newsfirstkannada.com

ಕುಮಾರಸ್ವಾಮಿ ಪ್ರಮೋಷನ್​​​ನಿಂದ ಸಿದ್ದು, ಡಿಕೆಶಿಗೆ ಟೆನ್ಶನ್.. ಇನ್ಮೇಲೆ HDK ರಾಜ್ಯ ಸರ್ಕಾರಕ್ಕೆ ಹೇಗೆಲ್ಲ ಅನಿವಾರ್ಯ ಆಗ್ತಾರೆ?

Share :

Published June 10, 2024 at 7:27am

Update June 10, 2024 at 8:25am

  ಹಳೇ ಮೈಸೂರು ಭಾಗದಲ್ಲಿ ದಳಕ್ಕೆ ಹೊಸ ಚೈತನ್ಯ!

  ಸಿಎಂ ಸಿದ್ದು-ಡಿಕೆಶಿ ಜೋಡೆತ್ತಿಗೆ ಹೊಸ ಸವಾಲು

  ಸಕ್ಕರೆ ಸವಿಯುಂಡ ದಳಪತಿಗೆ ರಾಜಕೀಯ ಮರುಜನ್ಮ

ಜೆಡಿಎಸ್​​ ಅದೆಷ್ಟು ಬಾರಿ ಮುಳುಗಿದ್ದಿದೆ.. ಗೌಡರು ಸೋಲುಂಡು ಫಿನಿಕ್ಸ್​ನಂತೆ ಎದ್ದು ಬಂದು ದೇಶ ಆಳಿದ್ದು ಜಗತ್ತೆ ಕಂಡಿದೆ. ಅಂದ್ಹಾಗೆ ಒಂದೇ ವರ್ಷದ ಹಿಂದೆ ಜೆಡಿಎಸ್​​ ಯುಗ ಅಂತ್ಯ ಅಂತ ನಿತ್ಯ ಶರಾ ಬರೆಯುತ್ತಿದ್ದ ಕೈಗಳು, ಇವತ್ತು ಹೊಸ ಇತಿಹಾಸ ಬರೆಯುತ್ತಿವೆ.. ಮಂಡ್ಯದಲ್ಲಿ ಸಕ್ಕರೆ ಸವಿಯುಂಡ ದಳಪತಿಗೆ ರಾಜಕೀಯ ಮರುಜನ್ಮ ಸಿಕ್ಕಿದೆ.

ಹಳೇ ಮೈಸೂರು ಭಾಗದಲ್ಲಿ ದಳಕ್ಕೆ ಹೊಸ ಚೈತನ್ಯ!
ರಾಜಕೀಯವೇ ಹಾಗೇ ಇಲ್ಲಿ ಯಾವ ಹೊತ್ತು, ಯಾರಿಗೆ ಹೇಗೆ ಅದೃಷ್ಟ ಒಲಿಯುತ್ತೆ ಅನ್ನೋದು ಊಹೆಗೂ ನಿಲುಕದು.. ಸೋತ ದಳದ ಮೇಲೆ ಪ್ರಜ್ವಲ್ ಕೇಸ್​​​ ಮೂಲಕ ಮುಳುಗಿಸಲು ನಡೆದ ಯತ್ನಕ್ಕೆ ಸದ್ಯ ಹಿನ್ನಡೆ ಆಗಿದೆ. ಫಿನಿಕ್ಸ್​ನಂತೆ ಮತ್ತೆ ಮೈಕೊಡವಿ ಎದ್ದ ತೆನೆ ಪಾರ್ಟಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಂತಾಗಿದೆ. ದಳಪತಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದ್ದು, ಕೇವಲ ಜೆಡಿಎಸ್‌ಗೆ ಮಾತ್ರವಲ್ಲ, ಬಿಜೆಪಿಗೂ ದೊಡ್ಡ ಬಲ ತಂದಿದೆ.

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಐದಾರು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿನಲ್ಲಿ ಜೆಡಿಎಸ್ ಪಾತ್ರ ನಿಚ್ಚಳ ಅನ್ನೋದು ಕೇಂದ್ರ ನಾಯಕರಿಗೂ ಮನದಟ್ಟಾಗಿದೆ. ಹಾಗಾಗಿ ಎರಡೇ ಸ್ಥಾನ ಗೆದ್ದರೂ ಕುಮಾರಸ್ವಾಮಿಗೆ ಬಂಪರ್​​​ ಲಾಟರಿ ಹೊಡೆದಿದೆ.

ಹಳೇ ಮೈಸೂರಲ್ಲಿ ಕಾಂಗ್ರೆಸ್​​ಗೆ ಪ್ರಬಲ ಫೈಟ್​​!
ಅಂದ್ಹಾಗೆ ಮಾಜಿ ಸಿಎಂ ಕುಮಾರಸ್ವಾಮಿ ಈಗ ಕೇಂದ್ರ ಸಚಿವರು.. ಮಹತ್ವದ ಹುದ್ದೆಗೇರಿದ್ದಾರೆ.. ಅದರಲ್ಲೂ ಕೃಷಿ ಸಿಕ್ಕರೆ ಖುಷಿ ಅಂತ ಹೇಳಿದ್ದಾರೆ.. ಹೆಚ್​​ಡಿಕೆ ಪ್ರಮೋಷನ್​​​ನಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟೆನ್ಶನ್​​​ ಶುರುವಾಗಿದೆ. ಈವರೆಗೆ ಬದ್ಧವಿರೋಧಿಗಳಾಗಿ ಕಿತ್ತಾಡಿರುವ ಸಿಎಂ ಸಿದ್ದು, ಡಿಸಿಎಂ ಡಿಕೆಶಿಗೆ ಕೇಂದ್ರದ ಜತೆ ವ್ಯವಹರಿಸಲು ಹೆಚ್​​ಡಿಕೆ ಮಧ್ಯಸ್ಥಿಕೆ ಅನಿವಾರ್ಯ ಆಗಲಿದೆ. ಅದರಲ್ಲೂ ಕೇಂದ್ರದಲ್ಲಿ ಏನಾದ್ರೂ ಹೆಚ್​​ಡಿಕೆಗೆ ಕೃಷ್ಟಿ ಸ್ಥಾನ ಸಿಕ್ಕಲ್ಲಿ, ಮಂಡ್ಯದಲ್ಲಿ ಹೊಸ ಕಿತ್ತಾಟ ಶುರುವಾಗಲಿದೆ. ಕೃಷಿಗೆ ಸಂಬಂಧಿಸಿದ ಯೋಜನೆಗಳಿಗೆ ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ, ಕೈಕಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣ ಆಗಲಿದೆ.

ಇದನ್ನೂ ಓದಿ:ಕೇವಲ 5 ದಿನದಲ್ಲಿ 850 ಕೋಟಿ ರೂ ಗಳಿಕೆ..! CM ಆಗುವ ಮೊದಲೇ ಚಂದ್ರಬಾಬು ನಾಯ್ಡು ಕುಟುಂಬ ಶ್ರೀಮಂತ..!

ಒಟ್ಟಾರೆ, ಬಿಜೆಪಿ ಜೊತೆಗಿನ ವ್ಯವಹಾರವೇ ಬೇರೆ. ಹೆಚ್​​ಡಿಕೆ ಜೊತೆಗಿನ ವ್ಯವಹಾರವೇ ಬೇರೆ.. ಕಾಂಗ್ರೆಸ್​​​ನ ಜೋಡೆತ್ತಿನ ಸವಾಲು ಮೆಟ್ಟಿನಿಲ್ಲಲು ತಮ್ಮದೇ ನಾಯಕರಿಗಿಂತ ಜಿದ್ದಿನ ರಾಜಕಾರಣಿ ದಳಪತಿಯೇ ಲೇಸು ಅಂತ ಕೇಂದ್ರದಲ್ಲಿ ಮಹತ್ವದ ಸ್ಥಾನವನ್ನ ಮೋದಿ – ಶಾ ಜೋಡಿ ಕಲ್ಪಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಜಿದ್ದು, ಮತ್ತಷ್ಟು ಹಿಗ್ಗಲಿದೆ.. ಈ ಸವಾಲನ್ನು ಕಾಂಗ್ರೆಸ್ ಹೇಗೆ ನಿಭಾಯಿಸಲಿದೆ ಅನ್ನೋದು ರಾಜ್ಯ ರಾಜಕೀಯದ ಕುತೂಹಲ.

ಇದನ್ನೂ ಓದಿ:ಅಮ್ಮ ಸಾಯುವಾಗ ಹೇಳಿದ ಮಾತು ಜೀವನ ಬದಲಿಸಿತು -US ಗೆಲುವಿನ ಹೀರೋಗಳ ರೋಚಕ ಜರ್ನಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿ ಪ್ರಮೋಷನ್​​​ನಿಂದ ಸಿದ್ದು, ಡಿಕೆಶಿಗೆ ಟೆನ್ಶನ್.. ಇನ್ಮೇಲೆ HDK ರಾಜ್ಯ ಸರ್ಕಾರಕ್ಕೆ ಹೇಗೆಲ್ಲ ಅನಿವಾರ್ಯ ಆಗ್ತಾರೆ?

https://newsfirstlive.com/wp-content/uploads/2024/06/KUMARASWAMY.jpg

Load More