/newsfirstlive-kannada/media/post_attachments/wp-content/uploads/2024/09/Kareena-Kapoor.jpg)
ಕರೀನಾ ಕಪೂರ್​ ಖಾನ್​​ ಭಾರತೀಯ ಚಿತ್ರರಂಗದ ಅಪ್ರತಿಮ ನಟಿಯಲ್ಲಿ ಒಬ್ಬರು. ಜಬ್​ ವಿ ಮೇಟ್​​, ಚಮೇಲಿ, ಹೀರೋಯಿನ್​​ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಅನೇಕ ಅಭಿಮಾನಿಗಳ ಮನ ಕದ್ದ ನಟಿ. ಅಂದಹಾಗೆಯೇ ಕರೀನಾ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 25 ವರ್ಷ ಸಂದಿದೆ. ಇದೇ ಸಂತಸದಲ್ಲಿ ವಿಶೇಷ ಚಲನಚಿತ್ರೋತ್ಸವವನ್ನು ಆಚರಿಸಲಾಗುತ್ತಿದೆ.
ಕರೀನಾ ಕಪೂರ್​ ಖಾನ್​​​ ಹೆಸರಿನಲ್ಲಿ ಕೆಕೆಕೆ ಫಿಲ್ಮ್​​ ಫೆಸ್ಟಿವಲ್​​ ನಡೆಸಲಾಗುತ್ತಿದೆ. 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಯಲಿಕ್ಕಿದೆ. ಅಂದಹಾಗೆಯೇ ಈ ಸಂತಸದಲ್ಲಿ ನಟಿ ಕರೀನಾ ಫೋಟೋಶೂಟ್​​ ಕೂಡ ಮಾಡಿಸಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಿವಿಆರ್​​ ಕೂಡ ಟ್ವೀಟ್​​ ಮಾಡಿದ್ದು, ಕರೀನಾ ಕಪೂರ್​​​ ಖಾನ್​ ಫಿಲ್ಮ್​​​ ಫೆಸ್ಟಿವಲ್​​​ ಸೆಪ್ಟೆಂಬರ್​​ 20ರಿಂದ ಸೆಪ್ಟೆಂಬರ್​​ 27ರವರೆಗೆ ನಡೆಯಲಿದೆ ಎಂದು ಬರೆದುಕೊಂಡಿದೆ. ಇನ್ನು ಇಮ್ತಿಯಾಜ್​ ಅಲಿ ಅವರ ಜಬ್​ ವಿ ಮೆಟ್​​, ಕರಣ್​ ಜೋಹರ್​ ಅವರ ಕಭಿ ಖುಷಿ ಕಭಿ ಗಮ್​, ಸಂತೋಷ್​​ ಶಿವನ್​ ಅವರ ಅಶೋಕಾ, ಸುದೀರ್​ ಮಿಶ್ರಾ ಅವರ ಚಮೇಲಿ, ವಿಶಾಲ್​​ ಭಾರದ್ವಜ್​ ಅವರ ಓಂಕಾರ ಸಿನಿಮಾ ನೋಡುವ ಅವಕಾಶವನ್ನು ತೆರೆದಿಟ್ಟಿದೆ.
View this post on Instagram
ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ
ಕರೀನಾ 2000ರಲ್ಲಿ ರೆಪ್ಯೂಜಿ ಸಿನಿಮಾದ ಮೂಲಕ ಬಾಳಿವುಡ್​ಗೆ ಕಾಲಿಟ್ಟರು. ಈ ಚಿತ್ರ ಫ್ಲಾಪ್​ ಆಗಿತ್ತು. ಬಳಿಕ ‘ಮುಝೆ ಕುಛ್​ ಕೆಹನಾ ಹೈ’ ಸಿನಿಮಾದಲ್ಲಿ ನಟಿಸಿದರು. ಅದರು ಹಿಟ್​​ ನೀಡಿದಲ್ಲದೆ ಗುರುತಿಸುವಂತೆ ಮಾಡಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us