newsfirstkannada.com

T20 ವಿಶ್ವಕಪ್​ನಲ್ಲಿ 2 ತಂಡದ ಜೆರ್ಸಿ ಮೇಲೆ KMF ಲೋಗೋ.. ಟೀಮ್ ಇಂಡಿಯಾದ ಮೇಲೂ ಇರುತ್ತಾ?

Share :

Published April 21, 2024 at 2:56pm

    ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್​ ಮಾಡಲು ಇದೀಗ ಹೊಸ ಯತ್ನ

    ಕರ್ನಾಟಕ ಹಾಲು ಒಕ್ಕೂಟದಿಂದ ‘ನಂದಿನಿ’ಗಾಗಿ ಮಹತ್ವದ ಹೆಜ್ಜೆ

    ವಿಶ್ವಕಪ್​ನಲ್ಲಿ ಯಾವ್ಯಾವ ತಂಡದ ಮೇಲೆ ಲೋಗೋ ಇರುತ್ತದೆ.?

ಬೆಂಗಳೂರು: ಮುಂಬರುವ T20 ವಿಶ್ವಕಪ್​ನಲ್ಲಿ ನಂದಿನಿ ಉತ್ಪನ್ನಗಳನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್​ ಮಾಡಲು ಕರ್ನಾಟಕ ಹಾಲು ಒಕ್ಕೂಟ (KMF) ಮುಂದಾಗಿದೆ. ಆದರೆ ಭಾರತದ ಕ್ರಿಕೆಟ್ ತಂಡದ ಮೇಲೆ ಕೆಎಂಎಫ್ ಲೋಗೋ ಇರುವುದಿಲ್ಲ.

2024ರ T20 ವಿಶ್ವಕಪ್​ ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದ್ದು ಜೂನ್​ನಿಂದ ಟೂರ್ನಿ ಪ್ರಾರಂಭವಾಗಲಿದೆ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಹಾಲನ್ನು ಬ್ರ್ಯಾಂಡ್​ ಮಾಡಲು ಕೆಎಂಎಫ್ ಮುಂದಾಗಿದೆ. ಇದಕ್ಕಾಗಿ ವರ್ಲ್ಡ್​ಕಪ್​ನಲ್ಲಿ ಆಡುವ ಐರ್ಲೆಂಡ್ ಮತ್ತು ಸ್ಕಾಟ್​ಲ್ಯಾಂಡ್​ ತಂಡಗಳಿಗೆ ಕೆಎಂಎಫ್​ ಸ್ಪಾನ್ಸರ್ ಮಾಡುತ್ತಿದ್ದು ಎರಡು ಟೀಮ್​ಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೋವನ್ನು ಅನಾವರಣ ಮಾಡಲಾಗಿದೆ. ಪಂದ್ಯ ನಡೆಯುವ ಸಮಯದಲ್ಲಿ ಜಾಹಿರಾತು ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲಾಗುತ್ತದೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

ವಿಶ್ವ ಮಟ್ಟದಲ್ಲಿ ಕರ್ನಾಟಕದ ನಂದಿನಿ ಉತ್ಪನ್ನಗಳನ್ನು ಪ್ರಚಾರ ಮಾಡಲು ಈ ನೂತನ ಪ್ರಯತ್ನವನ್ನು ಕೆಎಂಎಫ್ ಕೈಗೊಂಡಿದೆ. ವಿಶ್ವಕಪ್​ನಲ್ಲಿ ದೊಡ್ಡ ದೊಡ್ಡ ಟೀಮ್​ಗಳಿದ್ದರು ಸಣ್ಣ ತಂಡಗಳನ್ನು ಕೆಎಂಎಫ್ ಆಯ್ಕೆ ಮಾಡಿಕೊಂಡಿದೆ. ಏಕೆಂದರೆ ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಮುಂದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​ನಲ್ಲಿ 2 ತಂಡದ ಜೆರ್ಸಿ ಮೇಲೆ KMF ಲೋಗೋ.. ಟೀಮ್ ಇಂಡಿಯಾದ ಮೇಲೂ ಇರುತ್ತಾ?

https://newsfirstlive.com/wp-content/uploads/2024/04/KMF.jpg

Load More