newsfirstkannada.com

ರಾಜ್ಯದ ಐದು ಸಂಸದರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಖಾತೆ ಹಂಚಿಕೆ ಆಗಿದೆ..?

Share :

Published June 11, 2024 at 7:30am

    ಮೋದಿ 3.O ಸರ್ಕಾರದಲ್ಲಿ ಸಚಿವ ಖಾತೆ ಹಂಚಿಕೆ ಫೈನಲ್‌

    ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಐದು ಸಚಿವ ಸ್ಥಾನ

    ರಾಜ್ಯದ ಐವರು ಸಂಸದರಿಗೆ ಸಿಕ್ಕಿದ್ದು ಯಾವ್ಯಾವ ಖಾತೆ..?

ಪ್ರಧಾನಿ ಮೋದಿ ಜೊತೆ 71 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ವಿಶೇಷ ಅಂದ್ರೆ ನಮ್ಮ ರಾಜ್ಯಕ್ಕೆ ಬರೋಬ್ಬರಿ ಐದು ಮಂದಿಗೆ ಸಚಿವಗಿರಿ ಸಿಕ್ಕಿದೆ. ಹಾಗಾದ್ರೆ ಯಾಱರಿಗೆ ಯಾವ್ಯಾವ ಖಾತೆ ಸಿಕ್ಕಿದೆ.. ರಾಜ್ಯಕ್ಕೆ ಏನ್​ ಅನುಕೂಲ..?

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ದೇಶ ಮುನ್ನೆಡೆಸಲು ಸಿದ್ಧರಾಗಿದ್ದಾರೆ. ಮೋದಿ ಟೀಂ ಅಭಿವೃದ್ಧಿ ರೇಸ್​ಗೆ ರೆಡಿ ಅಂತಾ ಸಜ್ಜಾಗಿದ್ದಾರೆ. ರಾಜ್ಯದ ಐವರಿಗೆ ಈ ಬಾರಿ ಪಂಚಾಮೃತ ಸಿಕ್ಕಿದೆ. ಪಂಚ ಸಚಿವರು ನಮೋ ಸಂಪುಟ ಸೇರಿದ್ದು ಗೊತ್ತೇ ಇದೆ. ಈಗ ಖಾತೆ ಹಂಚಿಕೆ ಆಗಿದ್ದು, ರಾಜ್ಯಕ್ಕೆ ಬಂಪರ್​ ಸಿಕ್ಕಿದೆ.

ಇದನ್ನೂ ಓದಿ:ಮಳೆಯೋ ಮಳೆ.. ರಾಜ್ಯದ ಈ ಜಿಲ್ಲೆಗಳಿಗೆ ರೆಡ್​​ ಅಲರ್ಟ್​.. ಎಲ್ಲೆಲ್ಲಿ ಏನೆಲ್ಲ ಆಯ್ತು..?

ಯಾಱರಿಗೆ ಯಾವ್ಯಾವ ಖಾತೆ?
2014 ರಿಂದ ಇಲ್ಲಿಯವರೆ ಅಂದ್ರೆ ಮೂರನೇ ಬಾರಿಗೂ ನಿರ್ಮಲಾ ಸೀತಾರಾಮನ್ ಮೋದಿ ಕ್ಯಾಬಿನೇಟ್​​ನಲ್ಲಿ ಮುಂದುವರೆದಿರುವ ಏಕೈಕ ಮಹಿಳೆ.. ಕಳೆದ ಬಾರಿಯಂತೆ ನಿರ್ಮಲಾ ಸೀತಾರಾಮನ್​ರಿಗೆ ಈ ಬಾರಿಯೂ ಹಣಕಾಸು ಖಾತೆ ಸಿಕ್ಕಿದೆ.. ಕೃಷಿ ಖಾತೆ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ನ ಕುಮಾರಸ್ವಾಮಿಗೆ ಬೃಹತ್‌ ಕೈಗಾರಿಕೆ ಖಾತೆ ಜೊತೆಗೆ ಉಕ್ಕು ಸಚಿವಾಲಯದ ಜವಾಬ್ದಾರಿ ದಕ್ಕಿದೆ. ಇನ್ನೂ ಪ್ರಲ್ಹಾದ್‌ ಜೋಶಿಗೆ ಆಹಾರ ಮತ್ತು ನಾಗರಿಕ ಸರಬರಾಜುದಂತ ದೊಡ್ಡ ಖಾತೆ ಸಿಕ್ಕಿದೆ.. ದಕ್ಷಿಣ ಭಾರತದ ಏಕೈಕ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಖಾತೆ ಕಲ್ಪಿಸಲಾಗಿದೆ.. ಹಾಗೇ ವಿ.ಸೋಮಣ್ಣಗೆ ಜಲಶಕ್ತಿ ಮತ್ತು ರೈಲ್ವೇ ಇಲಾಖೆಯ ರಾಜ್ಯ ಖಾತೆ ಅವಕಾಶ ಸಿಕ್ಕಿದೆ..

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಇದೇ ತಪ್ಪು ಮುಂದುವರಿದ್ರೆ ಭಾರೀ ಕಷ್ಟ..!

ರಾಜ್ಯದ ಅನ್ನಭಾಗ್ಯಕ್ಕೆ ಈಗಲಾದ್ರೂ ಸಿಗುತ್ತಾ ಅಕ್ಕಿ?
ರಾಜ್ಯ ಸರ್ಕಾರದ ಅನ್ನಭಾಗ್ಯದಡಿ 10 ಕೆ.ಜಿ ಅಕ್ಕಿ ಘೋಷಣೆ, ಕಳೆದ ವರ್ಷ ಕೇಂದ್ರದ ಜೊತೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದು ಗೊತ್ತೇ ಇದೆ.. ಇದೀಗ ನಮ್ಮವರೇ ಆದ ಪ್ರಲ್ಹಾದ್‌ ಜೋಶಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಕ್ಕಿದೆ.. ರಾಜ್ಯದವರೇ ಅಗಿರೋದ್ರಿಂದ ರಾಜ್ಯದ ಬೇಡಿಕೆಗೆ ಸ್ಪಂದಿಸ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.. ಅಲ್ಲದೆ, ಜೋಶಿ ಬಳಿ ಸಿದ್ದು ಸರ್ಕಾರ ಅನ್ನದ ಬೊಟ್ಟಲು ಚಾಚುತ್ತಾ ಅನ್ನೋದು ಕಾದುನೋಡಬೇಕಿದೆ.. ಕೇಂದ್ರದ ಜೊತೆ ಸಿಎಂ ಸಿದ್ದು ರೈಸ್​​ ಪಾಲಿಟಿಕ್ಸ್​​ ಮತ್ತಷ್ಟು ಜೋರಾಗೋ ಸಾಧ್ಯತೆ ಇದೆ. ಎಲೆಕ್ಷನ್​​​ ವೇಳೆ ಮಂಡ್ಯದಲ್ಲಿ ಪ್ರಚಾರಕ್ಕೂ ಬಾರದ ಸುಮಲತಾ, ನಿನ್ನೆ ಡೆಲ್ಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯನ್ನ ಭೇಟಿ ಮಾಡಿದ್ದಾರೆ.. ಹೂ‌ಗುಚ್ಛ ನೀಡಿ ಹಳೆ ದ್ವೇಷ ಮರೆತು ಶುಭ ಕೋರಿದ್ದಾರೆ.

ಇದನ್ನೂ ಓದಿ:ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಐದು ಸಂಸದರಿಗೆ ಖಾತೆ ಹಂಚಿಕೆ.. ಯಾರಿಗೆ ಯಾವ ಖಾತೆ ಹಂಚಿಕೆ ಆಗಿದೆ..?

https://newsfirstlive.com/wp-content/uploads/2024/06/CENTRAL-MINISTER.jpg

Load More