ರಾತ್ರೋರಾತ್ರಿ ಮಗು ಕರ್ಕೊಂಡು ಹೋಗಿದ್ದ ಸೋನುಗೌಡ.. ಬಾಲಕಿ ಊರಲ್ಲಿ ಅಸಲಿ ವಿಷಯ ಬಯಲು

author-image
admin
Updated On
ಜೈಲಿಂದ ರಿಲೀಸಾದ ಮೇಲೆ ಖಿನ್ನತೆಗೆ ಒಳಗಾದ್ರಾ ಸೋನು ಗೌಡ? ಸೆರೆವಾಸದ ಅನುಭವ ಬಿಚ್ಚಿಟ್ಟ ರೀಲ್ಸ್​ ರಾಣಿ!
Advertisment
  • ಪೊಲೀಸರು ಎಳೆದೊಯ್ಯುವಾಗ ಸೋನುಗೌಡ ಅವರ ಕಣ್ಣಲ್ಲಿ ನೀರು
  • ಏನೂ ಮಾತಾಡದೆ ಕಳ್ಳತನ ಮಾಡಿರೋ ಹಾಗೇ ಓಡಿ ಹೋಗೋದ್ಯಾಕೆ
  • ಪೊಲೀಸ್‌, ಸೋನುಗೌಡ ಅವರ ನಡೆಗೆ ಕಾಚಾಪುರ ಗ್ರಾಮಸ್ಥರ ಆಕ್ರೋಶ

ರಾಯಚೂರು: ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನುಗೌಡಗೆ ಸಾಲು, ಸಾಲು ಸಂಕಷ್ಟ ಶುರುವಾಗಿದೆ. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಇಂದು ಆರೋಪಿ ಸೋನುಗೌಡ ಅವರನ್ನ ಮಸ್ಕಿ ತಾಲೂಕಿನ ಕಾಚಾಪುರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ.

ಸೋನುಗೌಡ ಜೊತೆಗಿದ್ದ ಮಗು ಕಾಚಾಪುರ ಗ್ರಾಮದಲ್ಲಿತ್ತು. ಹೀಗಾಗಿ ಬೆಂಗಳೂರಿನ ಬ್ಯಾಡರಳ್ಳಿ ಠಾಣಾ ಪೊಲೀಸರ ತಂಡ ಕಾಚಾಪುರ ಗ್ರಾಮಕ್ಕೆ ಆಗಮಿಸಿದೆ. ಸ್ಥಳ‌ ಮಹಜರುಗೆ ಆಗಮಿಸಿದ 3 ಪೊಲೀಸರ ತಂಡ ಸೋನು ಗೌಡ ಅವರನ್ನು ಧರಧರನೇ ಎಳೆದೊಯ್ದಿದೆ. ಪೊಲೀಸರು ಎಳೆದೊಯ್ಯುವಾಗ ಸೋನುಗೌಡ ಅವರ ಕಣ್ಣಲ್ಲಿ ನೀರು ಬಂದಿದೆ. ಸೋನುಗೌಡ ಬರೋದನ್ನ ಕಾದು ಕುಳಿತ್ತಿದ್ದ ಬಾಲಕಿ ಅಣ್ಣ, ಸೋನುಗೌಡ ಅವರಿಗೆ ಜ್ಯೂಸ್ ಕೊಟ್ಟಿದ್ದಾನೆ. ಬಾಲಕನಿಗೆ ಥ್ಯಾಂಕ್ಯೂ ಹೇಳಿದ ಸೋನುಗೌಡ ಅವರು ಮಾಧ್ಯಮಗಳನ್ನ ನೋಡಿ ಆಲ್ ಗುಡ್, ಆಲ್‌ ಗುಡ್ ಎಂದಿದ್ದಾರೆ.

ಇದನ್ನೂ ಓದಿ:‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

ಮಗುವನ್ನು ದತ್ತು ಪಡೆದ ಆರೋಪದಲ್ಲಿ ಸೋನುಗೌಡ ಅವರು ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಒಂದು ಮಾತು ಆಡಿಲ್ಲ. ಏನೂ ಮಾತಾಡದೆ ಕಳ್ಳತನ ಮಾಡಿರೋ ಹಾಗೇ ಓಡಿ ಹೋಗೋದ್ಯಾಕೆ ಎಂದು ಕಾಚಾಪುರ ಗ್ರಾಮಸ್ಥರು ವಿರೋಧಿಸಿದ್ದಾರೆ. ಬಹಳಷ್ಟು ಗದ್ದಲದ ನಡುವೆ ಸೋನುಗೌಡ ಅವರನ್ನು ಪೊಲೀಸರು ಎಳೆದೊಯ್ದಿದ್ದಾರೆ. ಪೊಲೀಸರ ನಡೆಗೂ ಕಾಚಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಗ್ರಾಮಸ್ಥರು ಪೊಲೀಸರ ವಾಹನದ ಹಿಂದೆ ಅಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ತರಾತುರಿಯಲ್ಲಿ ಪೊಲೀಸ್ ಹಾಗೂ ಸೋನುಗೌಡ ಅವರು ಕಾಚಾಪುರದಿಂದ ಹೊರಟು ಹೋಗಿದ್ದಾರೆ. ಪೊಲೀಸರ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದು, ಗ್ರಾಮಸ್ಥರಿಂದ ತಪ್ಪಿಸಿಕೊಂಡು ಹೋಗಲು ಪೊಲೀಸರ ಹರಸಾಹಸ ಮಾಡಿದ್ದಾರೆ.

ಬಾಲಕಿಯ ಚಿಕ್ಕಪ್ಪ ಹಾಗೂ ಅಜ್ಜ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದು, ಸೋನುಗೌಡ ಅವರಿಗೆ ನಾವು ನಮ್ಮ ಮಗಳನ್ನು ಮಾರಾಟ ಮಾಡಿಲ್ಲ. ಹಣಕ್ಕಾಗಿ ನಮ್ಮ ಮಗಳನ್ನು ಮಾರಾಟ ಮಾಡಿಲ್ಲ. ಸೋನು ಹಾಗೂ ಬಾಲಕಿ ಆತ್ಮೀಯರಾದ ಬಳಿಕ ಸಲುಗೆ ಬೆಳೆದಿದೆ. ಶಾಲೆಯಲ್ಲಿ ಓದಿಸುತ್ತೇನೆ ಎಂದು ಬಾಲಕಿಯನ್ನು ಕರೆದೊಯ್ದಿದ್ದಾರೆ.

ಈ ಹಿಂದೆ ರಾತ್ರಿ ವೇಳೆ ಕಾಚಾಪುರಕ್ಕೆ ಬಂದಿದ್ದ ಸೋನು ಗೌಡ ಅವರು ನಮ್ಮ ಮಗಳನ್ನು ಕರೆದೊಯ್ದಿದ್ದಾರೆ. ಬಾಲಕಿ ಜೊತೆ ಮಂತ್ರಾಲಯಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದಾರೆ. ನಮ್ಮ ಮಗು ನಮಗೆ ಕೊಟ್ಟು ಬಿಡಿ ಎಂದು ಬಾಲಕಿ ಮನೆಯವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment