newsfirstkannada.com

ಸೋನು ಬೆನ್ನಿಗೆ ನಿಂತ ಜೀವದ ಗೆಳೆಯ.. ಜೈಲಿಗೆ ಭೇಟಿ ನೀಡಿ ರಾಕೇಶ್ ಅಡಿಗ ಹೇಳಿದ್ದೇನು? ಬೇಲ್ ಸಿಗುತ್ತಾ?

Share :

Published April 1, 2024 at 4:33pm

Update April 1, 2024 at 5:13pm

  ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಸೋನುಗೆ ಸಂಕಷ್ಟ

  ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ರಾಕೇಶ್ ಅಡಿಗ

  ಟ್ರೋಲ್‌ಗಳಿಗೆ ಕೌಂಟರ್‌ ಕೊಡಲು ಸೋನು ಅಪಾಯದಲ್ಲಿ ಸಿಕ್ಕಿಬಿದ್ರಾ?

ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಬಿಗ್‌ಬಾಸ್‌ ಸ್ಪರ್ಧಿ ಸೋನುಗೌಡ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಸೋನುಗೌಡ ಅವರಿಗೆ ಜೈಲಾ, ಬೇಲಾ ಅನ್ನೋದು ನಾಳೆ ನಿರ್ಧಾರವಾಗಲಿದೆ. ಜಾಮೀನನ್ನೇ ಎದುರು ನೋಡ್ತಿರುವ ಸೋನು ಗೌಡ ಅವರ ಬೆಂಬಲಕ್ಕೆ ಬಿಗ್‌ಬಾಸ್ OTT ಸ್ಪರ್ಧಿ ಹಾಗೂ ಸೋನು ಆತ್ಮೀಯ ಗೆಳೆಯ ರಾಕೇಶ್ ಅಡಿಗ ಅವರು ನಿಂತಿದ್ದಾರೆ.

ಮಗು ಜೊತೆ ರೀಲ್ಸ್‌ ಮಾಡಿ ಫಜೀತಿಗೆ ಸಿಲುಕಿರುವ ಸೋನು ಗೌಡ ಅವರ ಮೇಲೆ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ದೂರು ದಾಖಲಿಸಿದ್ದರು. ಬ್ಯಾಡರಹಳ್ಳಿ ಪೊಲೀಸರು ಈ ಸಂಬಂಧ ಕೇಸ್ ಹಾಕಿ ಸೋನುಗೌಡ ಅವರನ್ನು ಬಂಧಿಸಿದ್ದರು. ಕಳೆದ ವಾರ 4 ದಿನದ ವಿಚಾರಣೆ ಎದುರಿಸಿದ ಸೋನುಗೌಡ ಅವರಿಗೆ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಸೋನುಗೌಡಗೆ ಪರಪ್ಪನ ಅಗ್ರಹಾರ ಜೈಲಿನಿಂದ ಮುಕ್ತಿ ಸಿಗುತ್ತಾ.. ರೀಲ್ಸ್​ ರಾಣಿಗೆ ರಿಲೀಫ್ ಯಾವಾಗ?

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಸೋನುಗೌಡ ಅವರನ್ನು ಅವರ ಆಪ್ತ ಸ್ನೇಹಿತ ರಾಕೇಶ್ ಅಡಿಗ ಭೇಟಿ ಮಾಡಿದ್ದಾರೆ. ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ನಡೆದ ವಿಚಾರಣೆ ಬಗ್ಗೆ ಸೋನು ಜೊತೆ ರಾಕೇಶ್ ಅಡಿಗ ಚರ್ಚಿಸಿದ್ದಾರೆ. ನಾನು ಟ್ರೋಲ್ ಅವರಿಗೆ ಕೌಂಟರ್‌ ಕೊಡಲು ರೀಲ್ಸ್‌ ಮಾಡಿದ್ದೆ. ಆದರೆ ಅದೇ ರೀಲ್ಸ್ ನನಗೆ ತಿರುಗುಬಾಣವಾಗಿದೆ ಎಂದು ರಾಹುಲ್ ಮುಂದೆ ಸೋನು ಹೇಳಿದ್ದಾರೆ.

ಜೈಲಿಗೆ ಭೇಟಿ ಕೊಟ್ಟ ರಾಕೇಶ್ ಅಡಿಗ ಅವರು ಸೋನುಗೌಡ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ನಾಳೆ ಸೋನುಗೌಡ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಸೋನುಗೌಡ ಅವರಿಗೆ ಬೇಲ್ ಕೊಡಿಸಲು ರಾಕೇಶ್ ಅಡಿಗ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ನಾಳಿನ ಕೋರ್ಟ್‌ ವಿಚಾರಣೆಯಲ್ಲಿ ಸೋನುಗೆ ಜೈಲಾ? ಬೇಲಾ ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನು ಬೆನ್ನಿಗೆ ನಿಂತ ಜೀವದ ಗೆಳೆಯ.. ಜೈಲಿಗೆ ಭೇಟಿ ನೀಡಿ ರಾಕೇಶ್ ಅಡಿಗ ಹೇಳಿದ್ದೇನು? ಬೇಲ್ ಸಿಗುತ್ತಾ?

https://newsfirstlive.com/wp-content/uploads/2024/04/Sonu-Srinivas-gowda-Rakesh-Adiga.jpg

Load More