newsfirstkannada.com

ಸೋಲಿನ ಬಳಿಕ ಪಾಕ್ ನಾಯಕ ಹೊಣೆ ಮಾಡಿದ್ದು ಯಾರನ್ನು..? ಪಂದ್ಯ ಮುಗಿದ ಬಳಿಕ ಸ್ಫೋಟಕ ಹೇಳಿಕೆ

Share :

Published June 10, 2024 at 8:51am

    ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ

    ಪಾಕ್ ವಿರುದ್ಧ ಭಾರತಕ್ಕೆ 6 ರನ್​ಗಳ ರೋಚಕ ಗೆಲುವು

    ವಿಶ್ವಕಪ್​​ನಲ್ಲಿ ಸತತ 2ನೇ ಗೆಲುವು ಸಾಧಿಸಿದ ಭಾರತ ತಂಡ

ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ, 19 ಓವರ್​ಗಳಲ್ಲಿ 119 ರನ್​ಗಳಿಗೆ ಆಲೌಟ್ ಆಯಿತು. ಪರಿಣಾಮ ಅಭಿಮಾನಿಗಳು ಗೆಲ್ಲುವ ಕನಸನ್ನು ಬಿಟ್ಟಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಅಮೋಘ ಆಟದಿಂದ ಪಾಕ್ ವಿರುದ್ಧ 6 ರನ್​ಗಳ ಗೆಲುವು ಸಾಧಿಸಿತು.

ಇದನ್ನೂ ಓದಿ:OBC 27, SC ಕಮ್ಯೂನಿಟಿಗೆ 10 ಸ್ಥಾನ.. ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ ಹೇಗಿದೆ..?

ಪಾಕಿಸ್ತಾನದ ಕಡೆಯಿಂದ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ಆಗಿದೆ. ಯಾವ ಆಟಗಾರನೂ ಕ್ರೀಸ್‌ನಲ್ಲಿ ಅಲ್ಪ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕ್ ಕ್ಯಾಪ್ಟನ್ ಬಾಬರ್ ಅಜಂ.. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಬ್ಯಾಟಿಂಗ್‌ನಲ್ಲಿ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡೆವು. ಸಾಕಷ್ಟು ಡಾಟ್ ಬಾಲ್‌ಗಳನ್ನು ಮಾಡಿದೆವು. ನಮ್ಮ ಪ್ಲಾನ್ ಸುಲಭವಾಗಿ ಆಡಿ ಗೆಲ್ಲುವ ತಂತ್ರವಾಗಿತ್ತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಡಾಟ್ ಬಾಲ್‌ ಮಾಡಿದರು. ಜೊತೆಗೆ ವಿಕೆಟ್​​ಗಳು ಉರುಳಿದವು, ನಾವು ನಿರೀಕ್ಷೆ ಮಾಡಿದಂತೆ ಆಗಲಿಲ್ಲ.

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

ಪಿಚ್ ಚೆನ್ನಾಗಿ ಕಾಣುತ್ತಿದೆ. ಚೆಂಡು ಚೆನ್ನಾಗಿ ಬರುತ್ತಿತ್ತು. ಸ್ವಲ್ಪ ನಿಧಾನವಾಗಿತ್ತು, ಕೆಲವು ಎಸೆತಗಳು ಹೆಚ್ಚುವರಿ ಬೌನ್ಸ್ ಹೊಂದಿದ್ದವು. ಕೊನೆಯ ಎರಡು ಪಂದ್ಯಗಳನ್ನು ನಾವು ಗೆಲ್ಲಲೇಬೇಕು. ತಪ್ಪುಗಳ ಬಗ್ಗೆ ಕುಳಿತು ಮಾತನಾಡುತ್ತೇವೆ. ಕೊನೆಯ ಎರಡು ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಟೀಂ ಇಂಡಿಯಾ ನೀಡಿದ್ದ 120 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಪಾಕಿಸ್ತಾನವು 7 ವಿಕೆಟ್ ಕಳೆದುಕೊಂಡು 113 ರನ್​ಗಳಿಸಿ ಸೋಲನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ:ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೋಲಿನ ಬಳಿಕ ಪಾಕ್ ನಾಯಕ ಹೊಣೆ ಮಾಡಿದ್ದು ಯಾರನ್ನು..? ಪಂದ್ಯ ಮುಗಿದ ಬಳಿಕ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/06/BABAR-AZAM-2.jpg

Load More