/newsfirstlive-kannada/media/post_attachments/wp-content/uploads/2024/10/vishnavi.jpg)
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ಎಂದರೆ ಅದು ವೈಷ್ಣವಿ ಗೌಡ. ಹೊಸ ಹೊಸ ಫೋಟೋಶೂಟ್ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರುತ್ತಾರೆ. ಜೊತೆಗೆ ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿ. ಇದೇ ಧಾರಾವಾಹಿಯಲ್ಲಿ ನಟಿಯ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ.
ಇದನ್ನೂ ಓದಿ:ಹೊಸ ಟ್ವಿಸ್ಟ್ ಪಡೆದುಕೊಂಡ ಸೀತಾರಾಮ ಸೀರಿಯಲ್; ಮದುವೆ ಆಗೋದೇ ಡೌಟಾ?
ಕರ್ನಾಟಕದ ಕ್ರಷ್ ಆಗಿರೋ ಸೀತಾ ರಾಮ ನಟಿಗೆ ಹೊಸ ಅವಾರ್ಡ್ವೊಂದು ಬಂದಿದೆ. ಹೌದು, ನಟಿ ವೈಷ್ಣವಿ ಗೌಡ ಸಖತ್ ಕ್ಯೂಟ್ ಆಗಿರೋ ಬೆಡಗಿ. ರಾಮನ ಮಡದಿ, ಸಿಹಿಯ ತಾಯಿ ಸೀತಮ್ಮಾ ತುಂಬಾ ಖುಷಿಯಾದ ದಿನವಾಗಿದೆ. ಏಕೆಂದರೆ ಜೀ ಕುಟುಂಬ ಅವಾರ್ಡ್ಸ್ 2024ನಲ್ಲಿ ಅದ್ಭುತವಾದ ಬಿರುದನ್ನು ಪಡೆದುಕೊಂಡಿದ್ದಾರೆ.
View this post on Instagram
ಹೌದ, ಸೀತಾರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಜನಪ್ರಿಯ ನಾಯಕ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಅವಾರ್ಡ್ ಅನ್ನು ತೆಗೆದುಕೊಳ್ಳಲು ಬಂದಿದ್ದ ನಟಿ ತಮ್ಮ ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಎಲ್ಲ ವೀಕ್ಷಕರಿಗೆ ತುಂಬಾ ಥ್ಯಾಂಕ್ಯೂ ಇಷ್ಟೆಲ್ಲಾ ಸಪೋರ್ಟ್ ಮಾಡಿದ್ದಕ್ಕೆ. ನನ್ನ ತಂದೆ ತಾಯಿಗೆ ಥ್ಯಾಂಕ್ಸ್. ಏಕೆಂದರೆ ಅವರ ಸಪೋರ್ಟ್ ಇಲ್ಲದೇ ನಾನು ಏನನ್ನೂ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ