newsfirstkannada.com

ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಇದೇ ತಪ್ಪು ಮುಂದುವರಿದ್ರೆ ಭಾರೀ ಕಷ್ಟ..!

Share :

Published June 10, 2024 at 9:50am

Update June 11, 2024 at 6:20am

  ಪಾಕಿಸ್ತಾನದ ವಿರುದ್ಧ ಭಾರತಕ್ಕೆ 6 ರನ್​​ಗಳ ಜಯ

  119 ರನ್​ಗಳಿಗೆ ಭಾರತ ಆಲೌಟ್ ಆಗಿ ಅಚ್ಚರಿ

  ವಿಶ್ವದ ಎದುರೇ ತಂಡದ ಅಸಲಿ ಸಾಮರ್ಥ್ಯ ಬಯಲು

ಬದ್ಧವೈರಿ ಪಾಕಿಸ್ತಾನ ತಂಡದ ಎದುರು ರಣರೋಚಕ ದಿಗ್ವಿಜಯ ಸಾಧಿಸಿದ್ರು. ಟೀಮ್​ ಇಂಡಿಯಾ ವಲಯದಲ್ಲಿ ಆತಂಕವೇ ಮನೆ ಮಾಡಿದೆ. ಗೆಲುವಿನ ಖುಷಿಯ ಜೊತೆಗೆ ಫ್ಯಾನ್ಸ್​ಗೆ ಬೇಸರ ಬಿಡದೇ ಕಾಡ್ತಿದೆ. ವಿಶ್ವ ಕ್ರಿಕೆಟ್​ ಲೋಕದ ಎದುರು ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ಗಳ ಅಸಲಿ ಸಾಮರ್ಥ್ಯ ಬಟಾಬಯಲಾಗಿದೆ.

ನಿನ್ನೆ ಪಾಕ್​ ವಿರುದ್ಧ ಭಾರತ ಗೆಲ್ತು ನಿಜ..! ನ್ಯೂಯಾರ್ಕ್​ ಅಂಗಳದಲ್ಲಿ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ಗಳು ಮಕಾಡೆ ಮಲಗಿದ ರೀತಿ ಇದೆಯಲ್ವಾ. ಅದು, ವಿಶ್ವದ ಎದುರು ಟೀಮ್​ ಇಂಡಿಯಾದ ಅಸಲಿ ಸಾಮರ್ಥ್ಯವನ್ನ ಬಟಾ ಬಯಲು ಮಾಡಿದೆ. ಈ ವೀಕ್​ನೆಸ್​​ ಟ್ರೋಫಿ ಗೆಲ್ಲೋ ಕನಸಿಗೆ ಕೊಳ್ಳಿ ಇಡೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ಸಂಪುಟ ಸೇರ್ಪಡೆಯಲ್ಲಿ ಕೆಲವು ಅಚ್ಚರಿ ಮುಖಗಳು.. ಸಚಿವ ಸ್ಥಾನಕ್ಕಾಗಿ 3 ತಿಂಗಳ ಗಡುವು ನೀಡಿದ ಈ ಮಿತ್ರಪಕ್ಷ..!

ಫ್ಲಾಪ್​​ ಸ್ಟಾರ್​​ ನಂ.1: ವಿರಾಟ್​ ಕೊಹ್ಲಿ
ವಿಶ್ವ ಕ್ರಿಕೆಟ್​ ಲೋಕ ಕಂಡ ಕಿಂಗ್, ಟೀಮ್​ ಇಂಡಿಯಾದ ಸೀನಿಯರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ, ನಸ್ಸೌ ಅಂಗಳದಲ್ಲಿ ನಿನ್ನೆ ತಡಬಡಾಯಿಸಿದ್ರು. ಮೊದಲ ಪಂದ್ಯದಲ್ಲಿ ಐರ್ಲೆಂಡ್​ ಎದುರು ವೈಫಲ್ಯ ಅನುಭವಿಸಿದ್ದ ವಿರಾಟ್​ ಕೊಹ್ಲಿ, ನಿನ್ನೆಯೂ ಟ್ರ್ಯಾಕ್​ಗೆ ಮರಳಲಿಲ್ಲ. ಜಸ್ಟ್​ ನಾಲ್ಕೇ ನಾಲ್ಕು ರನ್​ಗಳಿಗೆ ಕೊಹ್ಲಿ ಸುಸ್ತಾದ್ರು.

ಫ್ಲಾಪ್​​ ಸ್ಟಾರ್​​ ನಂ.2: ರೋಹಿತ್​ ಶರ್ಮಾ
12 ರನ್​ಗಳಿಸುವಷ್ಟರಲ್ಲೇ ಟೀಮ್​​ ಇಂಡಿಯಾದ ಮೇನ್​ ವಿಕೆಟ್​ ಹೋಗಿದೆ. ಇಂತಹ ಸಂದರ್ಭದಲ್ಲಿ ತಂಡದ ಕ್ಯಾಪ್ಟನ್​​ ಜವಾಬ್ದಾರಿಯುತ ಆಟವಾಡವಬೇಕಲ್ವಾ.? ಆದ್ರೆ,ನಮ್ಮ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಅದನ್ನು ಮಾಡಲಿಲ್ಲ. ಅನಗತ್ಯವಾಗಿ ಅಗ್ರೆಸ್ಸೀವ್​ ಆಟವಾಡಲು ಹೋಗಿ ತಾವು ಔಟಾಗಿದ್ದಲ್ಲದೇ ತಂಡವನ್ನ ಸಂಕಷ್ಟಕ್ಕೆ ದೂಡಿದ್ರು.

ಇದನ್ನೂ ಓದಿ:ಸೋಲಿನ ಬಳಿಕ ಪಾಕ್ ನಾಯಕ ಹೊಣೆ ಮಾಡಿದ್ದು ಯಾರನ್ನು..? ಪಂದ್ಯ ಮುಗಿದ ಬಳಿಕ ಸ್ಫೋಟಕ ಹೇಳಿಕೆ

ಫ್ಲಾಪ್​​ ಸ್ಟಾರ್​​ ನಂ.3: ಸೂರ್ಯ ಕುಮಾರ್​ ಯಾದವ್​
ಮಿಸ್ಟರ್​ 360 ಸೂರ್ಯ ಕುಮಾರ್​ ಯಾದವ್​, ಪಾಕ್​ ಬೌಲರ್​ಗಳ ಅಟ್ಟಹಾಸದ ಮುಂದೆ ತಬ್ಬಿಬ್ಬಾದ್ರು. ರಗಡ್​ ಆ್ಯಟಿಟ್ಯೂಡ್​ನೊಂದಿಗೆ ಬಾಯಲ್ಲಿ ಚಿಂಗಮ್​ ಜಗಿತಾ ಕಡಿದು ಕಟ್ಟೆ ಹಾಕ್ತೀನಿ ಅನ್ನೋ ವಿಶ್ವಾಸದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್​​ ಜಸ್ಟ್​ 7ಗಳಿಸುವಷ್ಟರಲ್ಲೇ ಸುಸ್ತಾದ್ರು. ಹ್ಯಾರಿಸ್​ ರೌಫ್​ ಬೌಲಿಂಗ್​​ನಲ್ಲಿ ಅಮೀರ್​ಗೆ ಕ್ಯಾಚ್​​ ನೀಡಿ ಪೆವಿಲಿಯನ್​ ಸೇರಿದ್ರು.

ಫ್ಲಾಪ್​​ ಸ್ಟಾರ್​​ ನಂ.4: ಶಿವಂ ದುಬೆ
ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದ ಸಮಯದಲ್ಲಿ ಕಣಕ್ಕಿಳಿದ ಶಿವಂ ದುಬೆ, ತಂಡಕ್ಕೆ ಚೇತರಿಕೆ ನೀಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ದುಬೆ ಆ ನಿರೀಕ್ಷೆಯನ್ನು ನುಚ್ಚು ನೂರು ಮಾಡಿದ್ರು. ಬ್ಯಾಟಿಂಗ್​ನಲ್ಲಿ ಫೇಲ್​ ಆದ ದುಬೆ, ಫೀಲ್ಡಿಂಗ್​ ವೇಳೆಯೂ ಕ್ಯಾಚ್​ ಡ್ರಾಪ್​ ಮಾಡಿ ದುಬಾರಿಯಾದ್ರು.

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

ಫ್ಲಾಪ್​​ ಸ್ಟಾರ್​​ ನಂ.5: ರವೀಂದ್ರ ಜಡೇಜಾ
ಆಲ್​​ರೌಂಡರ್​ ಕೋಟಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರೋ ಜಡೇಜಾ, ಬ್ಯಾಟಿಂಗ್​ ಅನ್ನೇ ಮರೆತಂತಿದೆ. ಎದುರಿಸಿದ ಫಸ್ಟ್​ ಬಾಲ್​ನಲ್ಲೇ ಸಿಂಪಲ್​ ಕ್ಯಾಚ್​ ಕೊಟ್ಟ ಜಡ್ಡು, ಗೋಲ್ಡನ್​ ಡಕೌಟ್ ಆಗಿ ನಿರ್ಗಮಿಸಿದ್ರು.

ಫ್ಲಾಪ್​​ ಸ್ಟಾರ್​​ ನಂ.6: ಹಾರ್ದಿಕ್​ ಪಾಂಡ್ಯ
ಸೋ ಕಾಲ್ಡ್​ ಸೂಪರ್​​ ಸ್ಟಾರ್​ ಹಾರ್ದಿಕ್​​ ಪಾಂಡ್ಯ ನಿನ್ನೆ ಬ್ಯಾಟಿಂಗ್​ನಲ್ಲಿ ನೀಡಿದ್ದು ಅತ್ಯಂತ ಹೀನಾಯ ಪ್ರದರ್ಶನ. ಪಾಕ್​ ಬೌಲರ್​​ಗಳ ಆರ್ಭಟದ ಮುಂದೆ ಕುಸಿದುಹೋಗಿದ್ದ ಟೀಮ್​ ಇಂಡಿಯಾಗೆ ಹಾರ್ದಿಕ್​ ಆಸರೆಯಾಗಲಿಲ್ಲ. 12 ಎಸೆತಗಳಲ್ಲಿ 7 ರನ್​ಗಳಿಸಿ ಔಟಾದ್ರು.
ಟೀಮ್​ ಇಂಡಿಯಾ ಪಾಕ್​ ವಿರುದ್ಧದ ಪಂದ್ಯದಲ್ಲಿ ಗೆದ್ದಿರಬಹುದು. ತಂಡದ ಸೂಪರ್​ ಸ್ಟಾರ್​ ಬ್ಯಾಟರ್ಸ್​ ನೀಡಿದ ಹೀನಾಯ ಪರ್ಫಾಮೆನ್ಸ್​ ಇದ್ಯಲ್ಲ ಅದು ಒಪ್ಪಿಕೊಳ್ಳುವಂತದ್ದಲ್ಲವೇ ಅಲ್ಲ. ವಿಶ್ವದ ಎದುರೇ ತಂಡದ ಅಸಲಿ ಸಾಮರ್ಥ್ಯವನ್ನ ಬಟಾಬಯಲಾಗಿದೆ. ಮುಂದಿನ ಪಂದ್ಯಕ್ಕೂ ಮುನ್ನ ಬ್ಯಾಟರ್ಸ್​ ಎಚ್ಚೆತ್ತುಕೊಳ್ಳಲೇ ಬೇಕಿದೆ.

ಇದನ್ನೂ ಓದಿ:ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಇದೇ ತಪ್ಪು ಮುಂದುವರಿದ್ರೆ ಭಾರೀ ಕಷ್ಟ..!

https://newsfirstlive.com/wp-content/uploads/2024/06/HARDIK-PANDYA-9.jpg

Load More