ರೋಡಿಸ್ ಶೋ ಮೂಲಕ ಸಖತ್ ಫೇಮಸ್ ಆಗಿದ್ದ ನಂದು ಮತ್ತು ಜಶ್ವಂತ್
ನಂದು ಹಾಗೂ ಜಶ್ವಂತ್ ಜೋಡಿಯನ್ನು ಇಷ್ಟಪಟ್ಟಿದ್ದ ಸಾಕಷ್ಟು ಅಭಿಮಾನಿಗಳು
ಇನ್ಸ್ಟಾ ಖಾತೆಯಲ್ಲಿ ತಮ್ಮಿಬ್ಬರಿಗೂ ಬ್ರೇಕಪ್ ಬಗ್ಗೆ ಮಾಹಿತಿ ನೀಡಿದ್ದ ನಂದು
ನಂದು ಹಾಗೂ ಜಶ್ವಂತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರೋಡಿಸ್ ಶೋ ಮೂಲಕ ಫೇಮಸ್ ಆಗಿದ್ದ ನಂದು ಮತ್ತು ಜಶ್ವಂತ್ ಪ್ರೇಮ ಪಕ್ಷಿಗಳಾಗಿ ಕನ್ನಡ ಬಿಗ್ಬಾಸ್ ಒಟಿಟಿ ಸೀಸನ್ 1ಕ್ಕೆ ಕಾಲಿಟ್ಟಿದ್ದರು. ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಇಬ್ಬರು ಲವ್ ಬರ್ಡ್ಸ್ ಆಗಿಯೇ ಸಖತ್ ಹೈಲೈಟ್ ಆಗಿದ್ದರು. ಇನ್ನು ಈ ಇಬ್ಬರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೆಲವು ದಿನಗಳ ನಂತರ ಗಲಾಟೆ ಮಾಡಿಕೊಳ್ಳಲು ಶುರು ಮಾಡಿಕೊಂಡಿದ್ದರು.
ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!
ಆದರೆ ಈ ಇಬ್ಬರು ಕೂಡ ತಮ್ಮ ಲವ್ ಬ್ರೇಕ್ ಮಾಡಿಕೊಳ್ಳುತ್ತಾರೆ ಅಂತ ಯಾರೂ ಸಹ ಉಹಿಸಿರಲಿಲ್ಲ. ಆದರೆ ಬಿಗ್ಬಾಸ್ ಮನೆಯಿಂದ ಆಚೆ ಬಂದ ಬಳಿಕ ಈ ಇಬ್ಬರು ತಮ್ಮ ಪ್ರೀತಿಗೆ ಗುಡ್ ಬೈ ಹೇಳಿದ್ದರು. ಈ ಬಗ್ಗೆ ಖುದ್ದು ಬಿಗ್ಬಾಸ್ ಒಟಿಟಿ ಸ್ಪರ್ಧಿ ನಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮಿಬ್ಬರಿಗೂ ಬ್ರೇಕಪ್ ಆಗಿದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ಜಶ್ವಂತ ಸ್ಷಷ್ಟನೆ ಕೊಟ್ಟಿರಲಿಲ್ಲ. ಇದಾದ ಬಳಿಕ ಜಶ್ವಂತ್ ಸದ್ಯ ಆಕೃತಿ ಎಂಬ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.
ಹೌದು, ಜಶ್ವಂತ್ ಅವರು ಸದ್ಯ MTV Splitsvilla X5 ಎಂಬ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋನಲ್ಲಿ ಜಶ್ವಂತ್ ಅವರ ಜೊತೆಯಾಗಿ ಆಕೃತಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನು ಈ ಇಬ್ಬರು ಬಹಳ ಆತ್ಮೀಯವಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಇಬ್ಬರ ಫೋಟೋಗಳು ಹಾಗೂ ರೀಲ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್
ಇನ್ನು, ವೈರಲ್ ಆದ ವಿಡಿಯೋಗೆ ನಂದು ಅವರು ಕಾಮೆಂಟ್ ಮಾಡಿದ್ದಾರೆ. ಈ ಇಬ್ಬರೂ ಜೋಡಿ ಬಹಳ ಸುಂದರವಾಗಿದೆ ಅಂತ ಕಾಮೆಂಟ್ ಮಾಡಿ ಸಪೋರ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಂದು ಕಾಮೆಂಟ್ಗೆ 9,832 ಜನ ಲೈಕ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಜಶ್ವಂತ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ನೀವು ನಂದು ಅಂತಹ ಒಳ್ಳೆಯ ಹುಡುಗಿಯನ್ನು ಮಿಸ್ ಮಾಡಿಕೊಂಡಿದ್ದೀರಿ, ನಂದುಗಿಂತ ಒಳ್ಳೆ ಜೋಡಿ ನಿಮಗೆ ಸಿಗುವುದಿಲ್ಲ. ನಾನು ನೋಡಿದ ಅತ್ಯಂತ ಕರುಣಾಮಯಿ ವ್ಯಕ್ತಿ ಅಂದರೆ ಅದು ನಂದು ಮಾತ್ರ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ