newsfirstkannada.com

ಕನ್ನಡತಿ ರಂಜನಿ ಕೈ ಹಿಡಿಯಲಿರೋ ಹುಡುಗ ಯಾರು? ಸಾಗರ್‌ ಭಾರದ್ವಾಜ್ ಹಿನ್ನೆಲೆ ಏನು?

Share :

Published August 29, 2024 at 5:43pm

    ಕನ್ನಡತಿ ಸೀರಿಯಲ್​ ಮೂಲಕ ಅತಿ ಹೆಚ್ಚು ಫ್ಯಾನ್ಸ್​ ಗಳಿಸಿಕೊಂಡ ನಟಿ

    ನಟಿ ರಂಜನಿ ರಾಘವನ್ ಪೋಸ್ಟ್​ ನೋಡಿ ಬೇಸರಗೊಂಡ ಕೆಲ ಫ್ಯಾನ್ಸ್​

    ಕನ್ನಡತಿ ರಂಜನಿ ರಾಘವನ್ ಹುಡುಗ ಸಾಗರ್‌ ಭಾರದ್ವಾಜ್ ಯಾರು ಗೊತ್ತಾ?

ಕಿರುತೆರೆಯ ಜನ ಮೆಚ್ಚಿದ ಸೀರಿಯಲ್​ ಎಂದರೆ ಅದು ಕನ್ನಡತಿ. ಈ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ರಂಜನಿ ರಾಘವನ್ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡತಿ ಸೀರಿಯಲ್​​ ಮುಕ್ತಾಯದ ಬಳಿಕ ಕೊಂಚ ಬ್ರೇಕ್​​ ತೆಗೆದುಕೊಂಡಿದ್ದ ನಟಿ ರಂಜನಿ ರಾಘವನ್ ಅವರು ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ. ಆದರೆ ಇದರ ಮಧ್ಯೆ ನಟಿ ರಂಜನಿ ರಾಘವನ್ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಸಿಹಿ ಸುದ್ದಿ ಕೊಟ್ಟ ನಟಿ ರಂಜನಿ ರಾಘವನ್.. ಕನ್ನಡತಿ ಮನಗೆದ್ದ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ?

ಹೌದು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತನ್ನ ಲೈಫ್‌ ಪಾಟ್ನರ್‌ ಬಗ್ಗೆ ತಿಳಿಸಿದ್ದಾರೆ. ರಂಜನಿ ರಾಘವನ್‌ ಲವ್‌ ಸಾಗರ್‌ ಭಾರಧ್ವಜ್‌ ಅಂತ ಬರೆದುಕೊಂಡಿದ್ದಾರೆ. ಸಾಗರ್‌ ಭಾರಧ್ವಜ್‌ ಜೊತೆಗೆ ಕನ್ನಡಿ ಮುಂದೆ ನಿಂತಕೊಂಡ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ನನ್ನ ಹುಡುಗ, ಲೈಫ್‌ ಪಾಟ್ನರ್‌ ಎಂಬ ಹ್ಯಾಷ್‌ಟ್ಯಾಗ್‌ನಡಿ ಈ ಲೈಫ್‌ ಪಾಟ್ನರ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಇದೇ ಫೋಟೋವನ್ನು ನೋಡಿದ ಕೆಲ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಬೇಸರ ಹೊರ ಹಾಕಿದ್ದಾರೆ.

ಯಾರು ಈ ಸಾಗರ್‌ ಭಾರದ್ವಾಜ್? 

ನಟಿ ರಂಜನಿ ರಾಘವನ್ ಅವರು ಸಾಗರ್‌ ಭಾರದ್ವಾಜ್ ಅವರ ಬಗ್ಗೆ ಯಾವ ಮಾಹಿತಿಯೂ ಹಂಚಿಕೊಂಡಿಲ್ಲ. ಆದರೆ ಸಾಗರ್‌ ಭಾರದ್ವಾಜ್ ಅವರು ಅಥ್ಲೇಟ್‌ ಎನ್ನಲಾಗುತ್ತಿದೆ. ರನ್ನರ್‌, ಸೈಕಲಿಸ್ಟ್‌, ಬೈಕರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. ಸಾಗರ್‌ ಭಾರದ್ವಾಜ್ ಬಳಿ bullet 350cc ಇದೆ. ಇದೇ ಬುಲೆಟ್‌ನಲ್ಲಿ 1 ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಸೈಕಲ್‌ನಲ್ಲಿ 2 ಲಕ್ಷ ಕಿಲೋ ಮೀಟರ್ ಪ್ರಯಾಣಿಸಿದ್ದಾರೆ. ಇನ್ನೂ ಇವರ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಈ ಬಗ್ಗೆ ಖುದ್ದಾಗಿ ರಂಜನಿ ಅವರೇ ತಿಳಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡತಿ ರಂಜನಿ ಕೈ ಹಿಡಿಯಲಿರೋ ಹುಡುಗ ಯಾರು? ಸಾಗರ್‌ ಭಾರದ್ವಾಜ್ ಹಿನ್ನೆಲೆ ಏನು?

https://newsfirstlive.com/wp-content/uploads/2024/08/ranjani-raghavn.jpg

Load More