newsfirstkannada.com

ಚಿಕ್ಕ ವಯಸ್ಸಲ್ಲೇ ಮದುವೆ, ಆಮೇಲೆ ಡಿವೋರ್ಸ್‌.. ಆತ್ಮಹತ್ಯೆಗೂ ಯತ್ನಿಸಿದ್ದೇಕೆ ನಟಿ ಪವಿತ್ರ ಜಯರಾಮ್‌?

Share :

Published May 13, 2024 at 8:52pm

Update May 13, 2024 at 8:53pm

    ಪವಿತ್ರಾ ಅವರ ತಂದೆ-ತಾಯಿ ಓದೋದನ್ನ ನಿಲ್ಲಿಸಿ ಮದುವೆ ಮಾಡಿಕೊಟ್ಟರು

    ಹೌಸ್​ ಕೀಪಿಂಗ್​, ಗಾಮೆಂರ್ಟ್ಸ್​​, ಲೈಬ್ರೆರಿಯನ್ ಹಾಗೂ ಸೇಲ್ಸ್​ ಗರ್ಲ್​ ಕೆಲಸ

    ಆತ್ಮಹತ್ಯೆಗೆ ಯತ್ನಿಸಿದ್ದ ನಟಿ.. ಬದುಕು ಕೊನೆಗೊಳಿಸಲು ನಿರ್ಧರಿಸಿದ್ದೇಕೆ?

ನಟಿ ಪವಿತ್ರಾ ಜಯರಾಮ್ ಅವರು ಬಾರ್ನ್​ ವಿತ್​ ಗೋಲ್ಡನ್‌ ಸ್ಫೂನ್ ಆಗಿರಲಿಲ್ಲ. ಒಂದೊತ್ತು ಊಟಕ್ಕೆ ಪರದಾಡಿದ್ದರು. ಮಂಡ್ಯದ ಉಮ್ಮಡಹಳ್ಳಿಯಲ್ಲಿ ಹುಟ್ಟಿದ್ದ ಪವಿತ್ರಾ ಆಗಷ್ಟೇ ಎಸ್​ಎಸ್​ಎಲ್​ಸಿ ಪಾಸ್ ಆಗಿ ಫಸ್ಟ್​ ಪಿಯುಸಿಗೂ ಅಡ್ಮಿಷನ್ ಆಗಿದ್ದರು. ಒಂದೊಳ್ಳೆ ಸಂಬಂಧ ಬಂತು ಅನ್ನೋ ಕಾರಣಕ್ಕೆ ಪವಿತ್ರಾ ಅವರ ತಂದೆ-ತಾಯಿ ಓದೋದನ್ನ ನಿಲ್ಲಿಸಿ ಮದುವೆ ಮಾಡಿಕೊಟ್ಟರು. ಆದರೆ ಪವಿತ್ರಾ ಅವರ ತಂದೆ-ತಾಯಿ ಅಂದ್ಕೊಂಡಂತೆ ಮಗಳ ಜೀವನ ನಡೆಯಲಿಲ್ಲ. ಇಬ್ಬರು ಮಕ್ಕಳಾದರೂ ಪವಿತ್ರಾ ಅವರ ಸಾಂಸರೀಕ ನೌಕೆ ಅಲುಗಾಡಿತ್ತು. ಗಂಡನ ಸ್ವಭಾವ ಪವಿತ್ರಾಗೆ ಇಷ್ಟ ಆಗ್ಲಿಲ್ಲ. ಮಕ್ಕಳ ಹಾಗೂ ತನ್ನ ಭವಿಷ್ಯದ ಬಗ್ಗೆ ಯೋಚಿಸಿದ ಪವಿತ್ರಾ, ಗಂಡನಿಂದ ವಿಚ್ಛೇದನ ಪಡೆದುಕೊಂಡು ದೂರ ಆದರು.

ಜೀವನದ ಬಗ್ಗೆ ಅರಿವೇ ಇಲ್ಲದ ವಯಸ್ಸಲ್ಲಿ ಪವಿತ್ರ ಮದುವೆ!
ಕೆಲವೇ ವರ್ಷಕ್ಕೆ ವಿಚ್ಛೇದನ.. ಒಂದೊತ್ತು ಊಟಕ್ಕೂ ಕಷ್ಟ!
ಗಂಡನಿಂದ ದೂರ ಅದ್ಮೇಲೆ ಪವಿತ್ರಾ ಅವರ ಜೀವನ ಸುಲಭವಾಗಿರಲಿಲ್ಲ. ಗಂಡ ಬಿಟ್ಟವಳು ಅನ್ನೋ ಪಟ್ಟ, ಇಬ್ಬರು ಮಕ್ಕಳು ಜೊತೆಗೆ ತಂದೆ-ತಾಯಿಯ ಜವಾಬ್ದಾರಿ. ಪವಿತ್ರಾಗೆ ಬದುಕಿನ ಪಾಠ ಕಲಿಸಿತು. ಸುಮ್ಮನೇ ಕೂತರೇ ಆಗಲ್ಲ ಅಂತ ಗೊತ್ತಾಯ್ತು. ಬದುಕಿನ ಬಂಡಿ ಸಾಗಬೇಕು ಅಂದ್ರೆ ಏನಾದರೂ ಕೆಲಸ ಮಾಡಲೇಬೇಕು ಅಂತ ನಿರ್ಧರಿಸ್ತಾರೆ. ಅಷ್ಟೊತ್ತಿಗೆ ಪವಿತ್ರಾ ಅವರ ಕುಟುಂಬದ ಪರಿಸ್ಥಿತಿ ತೀರ ಕಷ್ಟದಲ್ಲಿರುತ್ತೆ. ವಯಸ್ಸಾದ ತಂದೆ-ತಾಯಿ, ಮಕ್ಕಳು ಶಿಕ್ಷಣದ ಭಯ ಕಾಡುತ್ತೆ. ಹಾಗಾಗಿ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡ ಪವಿತ್ರಾ ಸಿಕ್ಕ ಸಿಕ್ಕ ಕೆಲಸ ಮಾಡಿದ್ದಾರೆ. ಸಂಬಳ ಸಿಕ್ಕರೇ ಸಾಕು, ಎರಡು ಹೊತ್ತು ಊಟ ಸಿಗುತ್ತೆ ಅನ್ನೋ ಕಾರಣಕ್ಕೆ ದಿನಗೂಲಿ ಕೆಲಸ ಮಾಡಿದ್ದಾರೆ. ಹೌಸ್​ ಕೀಪಿಂಗ್​, ಗಾಮೆಂರ್ಟ್ಸ್​​, ಲೈಬ್ರೆರಿಯನ್ ಹಾಗೂ ಸೇಲ್ಸ್​ ಗರ್ಲ್​ ಆಗಿಯೂ ಕೆಲ್ಸ ಮಾಡಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಅವರಿಗೆ ಕೆಲಸ ಯಾವುದು ಮಾಡ್ತಿದ್ದೀನಿ ಅನ್ನೋದಕ್ಕಿಂತ ಈ ಕೆಲಸ ಮಾಡಿದ್ರೆ ಸಂಬಳ ಸಿಗುತ್ತೆ, ಇದರಿಂದ ತನ್ನ ಕುಟುಂಬಕ್ಕೆ ಸಹಾಯ ಆಗುತ್ತೆ ಅನ್ನೋದಷ್ಟೇ ಮುಖ್ಯವಾಗಿತ್ತು.

ಇದನ್ನೂ ಓದಿ: ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ 

ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ನಟಿ ಪವಿತ್ರಾ ಜಯರಾಮ್​ ಅಪಘಾತದಿಂದ ತಮ್ಮ ಪ್ರಾಣವನ್ನ ಕಳೆದುಕೊಂಡರು. ಆದರೆ ಇದಕ್ಕೂ ಮುಂಚೆಯೇ ಒಂದು ಸಲ ಪವಿತ್ರಾ ಸೂಸೈಡ್​ಗೆ ಪ್ರಯತ್ನ ಪಟ್ಟಿದ್ದರಂತೆ. ಈ ವಿಷಯವನ್ನ ಸ್ವತಃ ಪವಿತ್ರಾ ಅವರೇ ಹೇಳಿಕೊಂಡಿದ್ದರು. ಗಂಡನಿಂದ ವಿಚ್ಛೇದನ ಪಡೆದಾಗ, ಸಮಾಜ ತನ್ನನ್ನು ನೋಡಿದ ರೀತಿ ಹಾಗೂ ತನಗಾದ ಅವಮಾನದಿಂದ ಮನನೊಂದು ಸಾಯೋಕೆ ನಿರ್ಧರಿಸಿದ್ದರಂತೆ. ಆಗ ಪವಿತ್ರಾ ಅವರಿಗೆ ಧೈರ್ಯವಾಗಿ ನಿಂತಿದ್ದು ಅವರ ತಾಯಿ.

ಇದನ್ನೂ ಓದಿ: ‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ.. 

ಅಮ್ಮನೇ ನನ್ನ ಧೈರ್ಯ.. ನಾನು ಈ ಮುಂಚೆಯೂ ಸಂದರ್ಶನವೊಂದರಲ್ಲಿ ಹೇಳಿದ್ದೆ. ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಅಂತ. ಕೆಲವು ಸಲ ಸಮಾಜದಲ್ಲಿ ಒಬ್ಬ ಮಹಿಳೆ ಒಂಟಿಯಾಗಿ ಬದುಕೋದು ಕಷ್ಟ. ಏನೂ ತಪ್ಪು ಮಾಡದೇ ಇದ್ದರೂ ತಪ್ಪು ಮಾಡಿದ ರೀತಿ ಮಾತಾಡ್ತಾರೆ. ಕೆಟ್ಟದಾಗಿ ಮಾತಾಡ್ತಾರೆ. ಇಂತಹದನ್ನ ಮೊದಲ ಸಲ ಕೇಳಿದಾಗ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸಿತ್ತು. ಆಮೇಲೆ ಅನಿಸ್ತು, ಇದು ನನ್ನ ಬದುಕು, ನನ್ನ ಜೀವನ.. ನಾನು ಕಷ್ಟ ಪಡ್ತಿದ್ದೇನೆ, ನಾನು ಕೆಲಸ ಮಾಡ್ತಿದ್ದೇನೆ, ನಾನು ದುಡಿದು ಊಟ ಮಾಡ್ತಿದ್ದೇನೆ, ಅವರೇನೋ ಅಂದ್ರು ಅಂತ ನಾನೇಕೆ ಭಯ ಪಡಬೇಕು, ನೊಂದಕೊಳ್ಳಬೇಕು, ನನ್ನ ಮೇಲೆ ನನಗೆ ನಂಬಿಕೆ ಇರಬೇಕು. ಬೇರೆಯವರ ಬಗ್ಗೆ ನಾನು ಯಾಕೆ ಚಿಂತೆ ಮಾಡಬೇಕು ಅನ್ನಿಸಿತು.
– ಪವಿತ್ರಾ ಜಯರಾಮ್, ನಟಿ

ಅವತ್ತು ಪವಿತ್ರಾ ಅವರಿದ್ದ ಪರಿಸ್ಥಿತಿಯಲ್ಲಿ, ಅವರಿಗೆ ಎದುರಾದ ಅವಮಾನದಿಂದ ತನ್ನ ಬದುಕನ್ನ ಅಂತ್ಯಗೊಳಿಸೋಕೆ ಪ್ರಯತ್ನಿಸಿದ್ದರು. ಆದರೆ ಅವರ ತಾಯಿ ಕೊಟ್ಟ ಧೈರ್ಯ ಹಾಗೂ ಸಮಾಜದ ವಾಸ್ತವತೆ ಅರಿತ ನಂತರ ಇನ್ನೊಂದು ಅವಕಾಶ ತಗೋಬೇಕು ಅಂತ ಮುನ್ನುಗ್ಗಿದರು. ಅವತ್ತು ಪವಿತ್ರಾ ಜಯರಾಮ್ ತೆಗೆದುಕೊಂಡ ನಿರ್ಧಾರ ಇವತ್ತು ಆಕೆಗೆ ತಾನು ಬಯಸಿದಂತೆ ಜೀವಿಸುವ ಅವಕಾಶ ಕೊಟ್ಟಿತ್ತು. ಕನ್ನಡ ಹಾಗೂ ತೆಲುಗು ಸೀರಿಯಲ್ ಲೋಕದಲ್ಲಿ ಪವಿತ್ರಾ ಜಯರಾಮ್​ದು ಪ್ರಚಲಿತ ಹೆಸರಾಗಿತ್ತು. ಜೋಕಾಲಿ, ರೋಬೋ ಫ್ಯಾಮಿಲಿ, ರಾಧಾ ರಮಣ, ನೀಲಿ ಸೇರಿ ಕನ್ನಡದಲ್ಲಿ 16ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಹಲವು ಸೀರಿಯಲ್ ಮಾಡ್ತಿರುವ ಪವಿತ್ರಾ, ಸದ್ಯ ತ್ರಿನಯನಿ ಅನ್ನೋ ಧಾರಾವಾಹಿ ಮೂಲಕ ಜನ ಮನ ಗಳಿಸಿದ್ದರು. ಈ ಧಾರಾವಾಹಿಯಲ್ಲಿ ತ್ರಿಲೋತ್ತನಿ ಎಂಬ ಪಾತ್ರದ ಮೂಲಕ ಅಭಿಮಾನ ಗಳಿಸಿಕೊಂಡಿದ್ದರು. ಆದ್ರೀಗ ಈ ತ್ರಿಲೋತ್ತನಿ ತನ್ನ ಜೀವನದ ಪಯಣ ಅರ್ಧಕ್ಕೆ ಮುಗಿಸಿ ಆಘಾತ ಕೊಟ್ಟಿದ್ದಾರೆ.

ಚಂದ್ರಕಾಂತ್ ಜೊತೆ ಹೊಸ ಬದುಕು.. ಹೊಸ ಹೆಜ್ಜೆ!
ಜೀವನದಲ್ಲಿ ಸಾಕಷ್ಟು ಏಳು-ಬೀಳು, ನೋವು ಕಂಡಿದ್ದ ಪವಿತ್ರಾ ಜಯರಾಮ್​ ಬದುಕಿನಲ್ಲಿ ಮತ್ತೊಂದು ತಿರುವು ಚಂದ್ರಕಾಂತ್ ಎಂಟ್ರಿ. ಹೌದು, ಗಂಡನಿಂದ ಡಿವೋರ್ಸ್ ಪಡೆದು ಮಕ್ಕಳಿಗಾಗಿ ಹಗಲಿರುಳು ದುಡಿಯುತ್ತಿದ್ದ ಪವಿತ್ರಾಗೆ ನಟ ಚಂದ್ರಕಾಂತ್ ಜೊತೆಯಾಗಿದ್ದರು. ಕಳೆದ ಎರಡು ವರ್ಷದಿಂದ ಪವಿತ್ರಾ ಬಾಳಲ್ಲಿ ಬೆಳಕಾಗಿ ನಿಂತಿದ್ದರು ಅಂತಾನೇ ಹೇಳಲಾಗ್ತಿದೆ. ತ್ರಿನಯನಿ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿರುವ ಚಂದ್ರಕಾಂತ್​ ಜೊತೆ ಪವಿತ್ರಾ ಹೊಸ ಜೀವನ ಆರಂಭಿಸಿದ್ದರು. ಕಳೆದ ಎರಡು ವರ್ಷದಿಂದ ಚಂದ್ರಕಾಂತ್ ಜೊತೆ ಬದುಕು ಹಂಚಿಕೊಂಡಿದ್ದ ಪವಿತ್ರಾ ಇವತ್ತು ಅದೇ ಚಂದ್ರಕಾಂತ್​ ಜೊತೆ ಬೆಂಗಳೂರಿಂದ ಹೈದರಾಬಾದ್​ಗೆ ಹೋಗುವಾಗ ಅಪಘಾತದಿಂದ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕ ವಯಸ್ಸಲ್ಲೇ ಮದುವೆ, ಆಮೇಲೆ ಡಿವೋರ್ಸ್‌.. ಆತ್ಮಹತ್ಯೆಗೂ ಯತ್ನಿಸಿದ್ದೇಕೆ ನಟಿ ಪವಿತ್ರ ಜಯರಾಮ್‌?

https://newsfirstlive.com/wp-content/uploads/2024/05/pavitra1.jpg

Load More