Advertisment

ಮಳೆಯೋ ಮಳೆ.. ರಾಜ್ಯದ ಈ ಜಿಲ್ಲೆಗಳಿಗೆ ರೆಡ್​​ ಅಲರ್ಟ್​.. ಎಲ್ಲೆಲ್ಲಿ ಏನೆಲ್ಲ ಆಯ್ತು..?

author-image
Ganesh
Updated On
ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..
Advertisment
  • ಅವೈಜ್ಞಾನಿಕ ಕಾಮಗಾರಿ, ಮಿನಿ ಕೆರೆಯಾದ ಫ್ಲೈಓವರ್ ಕೆಳಭಾಗ
  • ವರುಣನ ಆರ್ಭಟ ಅವಾಂತರ ಸೃಷ್ಠಿ, ಕೆರೆಯಂತಾದ ರಸ್ತೆಗಳು
  • ಮಳೆಯಿಂದ ಕಾಲೋನಿಯಲ್ಲಿ ಸಮಸ್ಯೆ, ರಸ್ತೆ ತಡೆದು ಪ್ರತಿಭಟನೆ

ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿಲ್ಲಿ ನೈಋುತ್ಯ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬತ್ತಿ ಹೋಗಿದ್ದ ನದಿಗಳಿಗೆ ಜೀವ ಬಂದಿದೆ. ಕೆಲವರು ಸಂತಸ ಪಡುತ್ತಿದ್ರೆ, ಇನ್ನೂ ಕೆಲವರು ಸಂಕಟ ಅನುಭವಿಸುತ್ತಿದ್ದಾರೆ.

Advertisment

ಉಡುಪಿಯಲ್ಲಿ ಮಳೆಯ ಅಬ್ಬರ, ರೆಡ್ ಅಲರ್ಟ್ ಘೋಷಣೆ
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 55 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ 45 ರಿಂದ 55 ಕಿ.ಮೀ​ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರು ಮತ್ತು ಮೀನುಗಾರರಿಗೆ ಜಿಲ್ಲಾಡಳಿತ ಸೂಚಿಸಿದೆ.

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಇದೇ ತಪ್ಪು ಮುಂದುವರಿದ್ರೆ ಭಾರೀ ಕಷ್ಟ..!

publive-image

ಅವೈಜ್ಞಾನಿಕ ಕಾಮಗಾರಿ, ಮಿನಿ ಕೆರೆಯಾದ ಫ್ಲೈಓವರ್ ಕೆಳಭಾಗ
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಫ್ಲೈ ಓವರ್ ಕೆಳಗೆ ಅಪಾರ ಪ್ರಮಾಣದಲ್ಲಿ ನೀರು ನಿಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ನಗರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿದ ಫ್ಲೈ ಓವರ್​ನಲ್ಲಿ ನೀರು ಸಾಗಲು ಮಾರ್ಗ ಮಾಡದೇ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪನಿ ಕಾಮಗಾರಿಯನ್ನ ಮುಗಿಸಿತ್ತು. ಇನ್ನು ಕಳೆದ ಮೂರ್ನಾಲ್ಕು ದಿನದಿಂದ ಸುರಿದ ಬಾರಿ ಮಳೆಗೆ ಫ್ಲೈ ಓವರ್ ಕೆಳಗೆ ನೀರು ನಿಂತಿದ್ದು ಫ್ಲೈ ಓವರ್ ಕೆಳಗಿನ ಪ್ರದೇಶ ಕೆರೆಯಂತಾಗಿದೆ..

Advertisment

publive-image

ವರುಣನ ಆರ್ಭಟ ಅವಾಂತರ ಸೃಷ್ಠಿ, ಕೆರೆಯಂತಾದ ರಸ್ತೆಗಳು
ಬೀದರ್ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಬಸವಕಲ್ಯಾಣದ ಪ್ರಮುಖ ರಸ್ತೆಗಳು ಕೆರೆಯಂತಾಗಿ ಮಾರ್ಪಾಟ್ಟಿದ್ವು.. ಧಾರಾಕಾರವಾಗಿ ಸುರಿದ ಮಳೆಗೆ ನಗರದ ರಸ್ತೆಗಳ ಮೇಲೆ ಮಳೆ ನೀರು ಹರಿದಿದ್ದು, ಸಂಚರಿಸಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

publive-image

ಬರಡು ಭೂಮಿಯಾಗಿದ್ದ ಲುಂಬಿನಿ ಕೆರೆಗೆ ಬಂತೂ ಜೀವಕಳೆ
ಯಾದಗಿರಿ ನಗರದ ಹೃದಯಭಾಗದಲ್ಲಿರುವ ಲುಂಬಿನ ಗಾರ್ಡನ್ ಕೆರೆ ಸಂಪೂರ್ಣ ಖಾಲಿ ಖಾಲಿಯಾಗಿ ಬರಡು ಭೂಮಿಯಂತಾಗಿತ್ತು.‌ ಬಿಸಿಲಿನ ಆರ್ಭಟಕ್ಕೆ ಕೆರೆಯಲ್ಲಿದ್ದ ಬತ್ತಿ ಹೋಗಿತ್ತು.. ಇದೀಗ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೆರೆಗೆ ಜೀವಕಳೆ ಬಂದಿದೆ..

publive-image

ಧಾರವಾಡ ಸೇರಿದಂತೆ ನವಲಗುಂದ ಭಾಗಗಳಲ್ಲಿ ಮಳೆಯ ಅಬ್ಬರ
ಧಾರವಾಡ ಸೇರಿದಂತೆ ನವಲಗುಂದ ಭಾಗಗಳಲ್ಲಿ ಸುರಿದ ಮಳೆ ಆಗ್ತಿದೆ.. ಶಿರಕೋಳ ಹಾಗೂ ಹನಸಿ ಗ್ರಾಮಗಳ ಮನೆಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದು, ಸಂತ್ರಸ್ಥರಿಗೆ ಪರಿಹಾರದ ಭರವಸೆ ನೀಡಿದ್ದಾರೆ..

Advertisment

publive-image

ಮಳೆಯಿಂದ ಕಾಲೋನಿಯಲ್ಲಿ ಸಮಸ್ಯೆ, ರಸ್ತೆ ತಡೆದು ಪ್ರತಿಭಟನೆ
ವಿಜಯಪುರದ ಹಲವು ಕಾಲೋನಿಗಳಲ್ಲಿ ಮನೆಗೆ ಮಳೆ ನೀರು ನುಗ್ಗಿ ಜನ ಹೈರಾಣಾಗಿದ್ದಾರೆ.. ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಿಸ್ತಿರೋದ್ರಿಂದ ಈ ಅವಾಂತರ ಆಗಿದೆ.. ಹೀಗಾಗಿ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ..

ಇದನ್ನೂ ಓದಿ:ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment