newsfirstkannada.com

ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

Share :

Published September 5, 2024 at 4:12pm

Update September 5, 2024 at 4:14pm

    ನನಗೆ ತೊಂದರೆ ಆದಾಗ ನಾನು ಎದೆ ತೋರಿಸಿ ಹೋರಾಡಿದ್ದೇನೆ

    ಮಾನವೀಯತೆಯಿಂದ‌ ನೋಡಿದಾಗ ಅಲ್ಲಿ ಆಗಿದ್ದು ತಪ್ಪು ಆಗುತ್ತೆ

    ಜೈಲಿನಲ್ಲಿನ ದರ್ಶನ್ ಕುರಿತು ನಿರ್ಮಾಪಕ ಉಮಾಪತಿ ಏನಂದ್ರು?

ಬೆಂಗಳೂರು: ನಟ ದರ್ಶನ್ ಅವರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪ್ರಕರಣ ಸಂಬಂಧ ಚಾರ್ಜ್​​ಶೀಟ್​​ನಲ್ಲೂ ದರ್ಶನ್ ವಿರುದ್ಧವೇ ಸಾಕ್ಷಿಗಳು ಇರುವುದು ಗೊತ್ತಾಗಿದೆ. ಘಟನೆ ನಡೆಯುವಾಗಿನ ಕೆಲ ಫೋಟೋಗಳು ಕೂಡ ವೈರಲ್​ ಆಗಿವೆ. ಈ ಎಲ್ಲ ಬೆಳವಣಿಗೆಯ ನಡುವೆ ನಿರ್ಮಾಪಕ ಉಮಾಪತಿಗೌಡ ಅವರು ದರ್ಶನ್ ಕುರಿತು ಚಾರ್ಜ್​​ಶೀಟ್ ರೆಡಿಯಾಗಿದೆ. ಕೋರ್ಟ್​​ನಿಂದ ತೀರ್ಮಾನ ಆಗಲಿ, ಸುಮ್ಮನೆ ಕಮೆಂಟ್ ಮಾಡುವುದು ಬೇಡ ಎಂದಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಸೀಸನ್‌ 11ಕ್ಕೆ ಕಿಚ್ಚ ಸುದೀಪ್‌ ಆ್ಯಂಕರಿಂಗ್ ಮಾಡ್ತಾರೋ, ಇಲ್ವೋ? ಇಲ್ಲಿದೆ ಪಕ್ಕಾ ಮಾಹಿತಿ!

ಬೆಂಗಳೂರಿನಲ್ಲಿ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ನಿರ್ಮಾಪಕ ಉಮಾಪತಿ ಗೌಡ ಅವರು, ಮಾನವೀಯತೆಯಿಂದ‌ ನೋಡೋದಾದ್ರೆ ಖಂಡಿತವಾಗಲೂ ಆಗಿರೋದು ತಪ್ಪು. ಒಬ್ಬ ವ್ಯಕ್ತಿ ಮೇಲೆ ಆರೋಪ ಮಾಡುತ್ತಿಲ್ಲ. ಸಮಯ, ಸಂದರ್ಭ ಅಲ್ಲಿ ಏನು ಮಾಡಿಸಿತು ಎಂಬುದು ನಮಗೂ ಗೊತ್ತಿಲ್ಲ. ಪೊಲೀಸರು ತನಿಖೆ ಮಾಡಿ, ಸುಮಾರು 4 ಸಾವಿರ ಪುಟದಷ್ಟು ಚಾರ್ಜ್​​ಶೀಟ್​ ಸಿದ್ಧ ಪಡಿಸಿದ್ದಾರೆ. ಸತ್ಯಾಸತ್ಯತೆಗಳು ಕಾನೂನಿಯ ದೃಷ್ಟಿಯಲ್ಲಿ ನಿರ್ಧಾರ ಆಗುತ್ತವೆ. ಅದಕ್ಕೂ ಮೊದಲೇ ನಾವು ಕಮೆಂಟ್ ಮಾಡೋದು ಬೇಡ. ಅದರಿಂದ ನಾವು ಗಳಿಸುವುದು ಏನು ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ಯಾವತ್ತೂ ನನಗೆ ತೊಂದರೆ ಆದಗ್ಲೂ ಇನ್ನೊಬ್ಬರ ಭುಜದ ಮೇಲೆ ಗನ್​ ಇಟ್ಟು ಹೊಡೆಯೋ ಬದಲು ನೇರವಾಗಿ ಫೇಸ್ ಮಾಡಿದ್ದೀನಿ. ಸಮಸ್ಯೆ ಆದಾಗ ಎದೆ ತೋರಿಸಿ ಎದುರಿಸುತ್ತೇನೆ ಹೊರತು ಬೆನ್ನು ತೋರಿಸಿ ಓಡಿ ಹೋಗಲ್ಲ. ಕಲಾವಿದರಾಗಲಿ, ರಾಜಕಾರಣಿಯಾಗಲಿ, ಉನ್ನತ ಸ್ಥಾನದ ವ್ಯಕ್ತಿಗಳು ಆಗಲಿ ಅವರಿಗೆ ಅವರದ್ದೆ ಆದ ನೋವುಗಳು ಇರುತ್ತವೆ. ಅವುಗಳನ್ನು ವ್ಯಕ್ತಪಡಿಸುವುದಕ್ಕೆ, ಅದನ್ನು ಪ್ರತೀಕಾರವಾಗಿ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ ಎಂದರು.

ನನ್ನ ಬಗ್ಗೆ ಬೇರೆಯವರು ಕಮೆಂಟ್ ಮಾಡಿದರು. ನಾನೇನು ಮಾಡಿದೆ?. ಒಂದೇ ಒಂದು ಕಂಪ್ಲೇಟ್​. ಎ4 ಶೀಟ್​ ಹಾಳೆ, ಪೆನ್ನು ಇದರಲ್ಲಿ ದೂರು ಕೊಟ್ಟೆ. ಇದಕ್ಕೆ ಖರ್ಚು ಆಗಿದ್ದು ಒಂದೆರಡು ರೂಪಾಯಿ ಅಷ್ಟೇ. ದೂರು ಕೊಟ್ಟೆ. ನನಗೆ ನ್ಯಾಯಯುತವಾಗಿ ನ್ಯಾಯ ಸಿಕ್ಕಿತು. ಅದು ಇನ್ನಷ್ಟು ಜನರಿಗೆ ಎಚ್ಚರಿಕೆ ಕೂಡ ಆಯಿತು ಎಂದು ನಿರ್ಮಾಪಕ ಉಮಾಪತಿ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

https://newsfirstlive.com/wp-content/uploads/2024/09/UMAPATI_DARSHAN_1.jpg

Load More