newsfirstkannada.com

ಭಂ ಭಂ ಬೋಲೇನಾಥ್.. ಕೇದಾರನಾಥಕ್ಕೆ ಭೇಟಿ ಕೊಟ್ಟ ‘ರಾಮಾಚಾರಿ’ ನಟಿ ಐಶ್ವರ್ಯಾ; ವಿಡಿಯೋ ವೈರಲ್!

Share :

Published May 31, 2024 at 1:22pm

  ಪುಣ್ಯ ಕ್ಷೇತ್ರವಾದ ಕೇದಾರನಾಥನ ದರ್ಶನ ಪಡೆದ ಕಿರುತೆರೆ ನಟಿ

  ಸ್ವರ್ಗ ಎಲ್ಲದಕ್ಕೂ ಧನ್ಯವಾದಗಳು ಬಾಬಾ ಎಂದ ನಟಿ ಐಶ್ವರ್ಯಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿಯ ವಿಡಿಯೋ

ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ. ಇಂಥ ಪುಣ್ಯ ಕ್ಷೇತ್ರಗಳಿಗೆ ಜೀವನದಲ್ಲಿ ಒಮ್ಮೆ ಆದರೂ ಯಾತ್ರೆ ಕೈಗೊಳ್ಳಬೇಕು ಎಂಬ ಇಚ್ಛೆ ಹಲವರಿಗೆ ಇದ್ದೇ ಇರುತ್ತೆ. ಸಾಯುವ ಮುನ್ನ ಕಾಶಿ ವಿಶ್ವನಾಥ, ಬದರಿನಾಥ ಹಾಗೂ ಕೇದಾರನಾಥನ ದರ್ಶನ ಮಾಡಲೇಬೇಕು ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

ಇದೀಗ ಪುಣ್ಯ ಕ್ಷೇತ್ರವಾದ ಕೇದಾರನಾಥ ದೇವಸ್ಥಾನಕ್ಕೆ ರಾಮಚಾರಿ ಸೀರಿಯಲ್ ನಟಿ ಐಶ್ವರ್ಯಾ ಸಾಲಿಮಠ ಹಾಗೂ ವಿನಯ್ ದಂಪತಿ ಹೋಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​​​​ ಮೂಲಕ ಅಪಾರ ಅಭಿಮಾನಿಗಳ ಹೃದಯ ಗೆದ್ದ ನಟಿ ಐಶ್ವರ್ಯ ಸಾಲಿಮಠ ಇದೀಗ ಹಾಟ್​ ಟಾಪಿಕ್ ಆಗಿದ್ದಾರೆ.

ಐಶ್ವರ್ಯಾ ಸಾಲಿಮಠ ಹಾಗೂ ಪತಿ ವಿನಯ್​ ಶಿವನನ್ನು ಕಾಣಲು ಕೇದಾರನಾಥಕ್ಕೆ ವಿಸಿಟ್ ಮಾಡಿದ್ದಾರೆ. ಫ್ರೆಂಡ್ಸ್​ ಜೊತೆ ಜಾಲಿ ಟ್ರೆಕ್ಕಿಂಗ್ ಮಾಡಿದ್ದಾರೆ ನಟಿ ಐಶ್ವರ್ಯಾ ಹಾಗೂ ವಿನಯ್​. ಇದೇ ಫೋಟೋಗಳನ್ನು ನಟಿ ಐಶ್ವರ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಸ್ವರ್ಗ ಎಲ್ಲದಕ್ಕೂ ಧನ್ಯವಾದಗಳು ಬಾಬಾ ಅಂತ ಬರೆದುಕೊಂಡಿದ್ದಾರೆ.

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇನ್ನು ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಿಮ್ಮ ಇಬ್ಬರ ಜೋಡಿ ಬಹಳ ಚೆನ್ನಾಗಿದೆ, ನೀವೇ ಅದೃಷ್ಟವಂತರು ಅಂತ ಕಾಮೆಂಟ್​ ಮಾಡುತ್ತಿದ್ದಾರೆ. ಐಶ್ವರ್ಯ ಸಾಲಿಮಠ ಮತ್ತು ವಿನಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟಿ ಐಶ್ವರ್ಯಾ ಮತ್ತು ಪತಿ ಹಾಗೂ ನಟ ವಿನಯ್ ಅವರು ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿಯಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಸದ್ಯ ನಟಿ ಐಶ್ವರ್ಯ ವಿನಯ್ ರಾಮಾಚಾರಿ ಸೀರಿಯಲ್​​ನಲ್ಲಿ ವೈಶಾಖ ಪ್ರಾತದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: WATCH: ಭಂ ಭಂ ಬೋಲೇನಾಥ್.. ಈ ವರ್ಷದ ಅಮರನಾಥ ಯಾತ್ರೆಯ ವಿಶೇಷತೆಗಳೇನು ಗೊತ್ತಾ? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಂ ಭಂ ಬೋಲೇನಾಥ್.. ಕೇದಾರನಾಥಕ್ಕೆ ಭೇಟಿ ಕೊಟ್ಟ ‘ರಾಮಾಚಾರಿ’ ನಟಿ ಐಶ್ವರ್ಯಾ; ವಿಡಿಯೋ ವೈರಲ್!

https://newsfirstlive.com/wp-content/uploads/2024/05/Aishwarya1.jpg

Load More