ಹೊಸ ಬೇಬಿ ಬಂಪ್ ಮೂಲಕ ಖುಷಿ ಪಡುತ್ತಿದ್ದಾರೆ ನೇಹಾ, ಕವಿತಾ
ತಾಯ್ತನದ ಪ್ರತಿ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ ಸ್ಟಾರ್ ನಟಿಯರು
ಲಕ್ಷ್ಮೀ ಬಾರಮ್ಮ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ ಈ ಇಬ್ಬರು
ಕನ್ನಡ ಕಿರುತೆರೆಯಲ್ಲಿ ಎರೆಡೆರೆಡು ಸಂಭ್ರಮ ಮನೆ ಮಾಡಿದೆ. ಕಿರುತೆರೆ ನಟಿಯರಾದ ಕವಿತಾ ಗೌಡ ಹಾಗೂ ನೇಹಾ ಗೌಡ ತಾಯ್ತನದ ಪ್ರತಿ ಕ್ಷಣವನ್ನ ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಬೇಬಿ ಬಂಪ್ ಫೋಟೋಶೂಟ್ ಮಾಡಿಸುತ್ತಾ ಖುಷಿ ಪಡುತ್ತಿದ್ದಾರೆ.
ಇದನ್ನೂ ಓದಿ: ಚಿನ್ನು, ಗೊಂಬೆ ಲೈಫ್ನಲ್ಲಿ ನಡೀತಿವೆ ಒಂದೇ ರೀತಿ ಘಟನೆಗಳು; ಅದು ಹೇಗೆ ಸಾಧ್ಯ.. ನೇಹಾ ಗೌಡ ಹೇಳಿದ್ದೇನು?
ವಿಶೇಷ ಎಂದರೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ಜೋಡಿ ಎಂದ್ರೆ ಅದು ಚಿನ್ನು ಹಾಗೂ ಗೊಂಬೆ. ಚಿನ್ನು ಪಾತ್ರದಲ್ಲಿ ನಟಿ ಕವಿತಾ ಗೌಡ ಅಭಿನಯಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ ಗೌಡ ನಟಿಸಿದ್ದರು. ಇದೇ ಸೀರಿಯಲ್ ಮೂಲಕ ಈ ಇಬ್ಬರು ಸಹ ಈಗಲೂ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಆದರೆ ಈ ಇಬ್ಬರ ಜೀವನ ಸೀರಿಯಲ್ ಸ್ಕ್ರಿಪ್ಟ್ ರೀತಿಯಲ್ಲೇ ಇದೆ. ಸೀರಿಯಲ್ನಲ್ಲಿ ಏನೆಲ್ಲಾ ಆಗಿದೆಯೋ ಹಾಗೇ ನಮ್ಮ ಜೀವನದಲ್ಲಿ ನಡೆಯುತ್ತಿದೆಯಂತೆ ಅಂತ ನೇಹಾ ಗೌಡ ಈ ಹಿಂದೆ ಹೇಳಿಕೊಂಡಿದ್ದರು.
ತುಂಬು ಗರ್ಭಿಣಿಯರಾದ ನೇಹಾ ಗೌಡ ಹಾಗೂ ಕವಿತಾ ಗೌಡ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನುಬಂಧ ಅವಾರ್ಡ್ಸ್ 2024ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಒಂದಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋವನ್ನು ನಟಿ ಕವಿತಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಸ್ಯಾಂಡಲ್ವುಡ್ನ ಇಬ್ಬರು ನಟಿಯರ ಹೆಸರು..!
View this post on Instagram
ಅದರಲ್ಲೂ ನಟಿ ಕನ್ನಡತಿ ಸೀರಿಯಲ್ ನಟಿ ಚಿತ್ಕಲಾ ಬಿರಾದಾರ್ ಅವರು ನಮ್ಮ ಮುದ್ದು ಗಂಗೆಗೌರಿ ಅಂತಾ ಕಾಮೆಂಟ್ಸ್ ಹಾಕಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ನಿಮ್ಮಿಬ್ಬರಿಗೂ ಸುರಕ್ಷಿತ ಹಾಗೂ ಆರೋಗ್ಯವಂತ ಹೆರಿಗೆ ಆಗಲಿ, ಆ ದೇವರು ನಿಮಗೆ ಒಳ್ಳೆಯದು ಮಾಡಲಿ, ಗೊಂಬೆಗೆ ಹೆಣ್ಣು ಮಗು, ಚಿನ್ನುಗೆ ಗಂಡು ಮಗು ಜನ್ಮ ನೀಡುತ್ತಾರೆ ಅಂದು ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ