Advertisment

ಹೆಚ್ಚುತ್ತಿದೆ ಒಳಹರಿವು.. ಮೂರೇ ದಿನದಲ್ಲಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

author-image
AS Harshith
Updated On
ಹೆಚ್ಚುತ್ತಿದೆ ಒಳಹರಿವು.. ಮೂರೇ ದಿನದಲ್ಲಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ದಿನೇ ದಿನೇ ಹೆಚ್ಚುತ್ತಿದೆ ಆಲಮಟ್ಟಿ ಜಲಾಶಯದ ಒಳಹರಿವು
  • ರೈತರಿಗೆ ಖುಷಿಯೋ ಖುಷಿ.. ನಿನ್ನೆಗಿಂತ ಇಂದು ಒಳಹರಿವು ಜಾಸ್ತಿ
  • ಇಲ್ಲಿಯವರೆಗೆ ಎಷ್ಟು ನೀರು ಸಂಗ್ರಹವಾಗಿದೆ ಗೊತ್ತಾ? ಇಲ್ಲಿದೆ ಮಾಹಿತಿ

ವಿಜಯಪುರ: ಕೃಷ್ಣಾ ನದಿ ತೀರದಲ್ಲಿ ಸತತ ಮಳೆಯಾಗುತ್ತಿದೆ. ಈ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ  ಒಳಹರಿವು ಹೆಚ್ಚಿದೆ.

Advertisment

ಆಲಮಟ್ಟಿ ಜಲಾಶಯಕ್ಕೆ ದಿನೇ ದಿನೇ ಒಳಹರಿವು ಅಧಿಕವಾಗುತ್ತಿದ್ದು, ಇದರಿಂದ ರೈತರು ಸಂತಸಗೊಂಡಿದ್ದಾರೆ. ಜೊತೆಗೆ ಜಲಾಶಯದ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಇಂದು 6,714 ಕ್ಯೂಸೆಕ್​ ಒಳಹರಿವು ದಾಖಲಾಗಿದೆ. ಮೂರೇ ದಿನದಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿದೆ.

ಇದನ್ನೂ ಓದಿ: ಬದಲಾಯ್ತು ಶ್ರೀಲೀಲಾ ಲಕ್​.. ಬಾಲಿವುಡ್​ನತ್ತ ಹೊರಟ ಕನ್ನಡದ ನಟಿ.. ಯಾವ ಸಿನಿಮಾ ಗೊತ್ತಾ?

Advertisment

ನಿನ್ನೆವರೆಗೆ 20.832 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ ಇಂದು 21.374 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ಓವರ್​ ಟೇಕ್​ ಮಾಡಲು ಹೋಗಿ ಟೆಂಪೋ ಪಲ್ಟಿ.. ಓರ್ವ ಸಾವು, ಮತ್ತೋರ್ವ ಗಂಭೀರ 

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment