/newsfirstlive-kannada/media/media_files/2026/02/09/sanjana-burli-8-2026-02-09-12-20-51.jpg)
ನಟಿ ಸಂಜನಾ ಬುರ್ಲಿ, ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದರು. ಸ್ನೇಹಾ ಪಾತ್ರದಲ್ಲಿ ನಟಿಸಿದ್ದ ಸಂಜನಾ ಬುರ್ಲಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು.
/filters:format(webp)/newsfirstlive-kannada/media/media_files/2026/02/09/sanjana-burli-7-2026-02-09-12-22-34.jpg)
ಒಂದು ವರ್ಷಗಳ ಕಾಲ ಕಿರುತೆರೆಯಿಂದ ದೂರವಿದ್ದ ಸಂಜನಾ ಬುರ್ಲಿ, ಇದೀಗ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರೀ ಗಂಧದಗುಡಿ ಧಾರವಾಹಿಯಲ್ಲಿ ನಟಿಸ್ತಿದ್ದಾರೆ.ಹೀಗಿರುವಾಗಲೇ ಸಂಜನಾ ಬುರ್ಲಿ ಹೊಸ ಬಾಳಿಗೆ ಕಾಲಿಡುತ್ತಿದ್ದು, ನಿಶ್ವಿತಾರ್ಥ ನೇರವೇರಿದೆ. ಸಂಜನಾ ಬುರ್ಲಿ ಸದ್ದಿಲ್ಲದೆ ವೈದ್ಯ ಸಮರ್ಥ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆನ್ನಲ್ಲೇ ನ್ಯೂಸ್​ಫಸ್ಟ್​ ಜೊತೆ ಸಂಜನಾ ಬುರ್ಲಿ ಮಾತನ್ನಾಡಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೇ ಎಂಗೇಜ್ ಆದ ಸಂಜನಾ.. ಹುಡುಗ ಯಾರು ಗೊತ್ತೇ..?
/filters:format(webp)/newsfirstlive-kannada/media/media_files/2026/02/09/sanjana-burli-6-2026-02-09-12-22-52.jpg)
ಸಂಜನಾ ಹೇಳಿದ್ದೇನು..?
ಕಳೆದ ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯವಾಯಿತು. ಮ್ಯೂಚುವಲ್ ಫ್ಯಾಮಿಲಿಯಿಂದ ನನಗೆ ಸಮರ್ಥ್ ಪರಿಚಯವಾದರು. ಮಾತನಾಡಲು ಶುರು ಮಾಡಿದಾಗ, ನಮ್ಮಿಬ್ಬರ ಮನಸ್ಥಿತಿ, ಸಿದ್ದಾಂತ, ಮೌಲ್ಯಗಳು ಮ್ಯಾಚ್ ಆಗುತ್ತೆ ಅಂತಾ ತಿಳಿಯಿತು. ಮದುವೆ ಅಂತಾ ಬಂದಾಗ ನಾನು ಪ್ರಮುಖ ವಿಚಾರಗಳಲ್ಲಿ ರಾಜಿಯಾಗುವುದು ಬೇಡ ಎಂದು ಡಿಸೈಡ್ ಆಗಿದ್ದೆ.
ಒಂದೇ ವೇಳೆ ನನಗೆ ನನ್ನ ಸಿದ್ಧಾಂತಕ್ಕೆ ಮ್ಯಾಚ್ ಆಗದೇ ಇರೋರು ಸಿಗದೇ ಇದ್ದರೆ ಮದ್ವೆನೇ ಬೇಡ ಎಂದು ನಿರ್ಧರಿಸಿದ್ದೇ. ದೇವರ ಆಶೀರ್ವಾದದಿಂದ ನನಗೆ ಮ್ಯಾಚ್ ಆಗುವ ಹುಡುಗ ಸಿಕ್ಕರು. ರೈಟ್ ಪರ್ಸನ್ ಸಿಕ್ಕ ನಂತರ ತಡ ಮಾಡೋದು ಬೇಡ ಎಂದು ಜನವರಿಯಲ್ಲಿ ಎೞಂಗೇಜ್‌ಮೆಂಟ್ ಮಾಡಿಕೊಂಡೆವು. ಮಾರ್ಚ್‌ನಲ್ಲಿ ಮದ್ವೆಗೆ ತಯಾರಿ ನಡೆದಿದೆ.
ಸಮರ್ಥ್ ಮೂಲತಃ ಚನ್ನಗಿರಿಯವರು. ಬೆಂಗಳೂರಿನಲ್ಲಿ ಎಂಬಿಬಿಎಸ್ ಮಾಡಿದರು. ಈಗ ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ಇಬ್ಬರು ಕೂಡ ಸ್ಪಿರಿಚ್ಯೂಯಲ್ ಪೀಪಲ್. ನಾವಿಬ್ಬರು ಪಾರ್ಟಿ ಫ್ರೀಕ್‌ಗಳಲ್ಲ. ದೇವಸ್ಥಾನವಷ್ಟೇ ನಮ್ಮ ನೆಚ್ಚಿನ ತಾಣ. ನನಗೆ ಎಜುಕೇಷನ್ ಮತ್ತು ನಟನೆ ಎರಡನ್ನ ಬ್ಯಾಲೆನ್ಸ್ ಮಾಡಲು, ನನಗೆ ತುಂಬಾ ಸಪೋರ್ಟಿವ್ ಇದ್ದಾರೆ.
ಇದು ನನಗೆ ತುಂಬಾ ಖುಷಿ ಕೊಟ್ಟ ವಿಚಾರ. ನಮ್ಮಿಬ್ಬರಿಗೂ ಗ್ರ್ಯಾಂಡ್ ವೆಡ್ಡಿಂಗ್ ಇಷ್ಟವಿಲ್ಲ. ಆದ್ರೆ, ನಮ್ಮಿಬ್ಬರನ್ನ ಇಷ್ಟಪಡುವವರಿಗೋಸ್ಕರ ಮಾಡ್ಕೋಬೇಕು. ಹಾಗಂತಾ ತೀರ ಗ್ರ್ಯಾಂಡ ಅಲ್ಲ. ಗಂಡ ಮತ್ತು ಹೆಂಡತಿ ಇಬ್ಬರು ಸಮಾನರು ಅನ್ನೋ ಸಂದೇಶ ಸಮಾಜಕ್ಕೆ ಕೊಡುವ ನಿಟ್ಟಿನಲ್ಲಿ ನಾವು ಮದ್ವೆ ಪ್ಲಾನ್ ಮಾಡ್ತಿದ್ದೀವಿ.
ಸಂಜನಾ ಬುರ್ಲಿ, ಕಿರುತೆರೆ ನಟಿ
/filters:format(webp)/newsfirstlive-kannada/media/media_files/2026/02/09/sanjana-burli-14-2026-02-09-12-23-33.jpg)
ಇದನ್ನೂ ಓದಿ: PUB G ಗೇಮ್ ಆಡುವಾಗ ರಕ್ತದೊತ್ತಡ ಹೆಚ್ಚಾಗಿ ಯುವಕ ಸಾವು : 300 ಕ್ಕೂ ಅಧಿಕ ಮಟ್ಟಕ್ಕೆ ಏರಿದ ರಕ್ತದೊತ್ತಡ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us
/filters:format(webp)/newsfirstlive-kannada/media/media_files/2026/02/09/sanjana-burli-9-2026-02-09-12-23-11.jpg)