Advertisment

ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ

author-image
Veena Gangani
Updated On
ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ
Advertisment
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಸ್ಟಾರ್​ ಸೀರಿಯಲ್ ನಟಿ
  • ಸಿದ್ದೇಗೌಡರ ಜೊತೆಗೆ ನೀಲು ಪಾತ್ರದಲ್ಲಿ ಅಭಿನಯಿಸುತ್ತಿರೋ ಬೆಡಗಿ
  • ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿದ್ದ ನಟಿ ಮಾನಸ

ಜೊತೆ ಜೊತೆಯಲಿ, ಲಕ್ಷ್ಮೀ ನಿವಾಸ ಸೀರಿಯಲ್​ ನಟಿ ಮಾನಸಾ ಮನೋಹರ್​ ತಮ್ಮ ಅಭಿಮಾನಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ನಟಿ ಮಾನಸಾ ಮನೋಹರ್​ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರೋ ನಟಿ. ಹೊಸ ಹೊಸ ಫೋಟೋಶೂಟ್​ ಮೂಲಕ ಸುದ್ದಿಯಲ್ಲಿ ಇರುತ್ತಾರೆ.

Advertisment

ಇದನ್ನೂ ಓದಿ:ಲಕ್ಷ್ಮೀ ನಿವಾಸ ಸಿದ್ದು ಅತ್ತಿಗೆ​ ಇಷ್ಟೊಂದು ಹಾಟ್​! ನಟಿ ಮಾನಸಾ ಮನೋಹರ್ ಲುಕ್​ಗೆ ಫ್ಯಾನ್ಸ್ ಫಿದಾ​​

publive-image

ಇದೀಗ ಮತ್ತೊಂದು ವಿಚಾರಕ್ಕೆ ನಟಿ ಸುದ್ದಿಯಾಗಿದ್ದಾರೆ. ಹೌದು, ನಟಿ ಮಾನಸಾ ಮನೋಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರೀತಂ ಚಂದ್ರ ಎಂಬುವವರ ಜೊತೆಗೆ ನಟಿ ಎಂಗೇಜ್ಮೆಂಟ್ ಆಗಿದ್ದಾರೆ. ನಟಿ ಕೈ ಹಿಡಿದ ಹುಡುಗ ಪ್ರೀತಂ ಚಂದ್ರ ಅವರು ಫುಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಜೊತೆಗೆ ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಎಂಗೇಜ್ಮೆಂಟ್ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅತಿ ಶೀಘ್ರದಲ್ಲೇ ನಾನು ಅವರು ಮದುವೆಯಾಗುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ ಇದು ಮಾನಸ ಅವರಿಗೆ ಎರಡನೇ ಮದುವೆಯಾಗಿದೆ.

publive-image

ಎಲ್ಲರ ಸಂದೇಹಗಳಿಗೆ ಉತ್ತರ ಇದೆ. ಇದು ನನ್ನ ಎರಡನೇ ಮದುವೆ. ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ನಾವು ಎಲ್ಲರ ಒಳಿತಿಗಾಗಿ ಮುಂದುವರಿಯಬೇಕು. ನಾವು ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ ಅಂತ ಹೇಳಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಜೊತೆಗೆ ನಟಿಗೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ.

Advertisment

ಇನ್ನೂ ನಟಿ ಮಾನಸ ಅವರು ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡ ಅತ್ತಿಗೆ ನೀಲು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೌಪರ್ಣಿಕಾ ಜೊತೆ ಸೇರಿ ಸಿದ್ದು ಕುಟುಂಬವನ್ನು ಛಿದ್ರ ಛಿದ್ರ ಮಾಡಬೇಕು ಎಂದು ಪ್ಲಾನ್​​ ​ಮಾಡುತ್ತಿರುತ್ತಾಳೆ ನೀಲಿ. ಎಲ್ಲರ ಮುಂದೆ ಒಳ್ಳೆಯವಳಾಗಿ ಇಂದುಕೊಂಡೇ ಅದೇ ಕುಟುಂಬದ ಹಿಂದೆ ಸಂಚು ರೂಪಿಸುವ ನೇಗೆಟಿವ್​ ಪಾತ್ರ ಇದಾಗಿದೆ.


ಈ ಹಿಂದೆ ನಟಿ ಅಭಿನಯಿಸುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮೀರಾ ಪಾತ್ರ ವೀಕ್ಷಕರಿಗೆ ಅಚ್ಚುಮೆಚ್ಚು. ಅಲ್ಲದೇ ಅಶ್ವಿನಿ ನಕ್ಷತ್ರ, ಶುಭವಿವಾಹ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡರು. ಕನ್ನಡ ಮಾತ್ರವಲ್ಲದೇ ಮಾನಸ ಮನೋಹರ್ ಅವರು ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಸೈ ಎನಿಸಿಕೊಂಡು ಅಲ್ಲಿಯೂ ಕೂಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment