newsfirstkannada.com

ಪ್ರಧಾನಿ ಮೋದಿಯಿದ್ದ ಮೈಸೂರಿನ ಹೋಟೆಲ್​​ ​ಬಿಲ್‌ ಪಾವತಿಸಲಿದೆ ರಾಜ್ಯ ಸರ್ಕಾರ; ಏನಿದು ಸ್ಟೋರಿ?

Share :

Published May 28, 2024 at 9:50pm

    ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ

    'ಹುಲಿ ಯೋಜನೆ-50' ಕಾರ್ಯಕ್ರಮಕ್ಕಾಗಿ ಬಂದಿದ್ದ ಭಾರತದ ಪ್ರಧಾನಮಂತ್ರಿ

    ಮೈಸೂರಿನ ರಾಡಿಸನ್‌ ಬ್ಲ್ಯೂ ಹೋಟೆಲ್‌ನ ಬಿಲ್‌ ಬಾಕಿ ಮೊತ್ತ ಎಷ್ಟು?

ಬೆಂಗಳೂರು: ಪ್ರಧಾನಿ ಮೋದಿಯವರ 80 ಲಕ್ಷ ಬಿಲ್​ನ ರಾಜ್ಯ ಸರ್ಕಾರ ಕಟ್ಟುತ್ತಾ ಇದ್ಯಾ? ಹೀಗೊಂದು ಪ್ರಶ್ನೆ ನಿನ್ನೆಯಿಂದ ರಾಜ್ಯ ರಾಜಕೀಯದಲ್ಲಿ ಗಿರಕಿ ಹೊಡೀತಾ ಇದೆ. ಆದ್ರೆ ಇದು ನಿಜ ಅಂತ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಅವರು ಹೇಳುತ್ತಿದ್ದಾರೆ. ನಮ್ಮ ದೇಶದ ಹುಲಿ ಸಂರಕ್ಷಣೆ ಅಭಿಯಾನಕ್ಕಾಗಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಮೈಸೂರಿಗೆ ಬಂದಿದ್ದರು.

ಹೀಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಖಾಸಗಿ ಹೋಟೆಲ್​​ನಲ್ಲಿ ತಂಗಿದ್ದರು. ಪ್ರಧಾನಿಯವರು ದೇಶದ ಯಾವುದೇ ಖಾಸಗಿ ಹೋಟೆಲ್​ನಲ್ಲಿ ತಂಗಿದ್ರೆ, ಆ ಕಂಪ್ಲೀಟ್​ ಹೋಟೆಲ್​ನನ್ನು ಭದ್ರತಾ ಪಡೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೆ. ಹಾಗೇ ಇಲ್ಲೂ ಕೂಡ ಪ್ರಧಾನಿಯವರ ವಾಸ್ತವ್ಯ, ಊಟೋಪಚಾರ ಎಲ್ಲವೂ ಸೇರಿ ಒಟ್ಟಾರೆ ಬಿಲ್ 80 ಲಕ್ಷ ರೂಪಾಯಿ ಆಗಿತ್ತು.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಇದೇ ವಿಚಾರದ ಬಗ್ಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್​ ಖಂಡ್ರೆ, ಪ್ರಧಾನಮಂತ್ರಿ, ರಾಷ್ಟ್ರಪತಿಗಳಂತಹ ಗಣ್ಯರು ಬಂದಾಗ ಅವರಿಗೆ ಆತಿಥ್ಯ ನೀಡುವುದು ರಾಜ್ಯ ಸರ್ಕಾರದ ಸಂಪ್ರದಾಯ. ಕಳೆದ ವರ್ಷ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಕಾರಣ, ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವಾಗಿನಿಂದ ರಾಜ್ಯ ಸರ್ಕಾರವು ಕಾರ್ಯಕ್ರಮದ (ಪ್ರಾಜೆಕ್ಟ್ ಟೈಗರ್) ಯೋಜನೆಯಲ್ಲಿ ತೊಡಗಿಸಿಕೊಂಡಿಲ್ಲ.

ಹಾಗಾಗಿ ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿತ್ತು. ಆರಂಭದಲ್ಲಿ ಸುಮಾರು ₹3 ಕೋಟಿ ಖರ್ಚು ಮಾಡಲು ಯೋಜಿಸಿದ್ದರು. ಆದರೆ ಖರ್ಚು ₹6.33 ಕೋಟಿ ಆಗಿತ್ತು. ಹಾಗಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ₹3.3 ಕೋಟಿ ಬಾಕಿ ಬರಬೇಕಿದೆ. ಇದರ ಕುರಿತಾಗಿ ನಾವು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೆವು. National Tiger Conservation Authority ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಪ್ರಧಾನಿ ಉಳಿದುಕೊಂಡ ಹೋಟೆಲ್​​​​​​​​​​​​ ಹಾಗೂ ಊಟೋಪಚಾರದ ಬಿಲ್ ಆದ 80 ಲಕ್ಷವನ್ನು ರಾಜ್ಯ ಸರ್ಕಾರವೇ ಪಾವತಿಸುತ್ತೆ ಅಂತ ಈಶ್ವರ್​ ಖಂಡ್ರೆ ಸ್ಪಷ್ಟ ಪಡಿಸಿದ್ದಾರೆ. ಇದರಿಂದ ಏನು ಗೊಂದಲ ಹಾಗೂ ಪ್ರಶ್ನೆ ಓಡಾಡುತ್ತಾ ಇತ್ತು. ಅದಕ್ಕೆ ಒಂದು ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಯಿದ್ದ ಮೈಸೂರಿನ ಹೋಟೆಲ್​​ ​ಬಿಲ್‌ ಪಾವತಿಸಲಿದೆ ರಾಜ್ಯ ಸರ್ಕಾರ; ಏನಿದು ಸ್ಟೋರಿ?

https://newsfirstlive.com/wp-content/uploads/2024/03/pm-modi-2024-03-07T210801.633.jpg

Load More