/newsfirstlive-kannada/media/post_attachments/wp-content/uploads/2024/06/SIDDU-DKS.jpg)
ಭಾರಿ ನಿರೀಕ್ಷೆ ಹುಟ್ಟಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ ಆಗಿದೆ. ಕರ್ನಾಟಕದಲ್ಲಿ ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಸಾಧನೆ ತೋರಿದೆ. ರಾಜ್ಯದಲ್ಲಿ 9 ಕ್ಷೇತ್ರಗಳ ಗೆಲುವಿಗೆ ಕಲ್ಯಾಣ ಕರ್ನಾಟಕದ ಮತದಾರರು ಕೈ ಹಿಡಿದಿರೋದು ಸ್ಪಷ್ಟ. ಉತ್ತರದಲ್ಲಿ ಖರ್ಗೆ ಖದರ್ ತೋರಿದ್ದಾರೆ. ಆದ್ರೆ ಕಾಂಗ್ರೆಸ್ ಡಬಲ್ ಡಿಜಿಟ್ ನಿರೀಕ್ಷೆ ಹುಸಿಯಾಗಿದೆ. ಪ್ರಮುಖ ನಾಯಕರು ಹಾಗೂ ಅವರ ಮಕ್ಕಳಿಗೆ ಸೋಲಿನ ಆಘಾತವಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಆಗುವುದರೊಂದಿಗೆ 45 ದಿನಗಳ ಮಹಾಭಾರತ ಯುದ್ಧಕ್ಕೆ ತೆರೆಬಿದ್ದಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಒಂದು ಸ್ಥಾನವಷ್ಟೇ ಗೆದ್ದು ಕುಸಿದಿದ್ದ ಕಾಂಗ್ರೆಸ್​​​​​ ಈ ಬಾರಿ ಪುಟಿದೆದ್ದಿದೆ. ಡಬಲ್ ಡಿಜಿಟ್ ದಾಟದಿದ್ರೂ ಗಮನಾರ್ಹ ಸಾಧನೆ ತೋರಿದೆ. ಹಳೇ ಮೈಸೂರಿನಲ್ಲಿ ಕೈ ಹಿಡಿಯದ ಗ್ಯಾರಂಟಿ ಉತ್ತರದಲ್ಲಿ ಕಮಾಲ್ ಮಾಡಿದೆ.
ಇದನ್ನೂ ಓದಿ:ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!
ಲೋಕಸಭಾ ಮಹಾ ಫಲಿತಾಂಶದಲ್ಲಿ ಹಸ್ತಕ್ಕೆ ‘ನವ’ರತ್ನ!
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಕೇವಲ ಒಂದು ಸೀಟು ಗೆದ್ದು ಕಾಂಗ್ರೆಸ್​​​ ತೀವ್ರ ಮುಖಭಂಗ ಅನುಭವಿಸಿತ್ತು. ಗ್ಯಾರಂಟಿ ಭರವಸೆಗಳೊಂದಿಗೆ ಅಖಾಡಕ್ಕಿಳಿದಿದ್ದ ಕಾಂಗ್ರೆಸ್​ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಲಾಂಗ್ ಜಂಪ್ ಮಾಡಿದೆ. ಈ ಬಾರಿ​​​​ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ 20 ವರ್ಷಗಳಲ್ಲೇ ಅಭೂತಪೂರ್ವ ಸಾಧನೆ ತೋರಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್​​ ‘ನವ’ ವಸಂತಕ್ಕೆ ಕಾಲಿಟ್ಟಿದೆ.
25 ವರ್ಷಗಳ ಬಳಿಕ ಎರಡಂಕಿ ಸನಿಹಕ್ಕೆ ಬಂದ ಕಾಂಗ್ರೆಸ್!
1999ರ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎರಡಂಕಿ ಸನಿಹದ ಸಾಧನೆ ಮಾಡಿದೆ. 2004ರ ಚುನಾವಣೆಯಲ್ಲಿ ರಾಜ್ಯದಲ್ಲಿ 8 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ 2009ರಲ್ಲಿ 6, 2014ರಲ್ಲಿ 9 ಹಾಗೂ 2019ರಲ್ಲಿ ಕೇವಲ 1 ಸ್ಥಾನ ಪಡೆಯಲಷ್ಟೇ ಶಕ್ತವಾಗಿತ್ತು. ಇದೀಗ ಫೀನಿಕ್ಸ್​​ನಂತೆ ಮೇಲೆದ್ದಿರೋ ಕಾಂಗ್ರೆಸ್​ ಡಬಲ್ ಡಿಜಿಟ್ ಸನಿಹದ ಸಾಧನೆ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!
ಸಿಎಂ ಸಿದ್ದುಗೆ ಪೂರಕ.. ಡಿಸಿಎಂ ಡಿಕೆಶಿಗೆ ಆಘಾತ!
ಸಿಎಂ ತವರು ಜಿಲ್ಲೆ ಹಳೇ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರೂ ರಾಜ್ಯದ ಒಟ್ಟಾರೆ ಫಲಿತಾಂಶ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪೂರಕವಾಗಿದೆ. ಶೇಕಡಾವಾರು ಫಲಿತಾಂಶದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತಲೂ ಗಮನಾರ್ಹ ಸಾಧನೆ ಮಾಡಿದೆ. ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿಗೆ ಮತದಾರರು ಪ್ರಭುಗಳು ಬಹುಮಾನ ಕೊಟ್ಟಂತಿದೆ. ಸಿದ್ದರಾಮಯ್ಯ ಸಿಎಂ ಪಟ್ಟ ಉಳಿಸಲು ಈ ಗೆಲುವು ಪೂರಕ ಆಗಬಹುದು. ಮತ್ತೊಂದೆಡೆ ತವರು ಜಿಲ್ಲೆಯಲ್ಲೇ ಸಹೋದರ ಡಿ.ಕೆ.ಸುರೇಶ್ ಹೀನಾಯ ಸೋಲು ಅನುಭವಿಸಿದ್ದು ಮುಖ್ಯಮಂತ್ರಿಗಾದಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ತೀವ್ರ ಹಿನ್ನಡೆ ತಂದಿದೆ.
‘ಕೈ’ ಹಿಡಿದ ಹೈದರಾಬಾದ್ ಕರ್ನಾಟಕದ ಮತದಾರರು!
ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಅಷ್ಟೇನೂ ಸಾಧನೆ ಮಾಡದಿದ್ರೂ ​​​​ ಕಲ್ಯಾಣ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಡೆಗೂ ತಮ್ಮ ಖದರ್ ತೋರಿಸಿದ್ದಾರೆ. ಸೋತ ನೆಲದಲ್ಲೇ ಅಳಿಯ ರಾಧಾಕೃಷ್ಣ ದೊಡ್ಡಮನಿ ನಿಲ್ಲಿಸಿ ಗೆದ್ದು ಬೀಗಿದ್ದಾರೆ. ಇತ್ತ ಹೈದ್ರಾಬಾದ್ ಕರ್ನಾಟಕದ ಮತದಾರರು ಕಾಂಗ್ರೆಸ್​​​ ಗೆಲುವಿಗೆ ಶಕ್ತಿ ತುಂಬಿದ್ದಾರೆ.
ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್​ ಗೊತ್ತಾ..?
ಕಾಂಗ್ರೆಸ್​​ಗೆ ‘ಅಹಿಂದ’ ಬಲ!
ಅಹಿಂದ ಮತಗಳೇ ರಾಜ್ಯ ಕಾಂಗ್ರೆಸ್​​ಗೆ ಭದ್ರ ಬುನಾದಿ ಹಾಕಿವೆ. ಈ ಬಾರಿ ಕಾಂಗ್ರೆಸ್ ಗೆಲುವಿನಲ್ಲಿ ಅಹಿಂದ ಮತಗಳು ಪಾರುಪತ್ಯ ಮೆರೆದಿದೆ, ಗ್ಯಾರಂಟಿ ಯೋಜನೆಗಳಿಗಿಂತಲೂ ಅಹಿಂದ ಮತಗಳೇ ನಿರ್ಣಾಯಕ ಪಾತ್ರ ವಹಿಸಿವೆ, ಲಿಂಗಾಯತ, ಒಕ್ಕಲಿಗ ಕ್ಷೇತ್ರಗಳ ಮತಗಳು ಕೈ ಕೊಟ್ಟಿವೆ. ಈ ಮೂಲಕ ಕಾಂಗ್ರೆಸ್​​ನಲ್ಲಿ ಮತ್ತೆ ಅಹಿಂದ ನಾಯಕ ಸಿದ್ದರಾಮಯ್ಯ ನಾಯಕತ್ವ ಸಾಬೀತಾಗಿದೆ.
ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us