newsfirstkannada.com

×

ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

Share :

Published September 17, 2024 at 1:47pm

Update September 17, 2024 at 1:51pm

    4 ವರ್ಷದ ಮಗುವನ್ನು ಅಗಲಿದ 34 ವರ್ಷದ ಅರ್ಚನಾ ಕಾಮತ್‌ ದುರಂತ

    ಮಹಿಳೆಯ ಅಕಾಲಿಕ ನಿಧನಕ್ಕೆ ಬೆಚ್ಚಿ ಬಿದ್ದ ಸಂಬಂಧಿಕರು, ಆತ್ಮೀಯರು

    ಬೇರೆಯವರಿಗಾಗಿ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ

ಉಡುಪಿ: ದಾನಗಳಲ್ಲೇ ಶ್ರೇಷ್ಠ ದಾನ ಜೀವದಾನ. ಬೇರೆಯವರ ಜೀವ ಉಳಿಸಲು ಹೋದ ಮಹಿಳೆ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಅರ್ಚನಾ ಕಾಮತ್‌ ಮೃತ ದುರ್ದೈವಿ.

ಇದನ್ನೂ ಓದಿ: Good News: ಮಾರಣಾಂತಿಕ ಕ್ಯಾನ್ಸರ್​ಗೆ ಸಿಕ್ಕೇ ಬಿಡ್ತು ರಾಮಬಾಣ; ಈ ವ್ಯಾಕ್ಸಿನ್ ಪವರ್ ಎಂತಹದು..? 

34 ವರ್ಷದ ಅರ್ಚನಾ ಕಾಮತ್‌ ಅವರು ಸದಾ ಸಮಾಜಮುಖಿಯಾಗಿದ್ದರು. ಬೇರೆಯವರ ಕಷ್ಟಕ್ಕೆ ಸದಾ ಮಿಡಿಯುತ್ತಿದ್ದರು. ಹೀಗೆ ಸಂಬಂಧಿಕ ಮಹಿಳೆಯ ಆಪರೇಷನ್‌ಗೆ ಸಹಾಯ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಅರ್ಚನಾ ಅವರು ಕುಂದಾಪುರ ತಾಲೂಕಿನ ಕೊಟೇಶ್ವರ ಮೂಲದವರು. ಇವರು 69 ವರ್ಷದ ತಮ್ಮ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದರು. ಯಕೃತ್ (Liver) ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ನಿಮಗಿದು ಗೊತ್ತಾ..? ಮಹಿಳೆಯರು ಏಕೆ ಮೂಗು ಚುಚ್ಚಿಸಿಕೊಳ್ಳುತ್ತಾರೆ; ಇದರ ಹಿಂದಿನ ಲಾಭವೇನು? 

ಲೀವರ್ ಆಪರೇಷನ್ ವೇಳೆ ಅರ್ಚನಾ ಅವರು ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಅರ್ಚನಾ ಕಾಮತ್ ಅವರ ಅಕಾಲಿಕ ನಿಧನದಿಂದ ಸಂಬಂಧಿಕರು, ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಅವರು ಎಲ್ಲರೊಂದಿಗೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದರು. ಮೃತರು ಪತಿ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

https://newsfirstlive.com/wp-content/uploads/2024/09/Udupi-Woman-Death-1.jpg

Load More