ಈ ವಾರ ಯಾವ ಸೀರಿಯಲ್ಗೆ ಟಿಆರ್ಪಿಯಲ್ಲಿ ಮೊದಲ ಸ್ಥಾನ?
ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!
ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್ ಸೀರಿಯಲ್ ಇವು
ಕಿರುತೆರೆಯಲ್ಲಿ ಸೀರಿಯಲ್ಗಳ ಲೆಕ್ಕಚಾರಗಳು ಜೋರಿದೆ. ವೀಕ್ಷಕರ ಮನಸ್ಸು ವಿಚಲಿತ ಆಗುವಷ್ಟರ ಮಟ್ಟಕ್ಕೆ ಸೀರಿಯಲ್ಗಳ ಹಗ್ಗ-ಜಗ್ಗಾಟ ನಡೆಯುತ್ತಿದೆ. ಪ್ರೇಕ್ಷಕರು ಈ ವಾರ ಯಾವ ಸೀರಿಯಲ್ಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ವೀಕ್ಷಕರು ಯಾವ ಧಾರಾವಾಹಿಯನ್ನ ಹೆಚ್ಚು ನೋಡುತ್ತಿದ್ದಾರೆ ಎಂಬುವುದನ್ನ ತಿಳಿಯೋಕೆ ಇರೋ ಮಾನದಂಡ ಟಿಆರ್ಪಿ. ಈ ವಾರದ ರಿಸಲ್ಟ್ ಬಂದಿದ್ದು, ಸೀರಿಯಲ್ ದುನಿಯಾದಲ್ಲಿ ಪುಟ್ಟಕ್ಕನ್ನದ್ದೇ ದರ್ಬಾರ್ ಬಲು ಜೋರಾಗಿದೆ.
ಕಂಠಿ ಸ್ನೇಹಾ ಮದುವೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, 12.2 ರೇಟಿಂಗ್ ಪಡೆದಿರುವ ಪುಟ್ಟಕ್ಕನ ಮಕ್ಕಳು ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸುತ್ತಿದೆ. 7.8 ರೇಟಿಂಗ್ ಮೂಲಕ ಗಟ್ಟಿಮೇಳ ಎರಡನೇ ಸ್ಥಾನದಲ್ಲಿದೆ. 7.1 ರೇಟಿಂಗ್ ಪಡೆದು ಮೂರನೇ ಸ್ಥಾನವನ್ನ ಇತ್ತಿಚೀಗೆ ಲಾಂಚ್ ಆದ ಅಮೃತಧಾರೆ ಅಲಂಕರಿಸಿದೆ. 5.9 ರೇಟಿಂಗ್ ಪಡೆದುಕೊಂಡು ಶ್ರೀರಸ್ತು ಶುಭಮಸ್ತು ನಾಲ್ಕನೇ ಸ್ಥಾನದಲ್ಲಿದೆ.
ಕತೆಯಲ್ಲಿ ಹೊಸ ತಿರುವು ಪಡೆಯುತ್ತಿರುವ ಲಕ್ಷ್ಮೀ ಬಾರಮ್ಮ ಐದನೇ ಸ್ಥಾನದಲ್ಲಿದ್ದು 5.9 ರೇಟಿಂಗ್ ಪಡೆದಿದೆ. ಭಾಗ್ಯಲಕ್ಷ್ಮೀ 7ನೇ ಸ್ಥಾನದಲ್ಲಿದ್ದು 5.7 ಟಿವಿಆರ್ ಪಡೆದಿದೆ. ಕಲರ್ಸ್ ಕನ್ನಡದ ಮಧ್ಯಾಹ್ನದ ಮನರಂಜನೆಗೂ ಉತ್ತಮ ರೆಸ್ಪಾನ್ಸ್ ಲಭಿಸಿದೆ. ಕ್ರೈಂ ಲೋಕದ ಕತೆಗಳಾದ ಶಾಂತಂ ಪಾಪಂ 1.4 ರೇಟಿಂಗ್ ಪಡೆದಿದ್ದು, ಎರಡೂ ಹೊಸ ಕತೆಗಳಾದ ಗೃಹಲಕ್ಷ್ಮೀ ಹಾಗೂ ಗಂಡ ಹೆಂಡತಿ ಸಮನಾಗಿ 1.3 ರೇಟಿಂಗ್ ಪಡೆದಿವೆ.
ಇನ್ನು ರಿಯಾಲಿಟಿ ಶೋಗಳಿಗೆ ಬರೋದಾದ್ರೆ, ಭರ್ಜರಿ ಬ್ಯಾಚುಲರ್ಸ್ 7.7 ರೇಟಿಂಗ್ ಪಡೆದು ಭರ್ಜರಿಯಾಗಿಯೇ ಒಪನಿಂಗ್ ಪಡೆದಿದೆ. ಒಟ್ಟಿನಲ್ಲಿ ಜ್ಹೀ ಕನ್ನಡದ ಧಾರಾವಾಹಿಗಳು ಟಾಪ್ ಸ್ಥಾನದಲ್ಲಿವೆ. ವೀಕ್ಷಕರ ಮನಸ್ಸು ಉಯ್ಯಾಲೆ ಆಗಿರೋದು ಸತ್ಯ. ವಾರದಿಂದ ವಾರಕ್ಕೆ ವೀಕ್ಷಕರು ಅಭಿರುಚಿ ಬೇರೆ ಆಗ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ