/newsfirstlive-kannada/media/post_attachments/wp-content/uploads/2024/04/KMF.jpg)
ಬೆಂಗಳೂರು: ಮುಂಬರುವ T20 ವಿಶ್ವಕಪ್ನಲ್ಲಿ ನಂದಿನಿ ಉತ್ಪನ್ನಗಳನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಮಾಡಲು ಕರ್ನಾಟಕ ಹಾಲು ಒಕ್ಕೂಟ (KMF) ಮುಂದಾಗಿದೆ. ಆದರೆ ಭಾರತದ ಕ್ರಿಕೆಟ್ ತಂಡದ ಮೇಲೆ ಕೆಎಂಎಫ್ ಲೋಗೋ ಇರುವುದಿಲ್ಲ.
2024ರ T20 ವಿಶ್ವಕಪ್ ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದ್ದು ಜೂನ್ನಿಂದ ಟೂರ್ನಿ ಪ್ರಾರಂಭವಾಗಲಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಹಾಲನ್ನು ಬ್ರ್ಯಾಂಡ್ ಮಾಡಲು ಕೆಎಂಎಫ್ ಮುಂದಾಗಿದೆ. ಇದಕ್ಕಾಗಿ ವರ್ಲ್ಡ್ಕಪ್ನಲ್ಲಿ ಆಡುವ ಐರ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್ ಮಾಡುತ್ತಿದ್ದು ಎರಡು ಟೀಮ್ಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೋವನ್ನು ಅನಾವರಣ ಮಾಡಲಾಗಿದೆ. ಪಂದ್ಯ ನಡೆಯುವ ಸಮಯದಲ್ಲಿ ಜಾಹಿರಾತು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲಾಗುತ್ತದೆ.
ಇದನ್ನೂ ಓದಿ:ಕಿಂಗ್ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್ನಲ್ಲಿ ವಿರಾಟ್ ವಿಶ್ವರೂಪದ ರೆಕಾರ್ಡ್ ಹೇಗಿದೆ?
ವಿಶ್ವ ಮಟ್ಟದಲ್ಲಿ ಕರ್ನಾಟಕದ ನಂದಿನಿ ಉತ್ಪನ್ನಗಳನ್ನು ಪ್ರಚಾರ ಮಾಡಲು ಈ ನೂತನ ಪ್ರಯತ್ನವನ್ನು ಕೆಎಂಎಫ್ ಕೈಗೊಂಡಿದೆ. ವಿಶ್ವಕಪ್ನಲ್ಲಿ ದೊಡ್ಡ ದೊಡ್ಡ ಟೀಮ್ಗಳಿದ್ದರು ಸಣ್ಣ ತಂಡಗಳನ್ನು ಕೆಎಂಎಫ್ ಆಯ್ಕೆ ಮಾಡಿಕೊಂಡಿದೆ. ಏಕೆಂದರೆ ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಮುಂದಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ