Advertisment

ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?

author-image
admin
Updated On
ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?
Advertisment
  • ಇದುವರೆಗೂ ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ
  • ಅಕ್ಕ ನಿನ್ ಗಂಡ ಹೇಗಿರಬೇಕು ಅಂತ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ
  • ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮದುವೆ ಯಾವಾಗ ಗೊತ್ತಾ?

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಚಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಇದೀಗ ತಮ್ಮ ಫ್ಯಾನ್ಸ್​ಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ.

Advertisment

publive-image

ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ಮಹಾನಟಿ ಕಾರ್ಯಕ್ರಮ ಶುರುವಾಗಿದ್ದು, ಕಿರುತೆರೆ ಲೋಕದಲ್ಲಿ ಹೊಸ ಟ್ರೆಂಡ್ ಶುರು ಮಾಡಿದೆ. ಈ ವೇದಿಕೆಯಲ್ಲಿ ಅನುಶ್ರೀ ನನ್ನ ಮದುವೆ ಆಗೇ ಆಗುತ್ತೆ, ನೀವು ನೋಡೇ ನೋಡ್ತೀರಾ ನೋಡ್ರೋ ಅಂತ ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಮದುವೆ ಆಗುವ ಹುಡುಗ ಹೇಗಿರಬೇಕು ಅಂತ ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕ ವಯಸ್ಸಲ್ಲೇ ಮದುವೆ, ಆಮೇಲೆ ಡಿವೋರ್ಸ್‌.. ಆತ್ಮಹತ್ಯೆಗೂ ಯತ್ನಿಸಿದ್ದೇಕೆ ನಟಿ ಪವಿತ್ರ ಜಯರಾಮ್‌? 

ಅಕ್ಕ ನಿನ್ ಗಂಡ ಹೇಗಿರಬೇಕು ಅಂತ ತರುಣ್ ಸುಧೀರ್ ಕೇಳಿದ ಪ್ರಶ್ನೆಗೆ ಅನುಶ್ರೀ ನೋಡೋಕೆ ಟಾಲ್.. ಡಾರ್ಕ್ & ಹ್ಯಾಂಡ್ಸಮ್ ಆಗಿ ಇರಬೇಕು. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನನ್ನು ಗೌರವದಿಂದ ನೋಡಬೇಕು. ನನ್ನನ್ನ ಯಾರು ರೆಸ್ಪೆಕ್ಟ್ ಮಾಡ್ತಾರೋ ಆ ಥರ ಹುಡುಗಾನೇ ನನ್ಗೆ ಬಹಳ ಇಷ್ಟ ಅಂತ ಹೇಳಿ ನಾಚಿ ನೀರಾಗಿದ್ದಾರೆ.

Advertisment

publive-image

ಮುಂದಿನ ವರ್ಷ ಮದುವೆ ಆಗ್ಲಿ ಅಂತ ಆಶೀರ್ವಾದ ಮಾಡಿ ಸರ್ ಎಂದು ಕೇಳಿದ ಅನುಶ್ರೀಗೆ ನಟ ರಮೇಶ್ ಅರವಿಂದ್ ಮುಂದಿನ ವರ್ಷ ಅಲ್ಲ ಮಹಾನಟಿ ಸೀಸನ್ ಮುಗಿತಿದ್ದ ಹಾಗೆ ನಿನ್ನ ಮದುವೆ ಆಗಲಿ ಎಂದು ವಿಶ್ ಮಾಡಿದ್ದಾರೆ.

publive-image

ರಮೇಶ್ ಅರವಿಂದ್ ಅವರ ಮಾತು ಕೇಳಿ ಅನುಶ್ರೀ ಫುಲ್ ಚಪ್ಪಾಳೆ ಹೊಡೆದು ಖುಷಿ ಪಟ್ಟಿದ್ದಾರೆ. ನನ್ನ ಮದುವೆ ಆಗೇ ಆಗುತ್ತೆ, ನೀವು ನೋಡೇ ನೋಡ್ತೀರಾ ನೋಡ್ರೋ ಅಂತ ವೇದಿಕೆ ಮೇಲೆ ಆ್ಯಂಕರ್ ಅನುಶ್ರೀ ಚಾಲೆಂಜ್ ಮಾಡಿದ್ದಾರೆ.

ಲೇಖಕರು - ಸುಶ್ಮಿತಾ ಕೆ. ಗೌಡ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment