2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ್ನಾ ನೇತ್ರಾವತಿ ಸೀರಿಯಲ್ ನಟ?
ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ನಟ ಸನ್ನಿ ಮಹಿಪಾಲ್
ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲು
ಕನ್ನಡ ಕಿರುತೆರೆ ನಟ ಹಾಗೂ ನಟಿಯರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಿದ್ದಾರೆ. ಈಗ ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ನಟಿಸುತ್ತಿರೋ ನಟ ಸನ್ನಿ ಮಹಿಪಾಲ್ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಇದನ್ನೂ ಓದಿ: 2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು
ಕನ್ನಡದ ನೇತ್ರಾವತಿ ಸೀರಿಯಲ್ ನಟ ಸನ್ನಿ ಮಹಿಪಾಲ್ ಈಗಾಗಲೇ ಮದುವೆ ಆಗಿದ್ದರೂ ಈಗ ಮತ್ತೊಂದು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರೋ ಆರೋಪ ಕೇಳಿ ಬಂದಿದೆ. ನಿಶ್ಚಿತಾರ್ಥ ಮಾಡಿಕೊಂಡಿರೋ ಯುವತಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗರ್ಭಿಣಿ ಪತ್ನಿಗೆ ಥಳಿಸಿದ್ದಾರಂತೆ. ಗರ್ಭಿಣಿ ಪತ್ನಿಯ ಎಡಗೈಗೆ ನಟ ಸನ್ನಿ ಚಾಕು ಇರಿದ ಪರಿಣಾಮ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ನಟ ಸನ್ನಿ ಮಹಿಪಾಲ್ಗೆ ಯುವತಿ ಪರಿಚಯ ಆಗಿದ್ದೇಗೆ?
2024 ಜನವರಿಯಲ್ಲಿ ಯುವತಿಯೊಂದಿಗೆ ಮಹಿಪಾಲ್ ಪರಿಚಯ ಮಾಡಿಕೊಂಡಿದ್ದಾರೆ. ಹೀಗೆ ಈ ಇಬ್ಬರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಶುರುವಾಗಿದೆ. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿದೆ. ಆಗ ನಟ ಮಹಿಪಾಲ್ ಮದುವೆಯಾಗೋದಾಗಿ ನಂಬಿಸಿ ಯುವತಿ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಅನ್ನೋ ಆರೋಪವಿದೆ. ಇದಾದ ನಂತರ ಜೂನ್ 15ರಂದು ಮಹಿಪಾಲ್ ಯುವತಿ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ಆದರೆ ಮದುವೆಯಾದರು ಈ ಇಬ್ಬರು ಒಟ್ಟಿಗೆ ಇರಲಿಲ್ಲವಂತೆ. ನಮ್ಮ ಪೋಷಕರನ್ನ ಒಪ್ಪಿಸಿ ಬರ್ತೀನಿ ಎಂದು ನಟ ಸನ್ನಿ ಮಹಿಪಾಲ್ ಯುವತಿಗೆ ಹೇಳಿದ್ದನಂತೆ. ಅಲ್ಲದೇ ಸ್ನೇಹಿತರ ರೀತಿಯೇ ಇರಬೇಕು. ಸ್ನೇಹಿತರಂತೆಯೇ ಮೆಸೇಜ್ ಮಾಡ್ಬೇಕು ಎಂದು ಕಂಡೀಷನ್ ಹಾಕಿದ್ದರಂತೆ. ಪತಿ ಹೇಳಿದ ಹಾಗೇ ಪತ್ನಿ ನಡೆದುಕೊಂಡಿದ್ದಳಂತೆ. ಅದಾಗಲೇ ಕೆಲ ದಿನದ ಹಿಂದೆ ಬೇರೆ ಯುವತಿ ಜೊತೆಗೆ ಈ ನಟ ಸನ್ನಿ ನಿಶ್ಚಿತಾರ್ಥ ಆಗಿದ್ದನಂತೆ. ಈ ವಿಚಾರ ತಿಳಿದ ಕೂಡಲೇ ಇದನ್ನು ಪ್ರಶ್ನಿಸಲು ನಿನ್ನೆ ರಾತ್ರಿ 9.30ರ ಸುಮಾರಿಗೆ ವಿಜ್ಞಾನ ನಗರದಲ್ಲಿರೋ ಮಹಿಪಾಲ್ ಮನೆಗೆ ಹೋಗಿದ್ದರಂತೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದೇ ಕೋಪದಲ್ಲಿ ಪತ್ನಿ ಮೇಲೆ ನಟ ಚಾಕುವಿನಿಂದ ತೋಳಿಗೆ ಇರಿದಿದ್ದಾನಂತೆ. ಆದರೆ ಈ ಗಲಾಟೆಯಲ್ಲಿ ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿದೆ ಎಂದು ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ