newsfirstkannada.com

ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!

Share :

Published June 5, 2024 at 7:42am

    ಇಂದು ಎನ್‌ಡಿಎ ಮಿತ್ರ ಪಕ್ಷಗಳ ನಾಯಕರ ಹೈ ಮೀಟಿಂಗ್​

    ಅಧಿಕಾರದ ಗದ್ದುಗೆ ಏರಲು ಇಂದು ಮೋದಿ ಹಕ್ಕು ಮಂಡನೆ

    ಸರ್ಕಾರ ರಚನೆಗೆ I.N.D.I.A ಕೂಟದಿಂದಲೂ ರಣತಂತ್ರ

ದೇಶದ ಮೂಲೆ ಮೂಲೆಯಲ್ಲೂ ಕೇಳ್ತಿದ್ದ ಮೋದಿ ಮೋದಿ ಎಂಬ ಉದ್ಘೋಷ ಮತವಾಗಿಲ್ವಾ? ಮೋದಿ ಎಂಬ ಮೋಡಿಗಾರನ ಮತ ಮ್ಯಾಜಿಕ್ ವರ್ಕ್ ಆಗಿಲ್ವಾ? ವರ್ಕ್ ಆಗಿದ್ರೂ ಅಂದುಕೊಂಡ ಗುರಿ ಮುಟ್ಟುವಲ್ಲಿ ವಿಫಲವಾಯ್ತಾ? ಎಂಬ ಪ್ರಶ್ನೆ ಶುರುವಾಗಿದೆ. ಬಿಜೆಪಿ ಅಂದುಕೊಂಡ ಅಂಕಿಯನ್ನ ಮುಟ್ಟಿಲ್ಲ. ಆದ್ರೆ ಗೆದ್ದಿದೆ ಅನ್ನೋದೇ ಕಮಲ ಪಡೆಗೆ ಸಮಾಧಾನಕರ ವಿಚಾರ. ಇದೇ ಖುಷಿಯಲ್ಲಿ ಮಿತ್ರಪಕ್ಷಗಳ ಜೊತೆ ಸೇರಿ ಭಾರತ ದೇಶದ ಗದ್ದುಗೆ ಹಿಡಿಯಲು ಎನ್​ಡಿಎ ಸಜ್ಜಾಗಿದೆ.

ಎನ್‌ಡಿಎ ಮೈತ್ರಿ ಕೂಟ ಸರಳ ಬಹುಮತದ ಮ್ಯಾಜಿಕ್ ನಂಬರ್ ದಾಟಿದೆ. ಇತ್ತ ಇಂಡಿಯಾ ಮೈತ್ರಿ ಕೂಟವೂ ಅತಿ ಸನಿಹದಲ್ಲೇ ಇದೆ. ಹೀಗಾಗಿ ಬಿಜೆಪಿ ಅಲರ್ಟ್ ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇವತ್ತು ಎನ್‌ಡಿಎ ಮಿತ್ರಕೂಟದ ಮಹತ್ವದ ಸಭೆ ಆಯೋಜನೆ ಮಾಡಲಾಗಿದೆ.. ಈ ಸಭೆಗೆ ಎಲ್ಲಾ ಎನ್‌ಡಿಎ ಒಕ್ಕೂಟದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ಮಾಜಿ ಸಿಎಂ ಹೆಚ್‌ಡಿ. ಕುಮಾರಸ್ವಾಮಿಗೂ ಬುಲಾವ್ ಬಂದಿದೆ ಅಂತ ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆಯಲ್ಲಿ ಸರ್ಕಾರ ರಚನೆಯ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!

ಎನ್‌ಡಿಎ ಮೈತ್ರಿ ಕೂಟದ ನಾಯಕರ ಜೊತೆ ಚರ್ಚೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲಿದ್ದಾರೆ.. ಈ ಮೂಲಕ ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲು ರಾಷ್ಟ್ರಪತಿ ದ್ರೌಪದಿ ಮುರ್ಮು ಬಳಿ ಸರ್ಕಾರ ರಚನೆಯ ಬಗ್ಗೆ ಹಕ್ಕು ಮಂಡನೆ ಮಾಡಲಿದ್ದಾರೆ.

ಎನ್‌ಡಿಎ ಕೂಟಕ್ಕೆ ಕೌಂಟರ್‌ ರೀತಿಯಲ್ಲಿ ಸರ್ಕಾರ ರಚನೆಗೆ I.N.D.I.A ಕೂಟದಿಂದಲೂ ರಣತಂತ್ರ ನಡೀತಿದೆ.. ಇವತ್ತು ಇಂಡಿಯಾ ಕೂಟದ ನಾಯಕರು ಕೂಡ ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ.. ಕಳೆದ ಬಾರಿಗಿಂತ ಹೆಚ್ಚು ಸೀಟ್‌ಗಳನ್ನ ಪಡೆದಿರೋದು ಉತ್ಸಾಹವನ್ನ ಇಮ್ಮಡಿಗೊಳಿಸಿದೆ.. ಹೀಗಾಗಿ ಫಲಿತಾಂಶ ಬರ್ತಿದ್ದಂತೆ ಕಾಂಗ್ರೆಸ್ ನಾಯಕರು ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ INDIA ಮೈತ್ರಿಕೂಟ NDA ಮೈತ್ರಿಕೂಟದಲ್ಲಿರುವ ಪಕ್ಷಗಳನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿವೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಉಪ ಪ್ರಧಾನಿ ಹಾಗೂ ಟಿಡಿಪಿ ನೇತೃತ್ವದ ಚಂದ್ರಬಾಬು ನಾಯ್ಡುಗೆ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬಿಗ್ ಆಫರ್ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಚಹಾ ಹೀರುವ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ಅಲ್ಲ.. ಯಾವ ದೇಶದಲ್ಲಿ ಹೆಚ್ಚು ಫೇಮಸ್​ ಗೊತ್ತಾ..?

ಮತ್ತೊಮ್ಮೆ ಕಿಂಗ್‌ ಮೇಕರ್‌ಗಳಾದ ನಿತೀಶ್​, ಚಂದ್ರಬಾಬು
ಬಿಜೆಪಿ ಏಕಾಂಗಿ ಅಧಿಕಾರಕ್ಕೇರೋದು ಇನ್ನೇನು ಕನಸಷ್ಟೇ. ಗದ್ದುಗೆ ಬೇಕಿದ್ರೆ ಆ ಇಬ್ಬರನ್ನ ಒಳಸಿಕೊಳ್ಳಲೇಬೇಕು.ಈ ನಾಯ್ಡುಗಾರು ಇಲ್ಲದೇ ಕೇಂದ್ರದಲ್ಲಿ ಅಧಿಕಾರ ನಡೆಸೋದು ಇಂಪಾಸಿಬಲ್​​​. ದಶಕದಿಂದ ತನ್ನ ಸರದಿಗಾಗಿ ಕಾದು ಕಾದು ಸುಸ್ತಾದ ನಿತೀಶ್​​ಕುಮಾರ್​ಗೂ ಅದೃಷ್ಟ ಅರಸಿ ಬಂದಂತೆ ಕಾಣಿಸ್ತಿದೆ. ಹೀಗಾಗಿ ದೇಶದ ಎರಡು ಕೂಟಗಳು ಈ ಇಬ್ಬರು ನಾಯಕರ ಹಿಂದೆ ಬಿದ್ದಿವೆ. ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿ ಪ್ರಮುಖ ನಾಯಕರು ಕರೆ ಮಾಡಿ ದೆಹಲಿಗೆ ಬರುವಂತೆ ಮನವಿ ಮಾಡಿದ್ದಾರೆ. ಎನ್​​​ಡಿಎ ಕೂಟದ ಸಂಚಾಲಕನ ಆಫರ್​​​ ಸಹ ನೀಡ್ಲಾಗಿದೆ.

ಮತ್ತೊಂದೆಡೆ ಇಂಡಿಯಾ ಕೂಟದಿಂದಲೂ ನಾಯ್ಡು ಹಾಗೂ ನಿತೀಶ್‌ ಸಂಪರ್ಕಕ್ಕೆ ಯತ್ನ ನಡೆದಿದೆ. ಶರದ್​​ ಪವಾರ್​ ಕಡೆಯಿಂದ ಒಂದು ಪ್ರಯತ್ನ ನಡೀತಿದ್ರೆ, ಕೆ.ಸಿ. ವೇಣುಗೋಪಾಲ್​​ ಸಹ ಸಂಪರ್ಕ ಕ್ರಾಂತಿಗಾಗಿ ಯತ್ನಿಸಿದ್ದಾರೆ. ನಿತೀಶ್​ಗೆ ಇಂಡಿಯಾ ಕೂಟ, ಉಪ ಪ್ರಧಾನಿ ಹುದ್ದೆ ಆಫರ್​​ನ್ನೇ ನೀಡಿಬಿಟ್ಟಿದೆ. ಇಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನ ನಾಯ್ಡುಗೆ ಕೊಡ್ಲಾಗಿದೆ. ಆದ್ರೆ ಉಭಯ ಪಕ್ಷಗಳೂ ಎನ್‌ಡಿಎ ಜೊತೆಗಿರೋದಾಗಿ ಹೇಳ್ಕೊಂಡಿವೆ.

ಇದನ್ನೂ ಓದಿ:ಕರುಳ ಕುಡಿಯ ಒಂದು ಮಾಡಿದ ಪಾಠಶಾಲಾ.. 20 ವರ್ಷದ ನಂತರ ಪ್ರತ್ಯಕ್ಷನಾದ ಮಗನ ತಬ್ಬಿ ಕಣ್ಣೀರಿಟ್ಟ ಅವ್ವ..

ಒಟ್ಟಾರೆ ಡೆಲ್ಲಿ ದರ್ಬಾರ್​​ಗಳಲ್ಲಿ ಪವರ್​​ ಪ್ಲೇ ಆಟ ರೋಚಕವಾಗಿ ಶುರುವಾಗಿದೆ.. ಬಿಜೆಪಿಯ ಕ್ಷೇತ್ರಗಳ ಕುಸಿತ ಪ್ರಾದೇಶಿಕ ಪಕ್ಷಗಳಿಗೆ ಭಾರೀ ಬಾಡೂಟವನ್ನೇ ಕಲ್ಪಿಸಿದೆ. ದಶಕದ ಬಳಿಕ ಕೇಂದ್ರದಲ್ಲಿ ಮತ್ತೊಮ್ಮೆ ಕಿಚಡಿ ಸರ್ಕಾರ ರಚನೆ ಆಗೋದು ಪಕ್ಕಾ ಆಗಿದೆ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!

https://newsfirstlive.com/wp-content/uploads/2024/04/HDD-HDKumaraswamy.jpg

Load More