newsfirstkannada.com

ಸಂಪುಟ ಸೇರ್ಪಡೆಯಲ್ಲಿ ಕೆಲವು ಅಚ್ಚರಿ ಮುಖಗಳು.. ಸಚಿವ ಸ್ಥಾನಕ್ಕಾಗಿ 3 ತಿಂಗಳ ಗಡುವು ನೀಡಿದ ಈ ಮಿತ್ರಪಕ್ಷ..!

Share :

Published June 10, 2024 at 9:22am

    ಸಂಪುಟ ಸೇರಿದ ನಡ್ಡಾ.. ಮುಂದಿನ ಬಿಜೆಪಿ ಅಧ್ಯಕ್ಷ ಯಾರು?

    ಸಂಪುಟದಲ್ಲಿ ಇಲ್ಲ ಸ್ಥಾನ, ಈ ನಾಯಕರ ಭವಿಷ್ಯದ ಕಥೆ ಏನು..?

    ​ಒಡಿಶಾ ಸಿಎಂ ರೇಸ್​​ನಿಂದ ಹೊರಕ್ಕೆ ಬಿದ್ದ ಧರ್ಮೇಂದ್ರ ಪ್ರಧಾನ್​​​!

ಮೋದಿ ಪಟ್ಟಾಭಿಷೇಕ ಏನೋ ಆಯ್ತು.. 72 ಮಂದಿ ಸಚಿವರೂ ಆದ್ರು.. ಆದ್ರೆ, ಕೆಲವರು ಸಂಪುಟ ಸೇರ್ಪಡೆಯೂ ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಇನ್ನು ಕೆಲವರ ಆಸೆಗಳು ನಿರಾಸೆ ಆಗಿದ್ದು, ಆ ನಾಯಕರ ಸ್ಥಿತಿ ಡೋಲಾಯಮಾನ ಆಗಿದೆ.. ಇತ್ತ ಸ್ಥಾನ ಸಿಗದ ಕಾರಣ ಪವಾರ್​​ ಬಣದ ಮಾನ ಹರಾಜಾಗಿದೆ.

ಈ ಬಾರಿಯ ಮೋದಿ ಸಂಪುಟ ಅಚ್ಚರಿಗಳ ಆಗರ.. ನಿರೀಕ್ಷೆಯ ಭಾರ.. ದಾಖಲೆಗಳ ಸಾಗರ.. ಅಂದ್ಹಾಗೆ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರ ಸತತ ಮೂರು ಅವಧಿಯ ದಾಖಲೆಯನ್ನ ನರೇಂದ್ರ ಮೋದಿ ಸರಿಗಟ್ಟಿದ್ರು.. ಈ ಸಲ 72 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ರೆಕಾರ್ಡ್​​​ ಬರೆದ್ರು.. ಸಂಜೆ 7.15ಕ್ಕೆ ಆರಂಭವಾದ ಪದಗ್ರಹಣ, ರಾತ್ರಿ 9.50ಕ್ಕೆ ಮುಕ್ತಾಯವಾಯ್ತು.. ಬರೊಬ್ಬರಿ 155 ನಿಮಿಷಗಳ ಕಾಲ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಭವನ ಸಾಕ್ಷಿ ಆಯ್ತು..

ಇದನ್ನೂ ಓದಿ:ಸೋಲಿನ ಬಳಿಕ ಪಾಕ್ ನಾಯಕ ಹೊಣೆ ಮಾಡಿದ್ದು ಯಾರನ್ನು..? ಪಂದ್ಯ ಮುಗಿದ ಬಳಿಕ ಸ್ಫೋಟಕ ಹೇಳಿಕೆ

2014ರ ಮೋದಿ ಮೊದಲ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ನಡ್ಡಾ, 2020ರಲ್ಲಿ ಬಿಜೆಪಿ ಅಧ್ಯಕ್ಷರಾದ್ರು.. ಈಗ ಮೋದಿ ಸಂಪುಟಕ್ಕೆ ನಡ್ಡಾ ರೀ ಎಂಟ್ರಿ ಅಚ್ಚರಿಗೆ ಕಾರಣ ಆಗಿದೆ.. ಬಿಜೆಪಿ ಅಧ್ಯಕ್ಷ ಸ್ಥಾನದ ಅವಧಿ ಸಹ ಅಂತ್ಯ ಆಗ್ತಿದೆ. ಮೊನ್ನೆವರೆಗೆ ಶಿವರಾಜ್​​ ಚೌಹಾಣ್​​ ಹೆಸರು ಕೇಳಿ ಬರ್ತಿದ್ದು, ಈಗ ಅವರು ಸಹ ಮೋದಿ ಸಂಪುಟ ಸೇರಿದ್ದು, ನೂತನ ಸಾರಥಿ ಯಾರು ಎಂಬ ಚರ್ಚೆ ಶುರುವಾಗಿದೆ.

ಒಡಿಶಾ ಸಿಎಂ ರೇಸ್​​ನಿಂದ ಹೊರಕ್ಕೆ ಬಿದ್ದ ಧರ್ಮೇಂದ್ರ ಪ್ರಧಾನ್​​​!
ಒಡಿಶಾದಲ್ಲಿ ಐತಿಹಾಸಿಕ ವಿಜಯ ಪ್ರಾಪ್ತಿ ಪಡೆದ ಬಿಜೆಪಿ, ಈವರೆಗೆ ಸಿಎಂ ಯಾರು ಅನ್ನೋದನ್ನ ಘೋಷಿಸಿಲ್ಲ.. ಸಿಎಂ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್​ ಹೆಸರು ಮುಂಚೂಣಿಯಲ್ಲಿತ್ತು.. ಈಗ ಪ್ರಧಾನ್​​ ಸಹ ಮೋದಿ ಕ್ಯಾಬಿನೆಟ್​ ಸೇರಿದ್ದು, ಸಿಎಂ ರೇಸ್​​ನಿಂದ ಹೊರಕ್ಕೆ ಬಿದ್ದಿದ್ದಾರೆ.

ಇದನ್ನೂ ಓದಿ:OBC 27, SC ಕಮ್ಯೂನಿಟಿಗೆ 10 ಸ್ಥಾನ.. ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ ಹೇಗಿದೆ..?

ಈ ನಾಯಕರ ರಾಜಕೀಯ ಭವಿಷ್ಯದ ಕಥೆ ಏನು?
2014ರಲ್ಲಿ ಅಮೇಥಿ ಎಲೆಕ್ಷನ್​​ ಸೋತರೂ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದ ಸ್ಮೃತಿ ಇರಾನಿ ಈ ಸಲ ಹೊರಕ್ಕೆ ಬಿದ್ದಿದ್ದಾರೆ.. ಅಚ್ಚರಿ ಎಂಬಂತೆ ಅನುರಾಗ್​ ಠಾಕೂರ್​ಗೂ ಸ್ಥಾನ ಸಿಕ್ಕಿಲ್ಲ.. ಮಹಾರಾಷ್ಟ್ರ ಒಳ ರಾಜಕಾರಣದಿಂದ ನಾರಾಯಣ್​ ರಾಣೆ ಸ್ಥಾನ ವಂಚಿತರಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಸಚಿವ ಸ್ಥಾನ ಅನುಭವಿಸಿದ್ದ ರಾಜೀವ್​ ಚಂದ್ರಶೇಖರ್​ಗೆ ಈ ಬಾರಿ ಸೋಲು ಮಂತ್ರಿ ಸ್ಥಾನದಿಂದ ಮಿಸ್ಸಿಂಗ್​​ ಆಗಿದೆ.. ಇದೇ ಅವಸ್ಥೆ ಅಣ್ಣಾಮಲೈಗೂ ತಟ್ಟಿದೆ.. ಮಂತ್ರಿ ಸ್ಥಾನದ ನಿರೀಕ್ಷೆ ಹುಸಿ ಆಗಿದ್ದು, ತಮಿಳುನಾಡು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಆಜ್ಞೆ ಆಗಿದೆ.

ಸಚಿವ ಸ್ಥಾನಕ್ಕಾಗಿ 3 ತಿಂಗಳ ಗಡುವು ನೀಡಿದ ಅಜಿತ್​ ಪವಾರ್​
ಡೆಲ್ಲಿಯಲ್ಲಿ ಮೋದಿ ಪಟ್ಟಾಭಿಷೇಕ ಸಂಭ್ರಮದ ನಡುವೆ ಅಸಮಾಧಾನವೂ ಹೊಗೆಯಾಡಿದೆ.. ಎನ್‌ಸಿಪಿಯ ಅಜಿತ್ ಪವಾರ್ ಬಣ ಸಚಿವ ಸ್ಥಾನ ಸಿಗದಿದ್ದಕ್ಕೆ ನಿರಾಸೆ ಹೊರಹಾಕಿದೆ. ಕೇಂದ್ರ ಸಚಿವ ಸ್ಥಾನಕ್ಕೆ 3 ತಿಂಗಳು ಕಾಯುತ್ತೇವೆ ಅಂತ ಅಜಿತ್​ ಪವಾರ್​ ಬೇಡಿಕೆ ರೂಪದ ಗಡುವು ನೀಡಿದ್ದಾರೆ. ಒಟ್ಟಾರೆ, ಮಿತ್ರಪಕ್ಷಗಳಿಗೆ 11 ಸಚಿವ ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಪುಟ ಸೇರ್ಪಡೆಯಲ್ಲಿ ಕೆಲವು ಅಚ್ಚರಿ ಮುಖಗಳು.. ಸಚಿವ ಸ್ಥಾನಕ್ಕಾಗಿ 3 ತಿಂಗಳ ಗಡುವು ನೀಡಿದ ಈ ಮಿತ್ರಪಕ್ಷ..!

https://newsfirstlive.com/wp-content/uploads/2024/06/MODI-20.jpg

Load More