newsfirstkannada.com

×

DKD SHOW, ಸೀತಾರಾಮ ಸೀರಿಯಲ್​ನಿಂದ ದಿಢೀರ್​ ಹೊರ ಬಂದ್ರಾ​ ಮೇಘನಾ ಶಂಕರಪ್ಪ; ಆಗಿದ್ದೇನು?

Share :

Published September 10, 2024 at 6:13pm

Update September 10, 2024 at 6:30pm

    ಕನ್ನಡದ ಅತಿ ದೊಡ್ಡ ಡ್ಯಾನ್ಸ್​ ಶೋ ಡಿಕೆಡಿಯಲ್ಲಿ ಸ್ಪರ್ಧಿಯಾಗಿ ನಟಿ ಎಂಟ್ರಿ

    ಸೀತಾರಾಮ ಸೀರಿಯಲ್​ನಲ್ಲಿ​ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇವರು

    ಫೋಟೋಶೂಟ್​ಗಳ ಮೂಲಕ ಸಖತ್​ ಸುದ್ದಿಯಲ್ಲಿ ಇರುತ್ತಾರೆ ನಟಿ ಮೇಘನಾ

ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್​ ಪ್ರಿಯಾ ತರ್ಲೆ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಈ ಸೀರೀಯಲ್​ ಸುದ್ದಿಯಲ್ಲಿ ಇರುತ್ತೆ. ಆದರೆ ಇದೀಗ ಸೀತಾರಾಮ ಸೀರಿಯಲ್​​ ಪ್ರಿಯಾ ಪಾತ್ರಧಾರಿಯಲ್ಲಿ ನಟಿಸಿದ್ದ ನಟಿ ಮೇಘನಾ ಶಂಕರಪ್ಪ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ತುಂಬು ಗರ್ಭಿಣಿಯರು.. ಚಿನ್ನು, ಗೊಂಬೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಫ್ಯಾನ್ಸ್‌​; ಏನದು?

ಸೀತಾರಾಮ ಸೀರಿಯಲ್​ ಹಾಗೂ ಡಿಕೆಡಿ ಶೋನಲ್ಲಿ ಸಖತ್​ ಬ್ಯೂಸಿಯಾಗಿದ್ದ ನಟಿ ಮೇಘನಾ ಶಂಕರಪ್ಪ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ಅಯ್ಯೋ ದಿಢೀರ್ ಅಂತ ನಟಿ ಮೇಘನಾ ಅವರಿಗೆ ಏನಾಯ್ತು? ಸೀರಿಯಲ್​ನಲ್ಲೂ ಇಲ್ಲ, ಇತ್ತ ಡಿಕೆಡಿ ಶೋನಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಂತ ಬೇಸರಗೊಂಡಿದ್ದರು. ಹೀಗಾಗಿ ಅಭಿಮಾನಿಗಳು ಅವರ ಪರ್ಸನಲ್ ಅಕೌಂಟ್​ಗೆ ಮೆಸೇಜ್​ ಮಾಡುವ ಮೂಲಕ ಕಳವಳ ವ್ಯಕ್ತ ಪಡಿಸಿದ್ದರು. ಅದಕ್ಕಾಗಿಯೇ ನಟಿ ಮೇಘನಾ ಶಂಕರಪ್ಪ ಅವರು ಖುದ್ದಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಅದು ಕೂಡ ಅವರ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳ ಗೊಂದಲವನ್ನು ದೂರ ಮಾಡಿದ್ದಾರೆ. ಹೌದು, ಮೇಘನಾ ಶಂಕರಪ್ಪ ಅವರು ಬೆಡ್​ ರೆಸ್ಟ್​ನಲ್ಲಿದ್ದಾರೆ. ಕಾರಣ ಅವರ ಕಣ್ಣಿನ ಮೇಲೆ ಅಂದ್ರೆ ಹುಬ್ಬಿನ ಕೆಳಗೆ ಹರ್ಪಿಸ್ ಜೋಸ್ಟರ್ (herpes zoster) ಆಗಿದೆ.  ಹರ್ಪಿಸ್ ಜೋಸ್ಟರ್ ಅನ್ನು ಕನ್ನಡದಲ್ಲಿ ಸರ್ಪಸುತ್ತು ಎಂದು ಕರೆಯಲಾಗುತ್ತದೆ. ಈ ಹರ್ಪಿಸ್ ಜೋಸ್ಟರ್ ಒಂದು ವೈರಲ್ ಸೋಂಕು ಆಗಿದೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತಿ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ. ಅದು ಚರ್ಮದ ಮೇಲೆ ನೋವಿನ ದದ್ದು ಅಥವಾ ಗುಳ್ಳೆಗಳನ್ನು ಉಂಟುಮಾಡುತ್ತದೆ. ಇದು ವರಿಸೆಲ್ಲಾ-ಜೋಸ್ಟರ್ ವೈರಸ್‌ನಿಂದ ಉಂಟಾಗುತ್ತದೆ.

ಹೀಗಾಗಿ ವೈದ್ಯರು ನಟಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ. ಅದಕ್ಕಾಗಿ ನಟಿ ಸೀತಾರಾಮ ಸೀರಿಯಲ್​​ ಹಾಗೂ ಡಿಕೆಡಿ ಶೋನಲ್ಲಿ ಕಾಣಸಿಕೊಳ್ಳು ಆಗುತ್ತಿಲ್ಲ. ಆದಷ್ಟು ಬೇಗನೇ ಗುಣಮುಖಳಾಗಿ ಬರುತ್ತೇನೆ. ಡಿಕೆಡಿ ವೇದಿಕೆ ಮೇಲೆ ಡ್ಯಾನ್ಸ್​ ಮಾಡುತ್ತೇನೆ. ನನ್ನ ಬಗ್ಗೆ ಯಾರೆಲ್ಲಾ ಕೇರ್​ ಮಾಡಿ ಮೆಸೇಜ್​ ಮಾಡಿದ್ದೀರೋ ಅವರಿಗೆಲ್ಲ ಧನ್ಯವಾದಗಳು ಅಂತ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DKD SHOW, ಸೀತಾರಾಮ ಸೀರಿಯಲ್​ನಿಂದ ದಿಢೀರ್​ ಹೊರ ಬಂದ್ರಾ​ ಮೇಘನಾ ಶಂಕರಪ್ಪ; ಆಗಿದ್ದೇನು?

https://newsfirstlive.com/wp-content/uploads/2024/09/meghana-shankarappa2.jpg

Load More