newsfirstkannada.com

ಉತ್ತರ ಪ್ರದೇಶಕ್ಕೆ ಬಂಪರ್​​, ಬಿಹಾರಕ್ಕೂ ಲಾಟರಿ.. ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ ಹೇಗಿದೆ..?

Share :

Published June 10, 2024 at 8:24am

Update June 10, 2024 at 9:29am

    ಮೋದಿ ಟೀಂ ಸೇರಿದ ಆರು ಮಾಜಿ ಸಿಎಂಗಳು

    OBC 27, SC ಕಮ್ಯೂನಿಟಿಗೆ 10 ಸ್ಥಾನ

    ಮೋದಿ 3.O ಸರ್ಕಾರದಲ್ಲಿ ಇವರಿಗೆ ಸಿಕ್ಕಿಲ್ಲ ಸ್ಥಾನ

ಹೊಸ ಕನಸು.. ಹೊಸ ದಿಕ್ಕು.. ಹೊಸ ಭವಿಷ್ಯ.. ಹೊಸ ಆಶಾಕಿರಣ.. ನರೇಂದ್ರ ಮೋದಿ ಸರ್ಕಾರದ ಮೇಲೆ ಜನವಿಟ್ಟ ವಿಶ್ವಾಸವಿದು.. ಆ ವಿಶ್ವಾಸಕ್ಕೆ ಸಿಕ್ಕಿದ್ದು ಮೂರನೇ ಬಾರಿಗೆ ಸಿಂಹಾಸನ.. ಜನರ ಆಶೋತ್ತರದಂತೆ ಇಡೀ ದೇಶದ ಬಹುತೇಕ ರಾಜ್ಯಗಳಿಗೆ ಸ್ಥಾನ ದಕ್ಕಿದೆ.. ಒಟ್ಟು 24 ರಾಜ್ಯಗಳಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಅನುಭವಿಗಳ ದಂಡು.. ಮೋದಿ ಟೀಂ ಸೇರಿದ ಆರು ಮಾಜಿ ಸಿಎಂಗಳು
ಈ ಬಾರಿಯ ಮೋದಿ ಸಂಪುಟದಲ್ಲಿ ಅನುಭವಿಗಳ ದಂಡೇ ಇದೆ.. ಒಟ್ಟು ಆರು ಜನ ಮಾಜಿ ಸಿಎಂಗಳಿಗೆ ಕೇಂದ್ರ ಸಂಪುಟದಲ್ಲಿ ಉನ್ನತ ದರ್ಜೆ ಸಿಕ್ಕಿದೆ. ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್​ ಚೌಹಾಣ್​, ರಾಜನಾಥ್​ ಸಿಂಗ್​, ಮನೋಹರ್​ ಲಾಲ್​ ಖಟ್ಟರ್​, ಹೆಚ್​.ಡಿ.ಕುಮಾರಸ್ವಾಮಿ, ಸೋರ್ಬಾನಂದ್​​ ಸೋನಾವಾಲ, ಜಿತನ್​ ರಾಂ ಮಾಂಝಿಗೆ ಸಂಪುಟ ದರ್ಜೆ ಮಿನಿಸ್ಟರ್​ ಆಗಿದ್ದಾರೆ.

ಇದನ್ನೂ ಓದಿ: ಪಾಕ್​ಗೆ 48 ಎಸೆತಗಳಲ್ಲಿ 48 ರನ್​ ಬೇಕಿತ್ತು.. 8 ವಿಕೆಟ್​ಗಳಿದ್ದವು.. ಪಂದ್ಯಕ್ಕೆ ಟರ್ನ್​ ಕೊಟ್ಟಿದ್ದು ಬೂಮ್ರಾ ತೆಗೆದ ಆ ವಿಕೆಟ್..!

ಉತ್ತರ ಪ್ರದೇಶಕ್ಕೆ ಬಂಪರ್​​, ಬಿಹಾರಕ್ಕೂ ಲಾಟರಿ
ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಬಲ ಕುಗ್ಗಿದ್ರೂ ಸಂಪುಟದಲ್ಲಿ ಮಾತ್ರ ಹಿಂದಿಗಿಂತಲೂ ಹೆಚ್ಚು ಸ್ಥಾನ ಸಿಕ್ಕಿದೆ.. ಪ್ರಧಾನಿ ಮೋದಿ ಸೇರಿ 11 ಮಂದಿ ಉತ್ತರ ಪ್ರದೇಶವನ್ನೇ ಪ್ರತಿನಿಧಿಸಲಿದ್ದಾರೆ. ಪಕ್ಕದ ಬಿಹಾರಕ್ಕೂ ಹೆಚ್ಚು ಆದ್ಯತೆ ನೀಡಿರುವ ಮೋದಿ, ಜೆಡಿಯು-ಬಿಜೆಪಿಯ ಒಟ್ಟು 8 ಜನ ಸಂಪುಟ ಸೇರಿದ್ದಾರೆ.. ಐದು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕೆ ಮಹಾರಾಷ್ಟ್ರಕ್ಕೂ ಹೆಚ್ಚು ಸ್ಥಾನ ಮೀಸಲಿಟ್ಟ ಮೋದಿ, ಆರು ಮಂತ್ರಿಗಳನ್ನ ನೀಡಿದ್ದಾರೆ. ಗುಜರಾತ್​, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನಕ್ಕೆ ತಲಾ ಐದು ಸ್ಥಾನ ದಕ್ಕಿದೆ.. ಕುತೂಹಲ ಅಂದ್ರೆ ಮೋದಿ ಸರ್ಕಾರದಲ್ಲಿ ಮೊದಲ ಬಾರಿಗೆ ಆಂಧ್ರಕ್ಕೆ 4, ತೆಲಂಗಾಣಕ್ಕೆ 2 ಸ್ಥಾನ ಸರ್ಪ್ರೈಸ್​​ ಗಿಫ್ಟ್​​ ಸಿಕ್ಕಿದೆ.

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

ಜಾತಿ ಸಮೀಕರಣ ಹೇಗಿದೆ?
ಒಟ್ಟು 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.. ಇದರಲ್ಲಿ ಜನರಲ್​​ ಕೆಟಗೆರಿ 25 ಸಂಸದರಿದ್ದಾರೆ. ಒಬಿಸಿಗೆ ಹೆಚ್ಚು ಆದ್ಯತೆ ಸಿಕ್ಕಿದ್ದು, 27 ಜನ ಮಂತ್ರಿಗಿರಿ ಪಡೆದಿದ್ದಾರೆ. ಎಸ್​​ಸಿ ಕಮ್ಯುನಿಟಿಗೆ 10, ಎಸ್​​ಟಿ ಸಮುದಾಯಕ್ಕೆ 5 ಜನರಿಗೆ ಸಚಿವ ಸ್ಥಾನ ದಕ್ಕಿದೆ. ಇತ್ತ ಅಲ್ಪಸಂಖ್ಯಾತ ಕ್ರಿಶ್ಚಿಯನ್​​​, ಸಿಖ್​​​, ಬೌದ್ಧ, ಜೈನ್​​​ ಸಮುದಾಯದ ಐವರು ಸಂಪುಟ ಸೇರಿದ್ದಾರೆ. ಮೋದಿ 3.O ಸರ್ಕಾರದಲ್ಲಿ ಮುಸ್ಲಿಮರಿಗೆ ಸ್ಥಾನ ಸಿಕ್ಕಿಲ್ಲ.
2014ರಲ್ಲಿ ಮೋದಿ ಪ್ರಮಾಣ ವಚನದಲ್ಲಿ 45 ಜನ ಸಚಿವರು ಪದಗ್ರಹಣ ಮಾಡಿದ್ರು. 2019ರಲ್ಲಿ ಈ ಸಂಖ್ಯೆ 57ಕ್ಕೆ ಏರಿಕೆ ಆಗಿತ್ತು. ಮೂರನೇ ಅವಧಿಯಲ್ಲಿ ಮೈತ್ರಿ ಮೇಲೆ ಅವಲಂಬನೆ ಕಾರಣ 71 ಸಚಿವರು ಪದಗ್ರಹಣ ಮಾಡಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ಕುಮಾರಸ್ವಾಮಿ ಪ್ರಮೋಷನ್​​​ನಿಂದ ಸಿದ್ದು, ಡಿಕೆಶಿಗೆ ಟೆನ್ಯನ್.. ಇನ್ಮೇಲೆ HDK ರಾಜ್ಯ ಸರ್ಕಾರಕ್ಕೆ ಹೇಗೆಲ್ಲ ಅನಿವಾರ್ಯ ಆಗ್ತಾರೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಪ್ರದೇಶಕ್ಕೆ ಬಂಪರ್​​, ಬಿಹಾರಕ್ಕೂ ಲಾಟರಿ.. ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ ಹೇಗಿದೆ..?

https://newsfirstlive.com/wp-content/uploads/2024/06/MODI-21.jpg

Load More