ಕರ್ನಾಟಕ ಕಂದಾಯ ಇಲಾಖೆಯಲ್ಲಿ ಉದ್ಯೋಗವಕಾಶ.. ಅರ್ಜಿ ಸಲ್ಲಿಸಲು 3 ದಿನ ಬಾಕಿ

author-image
AS Harshith
Updated On
ಬೆಂಗಳೂರು ವಾಹನ ಸವಾರರೇ.. ಮಹಾಘಟಬಂಧನ್​ ಸಭೆಯ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ, ಬದಲಿ ಮಾರ್ಗ ಇಲ್ಲಿದೆ
Advertisment
  • ಸರ್ಕಾರಿ ಕೆಲಸ ಹುಡುಕುವವರಿಗೆ ಇಲ್ಲಿದೆ ಸುವರ್ಣಾವಕಾಶ
  • ಲಿಖಿತ ಪರೀಕ್ಷೆ ಬರೆಯುವ ಮೂಲಕ ನಡೆಯಲಿದೆ ಆಯ್ಕೆ ಪ್ರಕ್ರಿಯೆ
  • ಅರ್ಜಿ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ.. ಬೆಂಗಳೂರಲ್ಲೇ ಕೆಲಸ

ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ?. ಅದಕ್ಕಾಗಿಯೇ ತಯಾರು ಮಾಡಿಕೊಂಡಿದ್ದೀರಾ? ಅಂತವರಿಗಾಗಿ ಸಿಹಿಸುದ್ದಿ ಇಲ್ಲಿದೆ.  ಕರ್ನಾಟಕ ಕಂದಾಯ ಇಲಾಖೆಯಲ್ಲಿ (Karnataka Revenue Department) ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಆಗಸ್ಟ್​​ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಕೆಳಕಂಡ ಉದ್ಯೋಗಕ್ಕೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಗಲಿದೆ. ಜೊತೆಗೆ ಕೈ ತುಂಬಾ ಸಂಬಳ ಇರಲಿದೆ.

ಇದನ್ನೂ ಓದಿ: ಪದವೀಧರರಿಗೆ DRDO ಅಡಿ ಉದ್ಯೋಗಗಳು.. ಎಕ್ಸಾಂ ಇಲ್ಲ, ಬೆಂಗಳೂರಲ್ಲೇ ಸಂದರ್ಶನ; ಅಪ್ಲೇ ಮಾಡೋದು ಹೇಗೆ?

ಹುದ್ದೆಯ ಮಾಹಿತಿ: ಲೀಗಲ್‌ ಟೈಪಿಸ್ಟ್‌-1, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)-1

ವಿದ್ಯಾರ್ಹತೆ: ಲೀಗಲ್‌ ಟೈಪಿಸ್ಟ್‌- ಎಲ್‌ಎಲ್‌ಬಿ, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- CSE/ISನಲ್ಲಿ ಬಿಇ, ಪಿಜಿ ಡಿಪ್ಲೊಮಾ ಮಾಡಿರಬೇಕು

ವೇತನ:

ಲೀಗಲ್‌ ಟೈಪಿಸ್ಟ್‌- ಮಾಸಿಕ ₹ 18,700

ಐಟಿ ಪ್ರೊಫೆಶನಲ್-2(ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- ಮಾಸಿಕ ₹ 50,000

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಲಿಖಿತ ಪರೀಕ್ಷೆ ಬರೆಯುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಜೊತೆಗೆ ಸಂದರ್ಶನ ಕೂಡ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಿದೆ. ಅದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್ ​kandaya.karnataka.gov.in ಗೆ ಭೇಟಿ ನೀಡಿ. ನಂತರ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ. ನಂತರ ಸರಿಯಾದ ವಿಳಾಸಕ್ಕೆ ಅರ್ಜಿ ನಮೂನೆ ಕಳುಹಿಸಿ

ವಿಳಾಸ:

ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ
ಪೋಡಿಯಂ ಬ್ಲಾಕ್, 3ನೇ ಮಹಡಿ
ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment