newsfirstkannada.com

ಅಶ್ಲೀಲ ವಿಡಿಯೋ ವೈರಲ್‌ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಜ್ಯೋತಿ ರೈ; ಅಸಲಿಗೆ ಆಗಿದ್ದೇನು?

Share :

Published May 10, 2024 at 1:07pm

    ಕನ್ನಡ ಕಿರುತೆರೆಯ ಕಿನ್ನರಿ ಸೀರಿಯಲ್‌ನಲ್ಲಿ ಅಭಿನಯಿಸಿದ್ದ ಜ್ಯೋತಿ ರೈ

    ಅಶ್ಲೀಲ ವಿಡಿಯೋ ವಿರುದ್ಧ ದೂರು ನೀಡಿರುವ ನಟಿ ಜ್ಯೋತಿ ರೈ ಹೇಳಿದ್ದೇನು?

    ಅಶ್ಲೀಲ ವಿಡಿಯೋ ಕೇಸ್‌ಗೆ ನಟಿ ಜ್ಯೋತಿ ರೈ, ಪತಿ ಸುಕು ಪೂರ್ವಜ್‌ ಸಂದೇಶ

ಕನ್ನಡ ಕಿರುತೆರೆಯ ಕಿನ್ನರಿ ಸೀರಿಯಲ್ ನಟಿ ಹಾಗೂ ಬಹುಭಾಷಾ ಸಿನಿಮಾ ತಾರೆ ಜ್ಯೋತಿ ರೈ ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿತ್ತು. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ನಟಿ ಜ್ಯೋತಿ ರೈ ಅವರು ಇದೀಗ ಹೊಸ ಸಂದೇಶ ನೀಡುವುದರ ಮೂಲಕ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.

ಬಹುಭಾಷಾ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಹಲ್ ಚಲ್ ಎಬ್ಬಿಸಿತ್ತು. ಆದರೆ ಈ ಬಗ್ಗೆ ಬಹಳ ದಿನಗಳ ಮೊದಲೇ ಜ್ಯೋತಿ ರೈ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು‌ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ವೈರಲ್‌; ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ; ಆಗಿದ್ದೇನು? 

ಹರಿದಾಡುತ್ತಿರುವ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ಫೇಕ್ ಆಗಿವೆ. ನನ್ನ ಫೋಟೋ‌ ಮತ್ತು ವಿಡಿಯೋ ಬಳಸಿ ನಕಲಿ ವಿಡಿಯೋ ವೈರಲ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಜ್ಯೋತಿ ರೈ ಉಲ್ಲೇಖಿಸಿದ್ದಾರೆ. ನನಗೆ ಕಿರುಕುಳ ಹಾಗೂ ಮಾನನಷ್ಟ ಮಾಡುವ ಉದ್ದೇಶದಲ್ಲಿ ಕೆಲವು ಅಶ್ಲೀಲ ಚಿತ್ರಗಳನ್ನು ಹಂಚಿದ್ದಾರೆ ಎಂದು ಜ್ಯೋತಿ ರೈ ಆರೋಪಿಸಿದ್ದರು.

ನಟಿ ಜ್ಯೋತಿ ರೈ ಹಾಗೂ ಅವರ ಪತಿ ಸುಕು ಪೂರ್ವಜ್‌

ಅಶ್ಲೀಲ ವಿಡಿಯೋ ವೈರಲ್ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿರುವಾಗಲೇ ನಟಿ ಜ್ಯೋತಿ ರೈ ಅವರು ಇವತ್ತು ಹೊಸ ಸಂದೇಶ ನೀಡಿದ್ದಾರೆ. ನಟಿ ಜ್ಯೋತಿ ರೈ ಅವರು ತನ್ನ ಪತಿ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಜ್ಯೋತಿ ರೈ ಅವರ ಪತಿ ಸುಕು ಪೂರ್ವಜ್‌ ಸಹ ಫೋಟೋ ಹಂಚಿಕೊಂಡಿದ್ದು, ಲವ್‌ ಇಮೋಜಿಯನ್ನು ಹಾಕಿದ್ದಾರೆ. ಇದು ನಟಿ ಜ್ಯೋತಿ ರೈ ಅವರು ಈ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ನನ್ನ ವೈಯಕ್ತಿಕ ಜೀವನದ ಮೇಲೆ ಯಾವ ರೀತಿಯಲ್ಲೂ ಪರಿಣಾಮ ಬೀರಿಲ್ಲ ಎಂಬ ಸಂದೇಶ ರವಾನಿಸಿದಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಶ್ಲೀಲ ವಿಡಿಯೋ ವೈರಲ್‌ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಜ್ಯೋತಿ ರೈ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Jyothi-Poorvaj2.jpg

Load More