newsfirstkannada.com

ಪಾಕ್ ವಿರುದ್ಧ ಭಾರತ ಗೆಲ್ಲಲು ಕಾರಣ ಇವರೇ.. ಇಲ್ಲಿ ಗೆಲುವಿನ ಹೀರೋಗಳು ಮೂವರು..!

Share :

Published June 10, 2024 at 6:58am

Update June 10, 2024 at 7:30am

    ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ಮತ್ತೊಂದು ಐತಿಹಾಸಿಕ ಗೆಲವು

    ಪಾಕಿಸ್ತಾನದ ವಿರುದ್ಧ 6 ರನ್​ಗಳ ಭರ್ಜರಿ ಗೆಲುವು ದಾಖಲು

    ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡ ಭಾರತ ತಂಡ

ಟಿ20 ವಿಶ್ವಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಅತ್ಯಂತ ಕಡಿಮೆ ಸ್ಕೋರ್​​​ 119 ರನ್​ಗಳನ್ನು ಡೆಪೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೋಹಿತ್ ಪಡೆ, ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಈ ಬಾರಿ ಭಾರತದ ಗೆಲುವಿಗೆ ಕಾರಣವಾಗಿದ್ದು ಟೀ ಇಂಡಿಯಾದ ಬೌಲರ್ಸ್​.

ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡಿತ್ತು. ರಿಷಬ್ ಪಂತ್ ಅವರ 42 ರನ್​ಗಳ ಕಾಣಿಕೆಯ ಪರಿಣಾಮ ಭಾರತ 19 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 119ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಾಕಿಸ್ತಾನಕ್ಕೆ ಜಸ್​ಪ್ರಿತ್ ಬೂಮ್ರಾ ಅವರು ದೊಡ್ಡ ಪೆಟ್ಟು ಕೊಟ್ಟರು.

ಇದನ್ನೂ ಓದಿ:ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

ಬಾಬರ್ ಅಜಂ ಹಾಗೂ ರಿಜ್ವನ್ 26 ರನ್​ಗಳಿಸಿ ಆಡುತ್ತಿದ್ದಾಗ ಅಜಂ ಅವರ ಪೆವಿಲಿಯನ್​ಗೆ ಕಳುಹಿಸುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಕ್ಯಾಪ್ಟನ್ ವಿಕೆಟ್ ಬೀಳುತ್ತಿದ್ದಂತೆಯೇ ಟೀಂ ಇಂಡಿಂಯಾ ಬೌಲಿಂಗ್ ಪಡೆಗೆ ಮತ್ತಷ್ಟು ಶಕ್ತಿ ಬಂತು. ಬೆಂಕಿ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬೌಲರ್ಸ್​​, ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಬೂಮ್ರಾ ಹೀರೋ..!
ಟೀಂ ಇಂಡಿಯಾಗೆ ಎಂದಿನಂತೆ ಬೂಮ್ರಾ ಹೀರೋ ಆದರು. ತಮ್ಮ ಕೋಟಾದ ನಾಲ್ಕು ಓವರ್​ ಎಸೆದ ಬೂಮ್ರಾ ಕೇವಲ 3.5 ಎಕನಾಮಿಕ್​ನೊಂದಿಗೆ 14 ರನ್​​ಗಳನ್ನು ಮಾತ್ರ ನೀಡಿದರು. ಮಾತ್ರವಲ್ಲ ಪಾಕ್​ನ ಪ್ರಮುಖ ವಿಕೆಟ್​​ಗಳಾದ ಬಾಬರ್ ಅಜಂ, ರಿಜ್ವಾನ್ ಹಾಗೂ ಇಫ್ತಿಕಾರ್​​ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊದಲೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..!

ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ನಾಲ್ಕು ಓವರ್​​ಗಳನ್ನು ಎಸೆದು 2 ವಿಕೆಟ್ ಪಡೆದು ಕೇವಲ 24 ರನ್​​ಗಳನ್ನು ಮಾತ್ರ ನೀಡಿದರು. ಅಷ್ಟೇ ಅಲ್ಲ ಅಕ್ಸರ್ ಪಟೇಲ್​ 2 ಓವರ್​ ಎಸೆದು 11 ರನ್​ ನೀಡಿ ಒಂದು ವಿಕೆಟ್ ಪಡೆದರು. ಪಾಕ್​ನ ಬ್ಯಾಟಿಂಗ್ ಶಕ್ತಿ ಉಸ್ಮಾನ್ ಖಾನ್​ರ ವಿಕೆಟ್ ಪಡೆದು ಪಾಕ್​ನ ಮಗ್ಗಲು ಮುರಿದರು.

ನಿನ್ನೆಯ ಪಂದ್ಯದಲ್ಲಿ ಸಿರಾಜ್ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು, 4 ಓವರ್​ಗಳಲ್ಲಿ 19 ರನ್​ ನೀಡಿದರು. ಆದರೆ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ. ರವೀಂದ್ರ ಜಡೇಜಾ 2 ಓವರ್​ ಮಾಡಿ 10 ರನ್​ ನೀಡಿದ್ರೆ, ಅರ್ಷ್​​ದೀಪ್ ಸಿಂಗ್ ಸ್ವಲ್ಪ ದುಬಾರಿಯಾದರೂ ಒಂದು ವಿಕೆಟ್ ಪಡೆದುಕೊಂಡರು. 31 ರನ್​ ನೀಡಿ ಒಂದು ವಿಕೆಟ್ ಪಡೆದುಕೊಂಡರು. ಬೂಮ್ರಾ, ಸಿರಾಜ್ ಹಾಗೂ ಪಾಂಡ್ಯ ಅವರ ಭಯಂಕರ ಬೌಲಿಂಗ್​ನಿಂದಾಗಿ ಪಾಕಿಸ್ತಾನದ ವಿರುದ್ಧ ಭಾರತ ಮತ್ತೆ ಗೆದ್ದು ಬೀಗಿದೆ. ​

ಇದನ್ನೂ ಓದಿ:ಜೆಡಿಎಸ್​​ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್ ವಿರುದ್ಧ ಭಾರತ ಗೆಲ್ಲಲು ಕಾರಣ ಇವರೇ.. ಇಲ್ಲಿ ಗೆಲುವಿನ ಹೀರೋಗಳು ಮೂವರು..!

https://newsfirstlive.com/wp-content/uploads/2024/06/BHUMRH-ROHIT.jpg

Load More