newsfirstkannada.com

ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

Share :

Published June 8, 2024 at 1:29pm

  ಕ್ರಿಕೆಟ್​ ಶಿಶುವಿನ ಎದುರು ಪಾಕಿಸ್ತಾನಕ್ಕೆ ಮುಖಭಂಗ

  ಯುಎಸ್​​ಎ ಅಬ್ಬರ, ಮುಗ್ಗರಿಸಿದ ಪಾಕ್​ ಸ್ಟಾರ್ಸ್

  USA ಗೆಲುವಿನ ಹೀರೋಗಳ ರೋಚಕ ಜರ್ನಿ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನಿರೀಕ್ಷೆಯೂ ಮಾಡದಂತ ಮುಖಭಂಗಕ್ಕೆ ಒಳಗಾಗಿದೆ. ಕ್ರಿಕೆಟ್​ ಶಿಶು ಯುಎಸ್​​ಎ ತಂಡದ ಅಬ್ಬರದ ಆಟದ ಮುಂದೆ ಪಾಕ್​ ಪಡೆಯ ಸೂಪರ್​ ಸ್ಟಾರ್​​ಗಳು ಮುಗ್ಗರಿಸಿದ್ದಾರೆ. ಐತಿಹಾಸಿಕ ಗೆಲುವು ದಾಖಲಿಸಿದ ಅಮೆರಿಕಾವನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡ್ತಿದೆ. ಗೆಲುವಿನ ರೂವಾರಿಗಳಂತೂ ಕ್ರಿಕೆಟ್​ ಲೋಕದ ಹೀರೋಗಳಾಗಿದ್ದಾರೆ. ಆ ಹೀರೋಗಳ ಜರ್ನಿ ಅಷ್ಟು ರೋಚಕವಾಗಿದೆ.

ಗುಜರಾತ್​ನಿಂದ ನ್ಯೂಜೆರ್ಸಿಯವರೆಗೆ..!
ಪಾಕಿಸ್ತಾನ​ ವಿರುದ್ಧದ ಐತಿಹಾಸಿಕ ಗೆಲುವಿನ ರೂವಾರಿಯೇ ಯುಎಸ್​​ಎ ಕ್ಯಾಪ್ಟನ್​ ಮೊನಕ್​ ಪಟೇಲ್​. ಈತನ ಅರ್ಧಶತಕ, ಚುರುಕಿನ ನಾಯಕತ್ವ ಯುಎಸ್​ಎದ ಐತಿಹಾಸಿಕ ಗೆಲುವಿಗೆ ಕಾರಣವಾಯ್ತು. ಅಸಲಿಗೆ ಈ ಮೋನಕ್​ ಪಟೇಲ್​ ಮೂಲತಃ ಗುಜರಾತ್​ನವರು. ಅಂಡರ್​-19 ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ ಪ್ರತಿನಿಧಿಸಿದ ಕ್ರಿಕೆಟರ್​. ಆ ಬಳಿಕ ಯುಎಸ್​ಗೆ ಶಿಫ್ಟ್​ ಆದ ಈ ಮೊನಕ್​ ಪಟೇಲ್​ ಜೀವನ ನಡೆಸಲು ರೆಸ್ಟೋರೆಂಟ್​ ಬ್ಯುಸಿನೆಸ್​ ಆರಂಭಿಸಿದ್ರು. ಕ್ರಿಕೆಟ್​​ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ದಿನ 10 ರಿಂದ 12 ತಾಸು ರೆಸ್ಟೋರೆಂಟ್​ ಕಾಲ ಕಳೀತಿದ್ದ ಮೋನಕ್​​, ನಂತರದ ಸಮಯದಲ್ಲಿ ಕ್ರಿಕೆಟ್​ ಅಭ್ಯಾಸ ನಡೆಸ್ತಿದ್ರು.

ಇದನ್ನೂ ಓದಿ:ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊಲದೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..!

ಬದುಕು ಬದಲಿಸಿದ ತಾಯಿಯ ಕೊನೆಯ ಮಾತು..!
ಇದೇ ಸಮಯದಲ್ಲಿ ನಡುವೆ ರೆಸ್ಟೋರೆಂಟ್​​ ವಹಿವಾಟು ಕುಸಿತು. ಮೋನಕ್​ ತಾಯಿ ಕ್ಯಾನ್ಸರ್​​​ಗೆ ತುತ್ತಾಗಿದ್ರು. ಪರಿಣಾಮ ಹೋಟೆಲ್​ ಮಾರಿದ ಮೋನಕ್​ ಪಟೇಲ್​, ತಾಯಿಯನ್ನ ನೋಡಿಕೊಳ್ಳೋ ನಿರ್ಧಾರ ಮಾಡಿದ್ರು. ವಿಧಿಯಾಟ.. ಬ್ಯಾಂಕ್​​ನಲ್ಲಿ ಕೇವಲ 3 ಸಾವಿರ ಡಾಲರ್​ ಇಟ್ಟುಕೊಂಡು ಬಂದಾಗ, ತಾಯಿಯ ಕೊನೆಯುಸಿರೆಳೆದ್ರು. ಅದಕ್ಕೂ ಮುನ್ನ ಒಂದು ಮಾತು ಹೇಳಿದ್ರು. ಆಟವನ್ನ ಮುಂದುವರೆಸು, ಕಷ್ಟಪಟ್ಟು ಕೆಲಸ ಮಾಡು ಅಂತಾ. ಆ ಮಾತನ್ನ ಮೊನಕ್​ ಪಟೇಲ್​ ಪಾಲಿಸಿದ್ರು. ಇದೀಗ ಯಶಸ್ಸೂ ಸಿಕ್ಕಿದೆ.

ಅಮೆರಿಕಾದಲ್ಲಿ ಚಿಕ್ಕಮಗಳೂರಿನ ಹುಡುಗನ ಪರಾಕ್ರಮ..!
ಯುಎಸ್​ಎ ಗೆಲುವಿನ ಮತ್ತೊಬ್ಬ ಹೀರೋ ನೋಸ್ತುಶ್ ಕೆಂಜಿಗೆ ಕೂಡ ಮೂಲತಃ ಭಾರತೀಯ. ಹುಟ್ಟಿದ್ದು ಅಮೆರಿಕಾದಲ್ಲೇ. ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಈ ಆಟಗಾರನಿಗೆ ಭಾರತ ತಂಡದಲ್ಲಿ ಆಡೋ ಆಸೆಯಿತ್ತು. ಹೀಗಾಗಿ ತನ್ನ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಾಸ್ಸ್​​ ಬಂದಿದ್ರು. ಇಲ್ಲಿರೋ ಪೈಪೋಟಿಯ ನಡುವೆ ಅವಕಾಶ ಸಿಗೋದು ಕಷ್ಟ ಎಂದು ಗೊತ್ತಾಯ್ತು. ಇದಕ್ಕಾಗಿ 2015ರಲ್ಲಿ ಮತ್ತೆ ಅಮೆರಿಕಾಗೆ ವಲಸೆ ಹೋದ್ರು. ಭಾರತಕ್ಕೆ ಬಂದು ಹೋದ ಯಡವಟ್ಟು ಕೆಂಜಿಗೆಯನ್ನ 4 ವರ್ಷಗಳ ಕಾಲ ಎಕ್ಸ್​​ರೇ ಟೆಕ್ನಿಶಿಯನ್​ ಆಗಿ ಮಾಡಿಬಿಡ್ತು.

ಇದನ್ನೂ ಓದಿ:Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು

ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲು ಆ ದೇಶದ ನಾಗರೀಕನಾಗಿರಬೇಕು. ಜೊತೆಗೆ ಕನಿಷ್ಟ 4 ವರ್ಷಗಳ ಇದ್ದು, ಲೋಕಲೇಟ್​ ಅನಿಸಿಕೊಂಡಿರಬೇಕು. ಆಗ ಮಾತ್ರ ಆಡಲು ಅರ್ಹರಾಗ್ತಾರೆ. ಹೀಗಾಗಿ 4 ವರ್ಷಗಳ ಕಾಲ ಎಕ್ಸ್​​ರೇ ಟೆಕ್ನಿಷಿಯನ್​ ಆಗಿ ನೋಸ್ತುಶ್​​ ಕೆಂಜಿಗೆ ಕೆಲಸ ಮಾಡಿದ್ರು. ಹಗಲಿಡಿ ಎಕ್ಸ್​​ರೇ ಟೆಕ್ನಿಷಿಯನ್​ ಆಗಿ ಕೆಲಸ ಮಾಡ್ತಿದ್ದ ಕೆಂಜಿಗೆ, ಸಂಜೆ 7ರಿಂದ ರಾತ್ರಿ 10ರವರೆಗೆ ಅಭ್ಯಾಸ ನಡೆಸ್ತಾ ಇದ್ರು. ಈ ಕಠಿಣ ಪರಿಶ್ರಮದ ಫಲವೇ ಇಂದು ಯಶಸ್ಸು ತಂದುಕೊಟ್ಟಿದೆ.

2010ರ ಸೋಲಿಗೆ ಈಗ ಸೇಡು ತೀರಿಸಿಕೊಂಡ ಸೌರಭ್​..!
ಯುಎಸ್​​ಎ ಜಯದ ರಿಯಲ್​ ಹೀರೋ ಸೌರಭ್​ ನೇತ್ರಾವಲ್ಕರ್​ ಕೂಡ ಅಂಡರ್​​ 19 ವಿಶ್ವಕಪ್​​ನಲ್ಲಿ ಭಾರತದ ಆಟಗಾರನೇ. 2010ರ ಅಂಡರ್​ 19 ವಿಶ್ವಕಪ್​ನಲ್ಲಿ ಪಾಕ್​ ಎದುರು ಭಾರತ ಸೋತಿತ್ತು. ಆಗ ಪಾಕ್​ ತಂಡದಲ್ಲಿ ಬಾಬರ್​ ಇದ್ರೆ, ಭಾರತದ ಪರ ಸೌರಭ್​ ಇದ್ರು. ಆ ಸೋಲಿನ ಸೇಡನ್ನು 14 ವರ್ಷಗಳ ಬಳಿಕ ಸೌರಭ್​ ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!

ಅಂಡರ್​​ 19 ದಿನಗಳ ಬಳಿಕ ಭಾರತ ಬಿಟ್ಟ, ಸೌರಭ್​​ ಯುಎಸ್​​ಎಗೆ ವಲಸೆ ಹೋಗಿದ್ರು. ಅಲ್ಲೇ ಓದಿ ಒರಾಕಲ್​ನಲ್ಲಿ​​ ಇಂಜಿನಿಯರ್​ ಆಗಿದ್ದಾರೆ. ಇದ್ರ ಜೊತೆಗೆ ಅಮೆರಿಕಾ ತಂಡವನ್ನ ಪ್ರತಿನಿಧಿಸ್ತಾ ಇರೋ, ಈ ಸೌರಭ್​​ ಪಾಕ್​ ಎದುರು ಸೂಪರ್​ ಓವರ್​​ನಲ್ಲಿ ಭರ್ಜರಿ ಬೌಲಿಂಗ್​ ನಡೆಸಿದ್ರು. ಆ ಒಂದು ಓವರ್​​ನ ಆಟ ಐತಿಹಾಸಿಕ ಜಯಕ್ಕೆ ಕಾರಣವಾಯ್ತು.

ಇವರಿಷ್ಟೇ ಅಲ್ಲ.. ಇದೇ ತಂಡದಲ್ಲಿರೋ ಹರ್ಮಿತ್​ ಸಿಂಗ್​, ಮಿಲಿಂದ್​ ಕುಮಾರ್​ ಕೂಡ ಭಾರತದವರೇ. ಡೆಲ್ಲಿಯ ಮಿಲಿಂದ್​ ಕುಮಾರ್​​ ಸಿಕ್ಕಿಂ, ತ್ರಿಪುರಾ ಪರ ಫಸ್ಟ್​ ಕ್ಲಾಸ್​ ಕ್ರಿಕೆಟ್​ ಆಡಿದ್ದು, ಆರ್​​ಸಿಬಿ, ಡೆಲ್ಲಿ ಡೇರ್​ಡೆವಿಲ್ಸ್​ ತಂಡದಲ್ಲೂ ಇದ್ರು. ಹರ್ಮಿತ್​ ಸಿಂಗ್​, ಉನ್ಮುಕ್ತ್​​ ಚಾಂದ್ ನೇತೃತ್ವದ​ ಅಂಡರ್​ 19 ತಂಡ ಚಾಂಪಿಯನ್​ ಆದ ತಂಡದ ಸದಸ್ಯನಾಗಿದ್ರು. ಈ ಎಲ್ಲಾ ಭಾರತೀಯರು ಸೇರಿ, ಬದ್ಧವೈರಿ ಪಾಕಿಸ್ತಾನ ಪಡೆಯನ್ನ ಸೋಲಿಸಿದ್ದಾಗಿದೆ. ಭಾನುವಾರ ಅಸಲಿ ಟೀಮ್​ ಇಂಡಿಯಾ ಕೂಡ ಪಾಕ್​ನ ಸೋಲಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

https://newsfirstlive.com/wp-content/uploads/2024/06/MONAK-PATEL-1.jpg

Load More