರೆ. ಅಂದಹಾಗೆಯೇ ಈ ಜೋಡಿ ನಿನ್ನೆ ಬೆಳಗ್ಗೆ ನಂದಿ ಟೆಂಪಲ್ ನಲ್ಲಿ ವಿವಾಹವಾಗಿದ್ದಾರೆ. ಸದ್ಯ ಈ ಜೋಡಿಯ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ