Advertisment

ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕಾವೇರಿ; ಕೀರ್ತಿ ಆತ್ಮಕ್ಕೆ ಹೆದರಿ ವೈಷ್ಣವ್​ ಮುಂದೆ ಅಸಲಿ ಬಣ್ಣ ಬಯಲು!

author-image
Veena Gangani
Updated On
ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕಾವೇರಿ; ಕೀರ್ತಿ ಆತ್ಮಕ್ಕೆ ಹೆದರಿ ವೈಷ್ಣವ್​ ಮುಂದೆ ಅಸಲಿ ಬಣ್ಣ ಬಯಲು!
Advertisment
  • ಈಗಿನ ಎಪಿಸೋಡ್​ ನೋಡಿದ ವೀಕ್ಷಕರು ಸಖತ್​ ಥ್ರಿಲ್ ಆಗಿದ್ದಾರೆ
  • ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಲಕ್ಷ್ಮೀ ಬಾರಮ್ಮ​
  • ನಿಜವಾಗಲೂ ಲಕ್ಷ್ಮೀ ದೇಹದ ಮೇಲೆ ಕೀರ್ತಿಯ ದೆವ್ವ ಬಂದಿದೇಯಾ?

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ತನ್ನದೆಯಾದ ಅಭಿಮಾನಿಗಳನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಟಾಪ್​ ಸ್ಥಾನ ಪಡೆದುಕೊಂಡಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.

Advertisment

ಇದನ್ನೂ ಓದಿ:ಬ್ಲೌಸ್ ಹಾಕದೆ ಸೀರೆಯುಟ್ಟು ಪೋಸ್​ ಕೊಟ್ಟ ನಟಿ ಸಪ್ತಮಿ ಗೌಡ; ತುಂಟಾಟದ ಕ್ಯೂಟ್‌ ವಿಡಿಯೋ ನೋಡಿ!

publive-image

ದಿನದಿಂದ ದಿನಕ್ಕೆ ಲಕ್ಷ್ಮೀ ಬಾರಮ್ಮ ಸೀರಿಯಲ್​ ರೋಚಕ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮೈಮೇಲೆ ಕೀರ್ತಿ ದೆವ್ವ ಬಂದಿದೆ ಅಂಥ ಕಾವೇರಿ ಮಂತ್ರವಾದಿಯ ಮುಂದೆ ಕರೆದುಕೊಂಡು ಹೋಗಿದ್ದಾಳೆ. ಈಗ ಕಾವೇರಿಯೇ ಲಕ್ಷ್ಮೀಯನ್ನು ಬಲವಂತವಾಗಿ ಮಾಟ-ಮಂತ್ರ ಮಾಡಿಸುವವರ ಮುಂದೆ ಕರೆದು ತಂದಿದ್ದಾಳೆ. ನಿನ್ನ ದೇಹದ ಮೇಲೆ ಹಾಳಾದ ಕೀರ್ತಿಯ ದೆವ್ವ ಬಂದಿದೆ ಅನ್ನು ಬಿಡಿಸಬೇಕು ಅಂತ ಲಕ್ಷ್ಮೀ ಮುಂದೆ ಹೇಳಿ ಬಿಟ್ಟಿದ್ದಾಳೆ. ಆಗ ಏಕಾಏಕಿ ಲಕ್ಷ್ಮೀ ಮೈಮೇಲೆ ಕೀರ್ತಿ ಬಂದಿದ್ದು, ಇದನ್ನು ನೋಡಿದ ಕಾವೇರಿ ಮತ್ತೆ ಬೆಚ್ಚಿ ಬಿದ್ದಿದ್ದಾಳೆ.

ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

Advertisment

publive-image

ಇದೇ ಹೊತ್ತಿಗೆ ಅದೇ ಮಂಡಲದ ಬಳಿಕ ವೈಷ್ಣವ್ ಕುಟುಂಬಸ್ಥರು ಬಂದಿದ್ದಾರೆ. ಇವರ ಮುಂದೆ ಲಕ್ಷ್ಮೀ ವೈಷ್ ಬಂದಿದ್ದಾನೆ. ಅವನ ಮುಂದೆ ನೀವು ಸತ್ಯ ಹೇಳಲೇಬೇಕು. ಹೇಳಿ ಹೇಳಿ ಅಂತ ಲಕ್ಷ್ಮೀ ಕಿರುಚಾಡಿದ್ದಾಳೆ. ಆಗ ಇದನ್ನು ನೋಡಿದ ಕಾವೇರಿ ತಡವರಿಸಿದ್ದಾಳೆ. ತಾನು ತೋಡಿದ ಹಳ್ಳಕ್ಕೆ ಕಾವೇರಿ ತಾನೇ ಬಿದ್ದಿದ್ದಾಳೆ. ಈಗಲಾದರೂ ವೈಷ್ಣವ ಮುಂದೆ ತನ್ನ ಅಸಲಿ ಮುಖವಾಡ ಬಯಲು ಮಾಡುತ್ತಾಳಾ, ವೈಷ್ ಮುಂದೆ ಎಲ್ಲಾ ಸತ್ಯ ಹೇಳಿ ಬಿಡುತ್ತಾಳಾ ಅಥವಾ ಅಲ್ಲಿಯೂ ಕೂಡ ಸುಳ್ಳು ಕಥೆ ಕಟ್ಟುತ್ತಾಳಾ ಅಂತ ಮುಂದಿನ ಎಪಿಸೋಡ್​ನಲ್ಲಿ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment