/newsfirstlive-kannada/media/post_attachments/wp-content/uploads/2024/05/PAVITRA-JAYARAMA-2.jpg)
ಮಂಡ್ಯ: ಪ್ರತಿಭಾನ್ವಿತ ಕಿರುತೆರೆ ನಟಿ ಪವಿತ್ರ ಜಯರಾಂ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ್ದು, ಇಂದು ಅವರ ಸ್ವಗ್ರಾಮದವಾದ ಮಂಡ್ಯದ ಉಮ್ಮಡಹಳ್ಳಿಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕನ್ನಡ, ತೆಲುಗು ಭಾಷೆಗಳಲ್ಲಿ ಹಲವು ಧಾರಾವಾಹಿಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರಲ್ಲಿ ಸೈ ಎನ್ನಿಸಿಕೊಂಡಿದ್ದ ಪ್ರತಿಭಾನ್ವಿತ ಕಿರುತೆರೆ ನಟಿ ನಿನ್ನೆ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ಬೆಂಗಳೂರಿನಿಂದ ಹೈದರಾಬಾದ್‌ಗೆ ಕಾರಿನಲ್ಲಿ ಪ್ರಯಾಣ ಮಾಡ್ತಾ ಇದ್ದರು. ಈ ವೇಳೆ ಅಪಾರ ಪ್ರಮಾಣದ ಮಳೆ ಸುರಿದ ಕಾರಣ ಪ್ರಯಾಣ ತಡವಾಗಿದೆ. ಅಲ್ಲದೇ ಮೂರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಬಳಿಕ ಪ್ರಯಾಣ ಮುಂದುವರಿಸಿದ ನಂತರ ಬಸ್‌ವೊಂದು ವೇಗವಾಗಿ ಬಂದಿದ್ದು, ಈ ವೇಳೆ ಎದುರಿನಿಂದ ಇನ್ನೊಂದು ಕಾರು ವೇಗವಾಗಿ ಬಂದಿದೆ. ಆಗ ಡ್ರೈವರ್ ಬ್ರೇಕ್ ಹಾಕಿದ ಪರಿಣಾಮ ಕಾರು ಅಪಘಾತಗೊಂಡಿದೆ. ಈ ವೇಳೆ ಕಾರಿನಲ್ಲಿ ಇದ್ದ ಎಲ್ಲರಿಗೂ ಪೆಟ್ಟುಬಿದ್ದಿದೆ. ಪವಿತ್ರ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಆಂಬುಲೆನ್ಸ್ ಬರುವುದು ಸಹ ತಡವಾಗಿದೆ, ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ ಬ್ರೈನ್ ಸ್ಟ್ರೋಕ್ ಆಗಿ ಪವಿತ್ರ ಜಯರಾಂ ಮೃತಪಟ್ಟದ್ದಾರೆ.
ಇದನ್ನೂ ಓದಿ:ರೈತರಿಗೆ ಗುಡ್​ನ್ಯೂಸ್.. ಬರ್ತಿದೆ ‘ಲಾ ನಿನಾ’! ಭಾರತಕ್ಕೆ ಎಚ್ಚರಿಕೆ ಕೊಟ್ಟ ಅಮೆರಿಕ..!
/newsfirstlive-kannada/media/post_attachments/wp-content/uploads/2024/05/PAVITRA-JAYARAM-2.jpg)
ಇಂದು ಪವಿತ್ರ ಜಯರಾಂ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಅವರ ಸ್ವಗ್ರಾಮವಾದ ಮಂಡ್ಯದ ಉಮ್ಮಡಹಳ್ಳಿ ಗ್ರಾಮದಲ್ಲಿ ಇರಿಸಲಾಯಿತು. ಈ ವೇಳೆ ಪವಿತ್ರ ಮಕ್ಕಳಾದ ಪ್ರಜ್ವಲ್, ಪ್ರತಿಕ್ಷಾ, ಪತಿ ಶಿವಕುಮಾರ್, ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಪವಿತ್ರ ಅವರ ಅಗಲಿಗೆ ಕುಟುಂಬಸ್ಥರಲ್ಲಿ ತುಂಬಲಾರದ ನೋವು ತಂದಿದೆ. ಈ ವೇಳೆ ಅವರೊಂದಿಗೆ ಕೆಲಸ ಮಾಡಿದ್ದ ಕಿರುತೆರೆ ಕಲಾವಿದರು ಪವಿತ್ರ ಅವರ ಅಂತಿಮ ದರ್ಶನ ಪಡೆದರು. ಬಳಿಕ ಉಮ್ಮಡಹಳ್ಳಿಯ ಅವರ ಜಮೀನಿನಲ್ಲಿ ಒಕ್ಕಲಿಗ ಸಮುದಾಯದಂತೆ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಮಗ ಪ್ರಜ್ವಲ್ ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದು, ಬಳಿಕ ಪಂಭೂತಗಳಲ್ಲಿ ಪವಿತ್ರ ಜಯರಾಂ ಲೀನರಾದರು.
ಇದನ್ನೂ ಓದಿ:‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ..
/newsfirstlive-kannada/media/post_attachments/wp-content/uploads/2024/05/PAVITRA-JAYARAM-1-1.jpg)
ಒಟ್ಟಾರೆ ತಮ್ಮ ನಟನೆಯ ಮೂಲಕ ಕಿರುತೆರಯಲ್ಲಿ ಸೈ ಎನ್ನಿಸಿಕೊಂಡಿದ್ದ ಪವಿತ್ರ ಅವರು ಇನ್ನಿಲ್ಲ. ತಾಯಿಯನ್ನು ಕಳೆದುಕೊಂಡಿರುವ ಪವಿತ್ರ ಅವರ ಮಕ್ಕಳು ತಬ್ಬಲಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us