ಕೆಕೆಕೆ ಫಿಲ್ಮ್ ಫೆಸ್ಟಿವಲ್ ಆಯೋಜಿಸಿದ ಪಿವಿಆರ್
ಹಿಂದಿ ಸಿನಿಮಾ ರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ
15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ಕೆಕೆಕೆ ಫೆಸ್ಟಿವಲ್
ಕರೀನಾ ಕಪೂರ್ ಖಾನ್ ಭಾರತೀಯ ಚಿತ್ರರಂಗದ ಅಪ್ರತಿಮ ನಟಿಯಲ್ಲಿ ಒಬ್ಬರು. ಜಬ್ ವಿ ಮೇಟ್, ಚಮೇಲಿ, ಹೀರೋಯಿನ್ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಅನೇಕ ಅಭಿಮಾನಿಗಳ ಮನ ಕದ್ದ ನಟಿ. ಅಂದಹಾಗೆಯೇ ಕರೀನಾ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 25 ವರ್ಷ ಸಂದಿದೆ. ಇದೇ ಸಂತಸದಲ್ಲಿ ವಿಶೇಷ ಚಲನಚಿತ್ರೋತ್ಸವವನ್ನು ಆಚರಿಸಲಾಗುತ್ತಿದೆ.
ಕರೀನಾ ಕಪೂರ್ ಖಾನ್ ಹೆಸರಿನಲ್ಲಿ ಕೆಕೆಕೆ ಫಿಲ್ಮ್ ಫೆಸ್ಟಿವಲ್ ನಡೆಸಲಾಗುತ್ತಿದೆ. 15 ನಗರಗಳಲ್ಲಿ 30 ಚಿತ್ರಮಂದಿರಗಳಲ್ಲಿ ವಿಶೇಷ ಚಲನಚಿತ್ರೋತ್ಸವ ನಡೆಯಲಿಕ್ಕಿದೆ. ಅಂದಹಾಗೆಯೇ ಈ ಸಂತಸದಲ್ಲಿ ನಟಿ ಕರೀನಾ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬಿಗ್ಬಾಸ್ಗೆ ಪಕ್ಕಾ ಹೋಗ್ತಾರಾ ತುಕಾಲಿ ಸಂತು ಹೆಂಡತಿ? ಸೀಸನ್ 11ರ ಬಗ್ಗೆ ಮಾನಸ ಹೇಳಿದ್ದೇನು?
ಪಿವಿಆರ್ ಕೂಡ ಟ್ವೀಟ್ ಮಾಡಿದ್ದು, ಕರೀನಾ ಕಪೂರ್ ಖಾನ್ ಫಿಲ್ಮ್ ಫೆಸ್ಟಿವಲ್ ಸೆಪ್ಟೆಂಬರ್ 20ರಿಂದ ಸೆಪ್ಟೆಂಬರ್ 27ರವರೆಗೆ ನಡೆಯಲಿದೆ ಎಂದು ಬರೆದುಕೊಂಡಿದೆ. ಇನ್ನು ಇಮ್ತಿಯಾಜ್ ಅಲಿ ಅವರ ಜಬ್ ವಿ ಮೆಟ್, ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಗಮ್, ಸಂತೋಷ್ ಶಿವನ್ ಅವರ ಅಶೋಕಾ, ಸುದೀರ್ ಮಿಶ್ರಾ ಅವರ ಚಮೇಲಿ, ವಿಶಾಲ್ ಭಾರದ್ವಜ್ ಅವರ ಓಂಕಾರ ಸಿನಿಮಾ ನೋಡುವ ಅವಕಾಶವನ್ನು ತೆರೆದಿಟ್ಟಿದೆ.
View this post on Instagram
ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ
ಕರೀನಾ 2000ರಲ್ಲಿ ರೆಪ್ಯೂಜಿ ಸಿನಿಮಾದ ಮೂಲಕ ಬಾಳಿವುಡ್ಗೆ ಕಾಲಿಟ್ಟರು. ಈ ಚಿತ್ರ ಫ್ಲಾಪ್ ಆಗಿತ್ತು. ಬಳಿಕ ‘ಮುಝೆ ಕುಛ್ ಕೆಹನಾ ಹೈ’ ಸಿನಿಮಾದಲ್ಲಿ ನಟಿಸಿದರು. ಅದರು ಹಿಟ್ ನೀಡಿದಲ್ಲದೆ ಗುರುತಿಸುವಂತೆ ಮಾಡಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ