newsfirstkannada.com

ಅಶ್ಲೀಲ ವಿಡಿಯೋ ವೈರಲ್‌; ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ; ಆಗಿದ್ದೇನು?

Share :

Published May 9, 2024 at 6:51pm

  ಇನ್​ಸ್ಟಾಗ್ರಾಮ್​ನಲ್ಲಿ ಹಾಟ್​, ಬೋಲ್ಡ್​​ ಆಗಿರೋ ಫೋಟೋಸ್​ ಶೇರ್ ಮಾಡಿದ್ದ ನಟಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಕಿರುತೆರೆ ನಟಿ ಜ್ಯೋತಿ ರೈ ವಿಡಿಯೋ

  ಟಾಲಿವುಡ್​ನ ಖ್ಯಾತ ನಿರ್ದೇಶಕರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜ್ಯೋತಿ ರೈ

ಕಿರುತೆರೆ ಲೋಕದಲ್ಲಿ ಇಂದಿಗೂ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ಸೀರಿಯಲ್​ಗಳಲ್ಲಿ ಕಿನ್ನರಿ ಕೂಡ ಒಂದು. ಕಿನ್ನರಿ ಒಂದೊಳ್ಳೆ ಜನಪ್ರಿಯ ಧಾರಾವಾಹಿ. ಇನ್ನೂ, ಈ ಸೀರಿಯಲ್​ನಲ್ಲಿ ನಟಿ ಜ್ಯೋತಿ ರೈ ಕೂಡ ನಟಿಸಿದ್ದರು. ಸುಧ ಅನ್ನೋ ತಾಯಿಯ ಪಾತ್ರದಲ್ಲಿ ಕಿನ್ನರಿ ಧಾರಾವಾಹಿಯಲ್ಲಿ ಜ್ಯೋತಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

ಈಗಂತೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿರೋ ನಟಿ ಜ್ಯೋತಿ ರೈ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ನಟಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹೌದು, ಹಾಟ್​ ಫೋಟೋಸ್‌ಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹಲ್​​ಚಲ್​ ಎಬ್ಬಿಸಿದ್ದರು. ಆದರೆ ಇದೀಗ ಈ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್‌ ಆಗಿದ್ದು ಸಂಚಲನ ಮೂಡಿಸುತ್ತಿವೆ.

ಬಹುಭಾಷಾ ನಟಿ ಜ್ಯೋತಿರೈ ಅವರದ್ದು ಎನ್ನಲಾದ ಕೆಲವು ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಆದರೆ ಈ ಬಗ್ಗೆ ನಟಿಯಿಂದ ಬಹಳ ದಿನಗಳ ಮೊದಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು‌ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಫೇಕ್ ಎಂದಿರುವ ನಟಿ, ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಕೆಲವು ಆಶ್ಲೀಲ ಚಿತ್ರಗಳನ್ನು ಹಂಚಿದ್ದಾರೆ. ನನ್ನ‌ ಫೋಟೋ‌ಮತ್ತು ವಿಡಿಯೋ ಬಳಸಿ ನಕಲಿ ಮಾಡಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಶ್ಲೀಲ ವಿಡಿಯೋ ವೈರಲ್‌; ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ; ಆಗಿದ್ದೇನು?

https://newsfirstlive.com/wp-content/uploads/2024/05/Jyothi-Poorvaj.jpg

Load More