ವೋಟರ್​ ID ಕಾರ್ಡ್​ ತಂದಿಲ್ಲ.. ಮಾಜಿ ಸಚಿವರನ್ನ ವಾಪಸ್ ಕಳಿಸಿದ ಚುನಾವಣಾ ಸಿಬ್ಬಂದಿ

author-image
Bheemappa
Updated On
ವೋಟರ್​ ID ಕಾರ್ಡ್​ ತಂದಿಲ್ಲ.. ಮಾಜಿ ಸಚಿವರನ್ನ ವಾಪಸ್ ಕಳಿಸಿದ ಚುನಾವಣಾ ಸಿಬ್ಬಂದಿ
Advertisment
  • ವೋಟರ್ ಐಡಿ ಕಾರ್ಡ್ ತರದೆ ಮತದಾನಕ್ಕೆ ಬಂದಿದ್ದ ಮಾಜಿ ಸಚಿವ
  • ಪರಿಶೀಲನೆ ವೇಳೆ ವೋಟರ್​ ಐಡಿ ಕಾರ್ಡ್​ ಇಲ್ಲದಿದ್ದಕ್ಕೆ ವಾಪಸ್
  • 2ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ

ಉತ್ತರ ಕನ್ನಡ: ಮಾಜಿ‌ ಸಚಿವ ಆನಂದ್‌ ಅಸ್ನೋಟಿಕರ್ ಅವರು ವೋಟರ್​ ಐಡಿ ಕಾರ್ಡ್ ತರದೆ ಮತದಾನ ಮಾಡದೇ ವಾಪಸ್ ಆಗಿದ್ದಾರೆ.

ಕಾರವಾರದ ಸೆಂಟ್ ಮೈಕಲ್ ಶಾಲೆಯಲ್ಲಿ ಮತದಾನ ಮಾಡಲೆಂದು ಇಂದು ಬೆಳಗ್ಗೆ ಮಾಜಿ‌ ಸಚಿವ ಆನಂದ್‌ ಅಸ್ನೋಟಿಕರ್ ಆಗಮಿಸಿದ್ದರು. ಆದರೆ ಅವರು ಕೇವಲ ಮತಗಟ್ಟೆ ಸಂಖ್ಯೆ ಇರುವ ಚೀಟಿ ಮಾತ್ರ ತಂದಿದ್ದರು. ಆದರೆ ಅವರ ಬಳಿ ವೋಟರ್ ಐಡಿ ಕಾರ್ಡ್ ಇರಲಿಲ್ಲ. ಇದರಿಂದ ವೋಟ್ ಮಾಡಲು ಚುನಾವಣಾ ಅಧಿಕಾರಿಗಳು ಅವಕಾಶ ನೀಡಿಲ್ಲ. ಹೀಗಾಗಿ ಅವರು ಐಡಿ ಕಾರ್ಡ್ ತರುವುದಾಗಿ ಹೇಳಿ ವಾಪಸ್ ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ

ಮಾಜಿ‌ ಸಚಿವ ಆನಂದ್‌ ಅಸ್ನೋಟಿಕರ್ ಅವರು ಮತದಾನ ಮಾಡದೆ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್​ ತಂದು ವೋಟ್ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇಂದು ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ವೋಟಿಂಗ್ ನಡೆಯುತ್ತಿದ್ದು ಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment