newsfirstkannada.com

×

ಬಿಗ್​ಬಾಸ್​ಗೆ ಪಕ್ಕಾ ಹೋಗ್ತಾರಾ ತುಕಾಲಿ ಸಂತು ಹೆಂಡತಿ? ಸೀಸನ್ 11ರ​ ಬಗ್ಗೆ ಮಾನಸ ಹೇಳಿದ್ದೇನು?

Share :

Published September 19, 2024 at 6:20am

    ಬಿಗ್​ಬಾಸ್​ಗೆ ಹೋಗುವ ಕುರಿತು ಮಾನಸ ಸಂತು ಮಾತಾಡಿದ್ದೇನು?

    ಬಿಗ್​ಬಾಸ್ ದೊಡ್ಡ ಯುನಿರ್ವಸಿಟಿ, ಅಲ್ಲಿ ಹೋದವನೇ ಪುಣ್ಯವಂತ

    ಹಿಂದಿ, ತೆಲುಗು ಬಿಗ್​ಬಾಸ್ ಸ್ಟಾರ್ಟ್​ ಆಗಿವೆ, ಕನ್ನಡದ್ದು ಯಾವಾಗ?

ಹಿಂದಿ ಹಾಗೂ ತೆಲುಗು ಬಿಗ್​ ಬಾಸ್ ಶೋ ಈಗಾಗಲೇ ಆರಂಭವಾಗಿವೆ. ಆದರೆ ಕನ್ನಡದ ಬಿಗ್​ಬಾಸ್ ಯಾವಾಗ ಬರುತ್ತೋ ಎಂದು ಫ್ಯಾನ್ಸ್ ಕಾತುರದಿಂದ ಇದ್ದಾರೆ. ಅದರಲ್ಲಿ ಈ ಸಲದ ಬಿಗ್​ಬಾಸ್​ ಸೀಸನ್​ಗೆ ಯಾರು ಯಾರು ಕಂಟೆಸ್ಟೆಂಟ್ ಆಗಿ ಹೋಗಬಹುದು ಎನ್ನುವ ಕುತೂಹಲ ಕೂಡ ದುಪ್ಪಾಟ್ಟಾಗಿದೆ. ಇದರ ಜೊತೆ ಜೊತೆಗೆ ನನ್ನ ಹೆಂಡತಿ ಈ ಬಾರಿ ಬಿಗ್​ ಬಾಸ್​ ಶೋಗೆ ಸೆಲೆಕ್ಟ್ ಆದರೆ ಸಾಕು ಕೈ, ಕಾಲು ಕಟ್ಟಿ ನಾನೇ ಹೋಗಿ ಬಿಗ್​ಬಾಸ್ ಮನೆಗೆ ಹಾಕಿ ಬರುತ್ತೇನೆ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.

ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸ ಅವರು ಕೆಲ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಆಫರ್ ಬಂದರೆ ಬಿಗ್​ಬಾಸ್​ ಸೀಸನ್-11ಕ್ಕೆ ಹೋಗುತ್ತೀರಾ ಎನ್ನುವ ಪ್ರಶ್ನೆ ಉತ್ತರಿಸಿದ ಮಾನಸ ಅವರು, ನನಗೆ ಗೊತ್ತಿಲ್ಲ. ಇದನೆಲ್ಲ ನನ್ನ ಗಂಡನನ್ನ ಕೇಳಬೇಕು. ಗಂಡ ಹ್ಹೂ ಅಂದರೆ ಹೋಗಿ ಬಿಗ್​ಬಾಸ್​ನ ನೋಡಿಕೊಂಡೇ ಬರೋಣ ಅಂತ ಇದ್ದೀನಿ. ಆದರೆ ಒಂದು ವೇಳೆ ನಾನು ಸೆಲೆಕ್ಟ್​ ಆದರೆ ಎಲ್ಲರಿಗಿಂತ ಮೊದಲ ನನ್ನ ಕೈ, ಕಾಲು ಕಟ್ಟಿ ಅವರೇ (ತುಕಾಲಿ ಸಂತು) ನನ್ನನ್ನು ಬಿಗ್​ಬಾಸ್​ ಮನೆಗೆ ಹಾಕಿ ಬರುತ್ತೀನಿ ಅಂತ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಗ್​ಬಾಸ್​ಗೆ ಹೋಗೋದು ಅಂತ ಮೆಂಟಲಿ ಪ್ರಿಪೇರ್ ಆಗಿಲ್ಲ. ಇಲ್ಲಿ ಹೇಗಿದ್ದಿನೋ ಹಾಗೇ ಒಳಗೆ ಇರುತ್ತಿನಿ. ಬಿಗ್​ಬಾಸ್​ನಿಂದ ಫೋನ್ ಬರುತ್ತೆ ಅಂತನೂ ನಾನು ಅನ್ಕೊಂಡಿಲ್ಲ. ಹೋದ ಸೀಸನ್​ ಅವರನ್ನು ಕಳುಹಿಸಿ, ಈ ಸಲ ನನ್ನನ್ನು ಕಳುಹಿಸ್ತಾರಾ?. ಅದೇನು ಫ್ಯಾಮಿಲಿ ಶೋನಾ? ಎಂದು ಮಾನಸ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿಗೆ ವೆಲ್​​ಕಮ್ ಹೇಳಿದ ನಟಿ ಕವಿತಾ ಗೌಡ- ಚಂದನ್ ಕುಮಾರ್​.. ಗಂಡಾ, ಹೆಣ್ಣಾ..?

ನಾನು ಬಿಗ್​ಬಾಸ್​ ಮನೆಯಲ್ಲಿ 111 ದಿನ ಒಳಗಿದ್ದಾಗ ಹೊರಗಡೆ ನನ್ನ ಹೆಂಡತಿ ಸಿಕ್ಕಾಪಟ್ಟೆ ಸ್ಕೋಪ್ ತಗೊಂತಿದ್ದಳು. ನೀವು ಹಂಗೆ ಆಡಬೇಕು. ಹೀಗೆ ಆಡಬೇಕು ಎಂದು ಹೇಳುತ್ತಿದ್ದರು. ಬಿಗ್ ಬಾಸ್ ಒಳಗೆ ಎಷ್ಟು ಕಷ್ಟ ಇದೆ ಎಂದು ಇವರಿಗೆ ಗೊತ್ತಾಗಬೇಕು. ಅಲ್ಲಿ ತಮಾಷೆ ಇರಲ್ಲ. ಒಂದೊಂದು ದಿನ ಕಳೆಯೋದು ಒಂದೊಂದು ನರಕ ಅದು. ಒಂದು ವೇಳೆ ಯಾವುದಾದರೂ ಅವಕಾಶ ಬಂದು ಯಾರಾದರೂ ಫೋನ್ ಮಾಡಿದರೆ, ಖಂಡಿತವಾಗಲೂ ಕಳುಹಿಸುತ್ತೇನೆ. ಏಕೆಂದರೆ ಬಿಗ್ ಬಾಸ್ ಅನುಭವ ಗೊತ್ತಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

ಪ್ರಪಂಚದಲ್ಲಿ ಬಿಗ್​ಬಾಸ್ ಅಂತ ಅನುಭವ ಪಡೆಯೋಕೆ ಪುಣ್ಯ ಮಾಡಿರಬೇಕು. ಆ ಟಾಸ್ಕ್​ ಅಲ್ಲಿ ಗೆದ್ದವನು ಜೀವನದಲ್ಲಿ ಎಲ್ಲಿ ಬೇಕಾದರೂ ಗೆಲ್ಲುತ್ತಾನೆ. ಬಿಗ್ ಬಾಸ್ ಅನ್ನೋದು ದೊಡ್ಡ ಯುನಿರ್ವಸಿಟಿ. ಅಲ್ಲಿ ಹೋದವನೇ ಪುಣ್ಯವಂತ. ಅಲ್ಲಿಂದ ಬಂದ ಮೇಲೆ ಬದುಕಿನ ಬಗ್ಗೆ ಚಿಂತನೆ, ತಾಳ್ಮೆ ಎಲ್ಲ ಆರಂಭವಾಗುತ್ತದೆ. ಡಾಕ್ಟರೇಟ್ ತೆಗೆದುಕೊಂಡು ಬಂದಂತೆ ಆಗುತ್ತೆ. ಚಾನ್ಸ್​ ಬಂದರೆ ಹೆಂಡತಿನಾ ಬಿಗ್​ಬಾಸ್​ಗೆ ಕಳುಹಿಸಿಕೊಡುತ್ತೀನಿ ಎಂದು ತುಕಾಲಿ ಸಂತು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ಗೆ ಪಕ್ಕಾ ಹೋಗ್ತಾರಾ ತುಕಾಲಿ ಸಂತು ಹೆಂಡತಿ? ಸೀಸನ್ 11ರ​ ಬಗ್ಗೆ ಮಾನಸ ಹೇಳಿದ್ದೇನು?

https://newsfirstlive.com/wp-content/uploads/2024/09/TUKALI_SANTU.jpg

Load More